
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(US President Dontal trump) ಅಳಿಯನ ಮೊಬೈಲ್ ಫೋನ್ ಹ್ಯಾಕ್ ಮಾಡಲಾಗಿದ್ದು, ಸೌದಿ ಅರೇಬಿಯಾ ಮತ್ತು ಯುಎಇ ಜೊತೆಗಿನ ರಹಸ್ಯ ಒಪ್ಪಂದ ಬಯಲಾಗುವ ಮೂಲಕ ಅಮೆರಿಕದ ರಾಜಕೀಯದಲ್ಲಿ ಮತ್ತು ಜಾಗತಿಕವಾಗಿ ಕೋಲಾಹಲ ಸೃಷ್ಟಿಸಿದೆ.
ಡೊನಾಲ್ಡ್ ಟ್ರಂಪ್ ಅವರ ಅಳಿಯ ಅಷ್ಟೇ ಅಲ್ಲದೆ ಮೊದಲ ಆಡಳಿತವಿದ್ದಾಗ ಹಿರಿಯ ಸಲಹೆಗಾರರಾಗಿದ್ದ ಜೇರೆಡ್ ಕುಶ್ನರ್. ಇದೀಗ ಜೇರೆಡ್ ಅವರ ಮೇಲೆ ಗಲ್ಫ್ ದೇಶಗಳಿಗೆ ಸಂಬಂಧಿಸಿದ ರಹಸ್ಯ ಮತ್ತು ಅಕ್ರಮ ಹಣಕಾಸು ವಹಿವಾಟುಗಳ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರಸಿದ್ಧ ನಿಯತಕಾಲಿಕೆ 'ವ್ಯಾನಿಟಿ ಫೇರ್'(Vanity Fair) ನಲ್ಲಿ ಪ್ರಕಟವಾದ ಸೂಕ್ಷ್ಮ ವರದಿ ಸಂಚಲನ ಸೃಷ್ಟಿಸಿದೆ.
ವರದಿಯ ಪ್ರಕಾರ, ಟ್ರಂಪ್ ಅವರ ಮೊದಲ ಅವಧಿಯಲ್ಲಿ ಡಚ್ ಗುಪ್ತಚರ ಇಲಾಖೆಯು ಕುಶ್ನರ್ ಅವರ ಐಫೋನ್ ಹ್ಯಾಕ್ ಮಾಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಈ ಹ್ಯಾಕಿಂಗ್ ಸಮಯದಲ್ಲಿ ಮಧ್ಯಪ್ರಾಚ್ಯದ ದೇಶಗಳಿಗೆ ಸಂಬಂಧಿಸಿದ ರಹಸ್ಯ ವಹಿವಾಟುಗಳ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ ಎಂದು ವರದಿ ಹೇಳಿದೆ.
ಪತ್ರಕರ್ತ ಮ್ಯಾಥ್ಯೂ ಕೋಲ್ ಅವರ ಮುಂಬರುವ ಪುಸ್ತಕ Princes and Thieves: ಜೇರೆಡ್ ಕುಶ್ನರ್ ಮತ್ತು ಮೊಹಮ್ಮದ್ ಬಿನ್ ಜಾಯೆದ್(Jared Kushner with Mohamed bin Zayed) ಅವರ ರಹಸ್ಯ ಪ್ಲಾಟ್ ಟು ರೀಶೇಪ್ ದಿ ಮಿಡಲ್ ಈಸ್ಟ್(Plot to Reshape the Middle East) ನ ಆಯ್ದ ಭಾಗಗಳನ್ನು ವರದಿ ಉಲ್ಲೇಖಿಸಿದೆ. ಪುಸ್ತಕದ ಪ್ರಕಾರ, ಜೇರೆಡ್ ಕುಶ್ನರ್ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸಂಬಂಧಿಸಿದ ವಿಶೇಷ ಬ್ಯಾಂಕ್ ಖಾತೆಗೆ ಪ್ರವೇಶ ಮತ್ತು ಅಧಿಕೃತ ಸಹಿ ಅಧಿಕಾರವನ್ನು ನೀಡಲಾಯಿತು. ಅಜರ್ಬೈಜಾನ್ನ ಬ್ಯಾಂಕ್ ಮೂಲಕ ಈ ಖಾತೆಗೆ ಶತಕೋಟಿ ಡಾಲರ್ಗಳನ್ನು ಜಮಾ ಮಾಡಲಾಗಿದೆ.
ವರದಿಯ ಪ್ರಕಾರ ಅಬುಧಾಬಿಯ ಫಸ್ಟ್ ಅಬುಧಾಬಿ ಬ್ಯಾಂಕ್ನಲ್ಲಿರುವ ವಟಾನಿ ಅಲ್ ಎಮಿರೇಟ್ ಫೌಂಡೇಶನ್ನ ಖಾತೆಗೆ ಸುಮಾರು $750 ಮಿಲಿಯನ್ ಮೊತ್ತವನ್ನು ವರ್ಗಾಯಿಸಲಾಗಿದೆ. ಈ ಸಂಸ್ಥೆಗೆ ಯುಎಇ ಸರ್ಕಾರವು ಸಬ್ಸಿಡಿ ನೀಡುತ್ತದೆ. ಈ ಖಾತೆಯ ಮೂಲ ಮಾಲೀಕರು ಕುಶ್ನರ್ ಅಲ್ಲದಿದ್ದರೂ, ಅದರ ಮೂಲಕ ಮಾಡಿದ ವಹಿವಾಟುಗಳಲ್ಲಿ ಅವರ ಅಧಿಕೃತ ಸಹಿಯನ್ನು ಬಳಸಲಾಗಿದೆ ಎಂದು ವರದಿಯು ನೇರವಾಗಿ ಹೇಳುತ್ತದೆ .
ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಮತ್ತು ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಕುಶ್ನರ್ ಅವರ ವಿವಿಧ ಖಾತೆಗಳಿಗೆ ಒಟ್ಟು $2 ಬಿಲಿಯನ್ಗಿಂತಲೂ ಹೆಚ್ಚು ಹಣವನ್ನು ಠೇವಣಿ ಮಾಡಿದ್ದಾರೆ ಎಂದು ವರದಿ ಆರೋಪಿಸಿದೆ . ಪ್ರತ್ಯೇಕ ಆಪಾದಿತ ವಹಿವಾಟಿನ ಮೂಲಕ ಕುಶ್ನರ್ ಅವರ ವೈಯಕ್ತಿಕ ಲಾಭಕ್ಕಾಗಿ $1 ಬಿಲಿಯನ್ ವರ್ಗಾಯಿಸಲಾಗಿದೆ ಎಂದು ಅದು ಹೇಳುತ್ತದೆ. ಆದರೂ ಈ ಆರೋಪಗಳನ್ನು ಬೆಂಬಲಿಸಲು ಯಾವುದೇ ಅಧಿಕೃತ ಮತ್ತು ಸಾರ್ವಜನಿಕವಾಗಿ ಪರಿಶೀಲಿಸಿದ ಬ್ಯಾಂಕ್ ದಾಖಲೆಗಳು ಅಥವಾ ದಾಖಲೆಗಳು ಇನ್ನೂ ಹೊರಬಂದಿಲ್ಲ.
ಮತ್ತೊಂದೆಡೆ ಜೇರೆಡ್ ಕುಶ್ನರ್ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' (ಹಿಂದೆ ಟ್ವಿಟರ್)ಯಲ್ಲಿ ಪೊಸ್ಟ್ ಮಾಡಿರುವ ಕುಶ್ನರ್ ಈ ಎಲ್ಲಾ ಹೇಳಿಕೆಗಳು ಸಂಪೂರ್ಣ ಸುಳ್ಳು, ಕಟ್ಟುಕಥೆ ಎಂದು ಸ್ಪಷ್ಟಪಡಿಸಿದ್ದಾರೆ.ಬ್ಯಾಂಕ್ ಹೇಳಿಕೆಗಳು, ವರ್ಗಾವಣೆ ದಾಖಲೆಗಳು, ಖಾತೆ ಸಂಖ್ಯೆಗಳು ಅಥವಾ ಯಾವುದೇ ವಹಿವಾಟು ದಿನಾಂಕಗಳಂತಹ ಯಾವುದೇ ನೈಜ ಎವಿಡೆನ್ಸ್ ಅನ್ನು ವರದಿಯು ನೀಡಿಲ್ಲ ಎಂದಿದ್ದಾರೆ. ಅಲ್ಲದೆ ಕುಶ್ನರ್ ಅವರ ವಕೀಲ ಚಾಡ್ ಮಿಜೆಲ್ ಕೂಡ ಇದಕ್ಕೆ ಪ್ರತಿಕ್ರಿಯಿಸಿ ಅಂತಹ ಯಾವುದೇ ಬ್ಯಾಂಕ್ ಖಾತೆಗಳು ಅಸ್ತಿತ್ವದಲ್ಲಿಲ್ಲ, ಈ ಮಾನಹಾನಿಕರ ವರದಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ