
ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ 88 ವರ್ಷದ ಅಯತೊಲ್ಲಾ ಅಲಿ ಖಮೇನಿ ಸಾವು ಆಗಿರೋದನ್ನು ಮಾಧ್ಯಮಗಳು ದೃಢಪಡಿಸಿವೆ. ಕಚೇರಿಯಲ್ಲಿ ಸಭೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಅಂದ್ರೆ ಶನಿವಾರ ಬೆಳಗಿನ ಜಾವವೇ ಅಯತೊಲ್ಲಾ ಅಲಿ ಖಮೇನಿ ಕೊಲ್ಲಲ್ಪಟ್ಟಿದ್ದಾರೆ. ಇಸ್ರೇಲ್ ಒಂದೇ ಬಾರಿಗೆ ಸುಮಾರು 200ಕ್ಕೂ ಅಧಿಕ ಕ್ಷಿಪಣಿಗಳ ಮೂಲಕ ಇರಾನ್ ಮೇಲೆ ದಾಳಿ ನಡೆಸಿತ್ತು. ಹತ್ಯೆಯಾಗಿರುವ ಅಯತೊಲ್ಲಾ ಅಲಿ ಖಮೇನಿ, ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧದ ನಿಲುವು ಹೊಂದಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಶಿಯಲ್ ಮೀಡಿಯಾ ಮೂಲಕ ಅಲಿ ಖಮೇನಿಯ ಹತ್ಯೆಯಾಗಿದೆ ಎಂದು ದೃಢಪಡಿಸಿದ್ದರು. ಆದ್ರೆ ಇರಾನ್ ಆರಂಭದಲ್ಲಿ ಇದನ್ನು ಒಪ್ಪಿಕೊಂಡಿರಲಿಲ್ಲ.
ನಿವಾಸದ ಮೇಲೆ ನಡೆದ ಪ್ರಬಲ ಬಾಂಬ್ ದಾಳಿಯಲ್ಲಿ ಖಮೇನಿ ಮತ್ತು ಅವರ ಕುಟುಂಬ ಸಾವನ್ನಪ್ಪಿದೆ. ಖಮೇನಿ ಅವರ ಮಗಳು, ಮೊಮ್ಮಗಳು ಮತ್ತು ಅಳಿಯ ಕೂಡ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇರಾನ್‌ನಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ ನಿಧನಕ್ಕೆ 40 ದಿನಗಳ ಶೋಕಾಚರಣೆ, ಏಳು ದಿನಗಳ ರಜೆ ಘೋಷಿಸಲಾಗಿದೆ. ಇದೇ ದಾಳಿಯಲ್ಲಿ ಇರಾನ್ ದೇಶದ ಪ್ರಮುಖ ಹಿರಿಯ ಸೇನಾಧಿಕಾರಿಗಳು ಕೊಲ್ಲಲ್ಪಟ್ಟಿದ್ದಾರೆ. ಅಲಿ ಶಮ್ಖಾನಿ, ಮೊಹಮ್ಮದ್ ಪಕ್‌ಪೋರ್, ಸಲೇಹ್ ಆಜಾದಿ, ಮೊಹಮ್ಮದ್, ಶಿರಾಜಿ, ಅಜೀಜ್ ನಾಸಿರ್ಜಾದೆ, ಹೊಸೇನ್ ಜಬಲ್ ಅಸೆಲಿನ್ ಮತ್ತು ರೆಝೆ ಮೊಜಾಫರಿ ನಿಯಾ ಅವರನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿದೆ.
ಇದನ್ನೂ ಓದಿ: ಇರಾನ್‌ನ 500ಕ್ಕೂಹೆಚ್ಚು ಕಡೆ ಇಸ್ರೇಲ್- ಅಮೆರಿಕ ದಾಳಿ । 200 ಬಲಿ
ಅಲಿ ಖಮೇನಿ ಅವರನ್ನು ಅವರ ಕಚೇರಿಯಲ್ಲಿಯೇ ಹತ್ಯೆ ಮಾಡಲಾಗಿದೆ. ಇರಾನ್ ಮೇಲಿನ ಮಿಲಿಟರಿ ದಾಳಿ ಮುಂದುವರೆದಿದೆ ಎಂದು ಅಮೆರಿಕದ ಕೇಂದ್ರ ಕಮಾಂಡ್ ಘೋಷಿಸಿದೆ. ಇರಾನ್ ವಿರುದ್ಧ ಮಿಲಿಟರಿ ಕ್ರಮ ಈ ವಾರ ಪೂರ್ತಿ ಮುಂದುವರಿಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಅಯತೊಲ್ಲಾ ಅಲಿ ಖಮೇನಿ ಸತ್ತಿದ್ದು ನಿಜ, ಟ್ರಂಪ್ ಸ್ಫೋಟಕ ಹೇಳಿಕೆ! ಇರಾನ್‌ನ ಟಾಪ್ ಲೀಡರ್‌ಗಳೂ ಖಲಾಸ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ