ಸೋಶಿಯಲ್ ಮೀಡಿಯಾ ಬ್ಲಾಕ್ಔಟ್ ಚಾಲೆಂಜ್‌ಗೆ ಬಾಲಕಿ ಬಲಿ, ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ

Published : Mar 24, 2026, 11:03 AM IST
Texas minor girl dies by social Media challenge

ಸಾರಾಂಶ

ಸೋಶಿಯಲ್ ಮೀಡಿಯಾ ಬ್ಲಾಕ್ಔಟ್ ಚಾಲೆಂಜ್‌ಗೆ ಬಾಲಕಿ ಬಲಿ, ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ, ಈ ಚಾಲೆಂಜ್ ಗೇಮ್ ಅತ್ಯಂತ ಅಪಾಯಕಾರಿಯಾಗಿದೆ. ಎನೂ ಅರಿವಿಲ್ಲದ ಮಕ್ಕಳು ರೀಲ್ಸ್ ಸೇರಿ ಸೋಶಿಯಲ್ ಮೀಡಿಯಾದಲ್ಲಿ ಕಾಲ ಕಳೆಯುತ್ತಿದ್ದರೆ ಎಚ್ಚರವಹಿಸುವುದು ಸೂಕ್ತ.

ಟೆಕ್ಸಾಸ್ (ಮಾ.24) ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರೂ ಹೆಚ್ಚು ಕಾಲ ಕಳೆಯುತ್ತಾರೆ. ರೀಲ್ಸ್, ವಿಡಿಯೋ, ಗೇಮಿಂಗ್, ಪೋಸ್ಟ್ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಯುವ ಸಮೂಹ ಹಾಗೂ ಮಕ್ಕಳು ಈ ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚು ಬಳಕೆ ಮಾಡುತ್ತದೆ. ಮಕ್ಕಳು ಈ ಸೋಶಿಯಲ್ ಮೀಡಿಯಾ ಚಟಕ್ಕೆ ಬಲಿಯಾಗುತ್ತಿದ್ದಾರೆ. ರೀಲ್ಸ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳು ಹೆಚ್ಚು ತೊಡಗಿಸಿಕೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿಯಾಗುತ್ತಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಅಪಾಯಕಾರಿಯಾಗಿರುವ ಬ್ಲಾಕ್ಔಟ್ ಚಾಲೆಂಜ್ ಆಡುತ್ತಿದ್ದ 9 ವರ್ಷದ ಬಾಲಕಿ ಶವವಾಗಿ ಪತ್ತೆಯಾದ ಘಟನೆ ಅಮೆರಿಕ ಟೆಕ್ಸಾಸ್‌ನಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಬಾಲಕಿ ಪೋಷಕರು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ.

ಸಿಂಗರ್ ಆಗಬೇಕೆಂದು ಕನಸು ಕಂಡು ಯೂಟ್ಯೂಬ್ ನೋಡಲು ಆರಂಭಿಸಿದ್ದ ಬಾಲಕಿ

ಟೆಕ್ಸಾಸ್ ನಿವಾಸಿಗಳಾದ ಕರ್ಟಿಸ್ ಹಾಗೂ ವೆಂಡಿ ಬ್ಲಾಕ್‌ವೆಲ್ ದಂಪತಿಯ ಪುತ್ರಿ 9 ವರ್ಷದ ಜಾಕ್ಲಿನ್ ಕಯೆ ಬ್ಲಾಕ್‌ವೆಲ್ ದುರಂತ ಅಂತ್ಯಕಂಡಿದ್ದಾಳೆ. ಹಾಡಿನಲ್ಲಿ ಅತೀವ ಆಸಕ್ತಿ ಹೊಂದಿದ್ದ ಜಾಕ್ಲಿನ್ ಯೂಟ್ಯೂಬ್ ಸೇರಿದಂತೆ ಇತರ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಸಿದ್ದ ಹಾಡುಗಾರರ ವಿಡಿಯೋಗಳನ್ನು ನೋಡಿ ಕಲಿಯುತ್ತಿದ್ದರು. ಇದರ ನಡುವೆ ಸೋಶಿಯಲ್ ಮೀಡಿಯಾ, ರೀಲ್ಸ್ ಸೇರಿದಂತೆ ಇತರ ವಿಡಿಯೋಗಳು, ಗೇಮ್‌ಗಳ ಕುರಿತು ಆಸಕ್ತಿ ಬೆಳೆಯುತ್ತಾ ಹೋಗಿ ಕೊನೆಗೆ ಇದೇ ಅಪಾಯಕಾರಿ ಗೇಮ್‌ಗೆ ಬಲಿಯಾಗಿದ್ದಾಳೆ.

ಬ್ಲಾಕ್‌ಔಟ್ ಚಾಲೆಂಜ್ ಸ್ವೀಕರಿಸಿದ ಬಾಲಕಿ ಸಾವು

ಸೋಶಿಯಲ್ ಮೀಡಿಯಾದ ಅಪಾಯಕಾರಿ ಬ್ಲಾಕ್ಔಟ್ ಚಾಲೆಂಜ್ ಗೇಮ್ ಸ್ವೀಕರಿಸಿ ಆಡಿದ ಈ ಬಾಲಕಿ ತಂತಿಯ ಸಹಾಯದಿಂದ ತಾನೇ ಉಸಿರುಗಟ್ಟಿಸಿ ಬದುಕು ಅಂತ್ಯಗೊಳಿಸಿದ್ದಾಳೆ. ಈ ಗೇಮ್ ಮಕ್ಕಳನ್ನೇ ಟಾರ್ಗೆಟ್ ಮಾಡಿರುವ ಗೇಮ್. ಇಲ್ಲಿ ಮಕ್ಕಳೇ ಬಲಿಪಶುಗಳು. ಏನೂ ಅರಿಯದ ಮಕ್ಕಳು ಗೇಮ್‌ನಲ್ಲಿ ಸಿಲುಕಿ ಬಲಿಯಾಗುತ್ತಿದ್ದಾರೆ.

ಘಟನೆ ಹೇಗಾಯಿತು?

ಕರ್ಟಿಸ್ ದಂಪತಿಗೆ ಒಬ್ಬಳೆ ಮಗಳು. ಜಾಕ್ಲಿನ್ ಅತ್ಯಂತ ಪ್ರತಿಭಾವಂತೆಯಾಗಿದ್ದಳ. ಸಿಂಗರ್ ಆಗಬೇಕೆಂದು ಪ್ರಸಿದ್ಧ ಗಾಯಕ ಗಾಯಕಿಯರ ಹಾಡು ಯೂಟ್ಯೂಬ್ ಮೂಲಕ ನೋಡಿ ಕಲಿಯುತ್ತಿದ್ದಳು. ಇದರ ನಡುವೆ ಸೋಶಿಯಲ್ ಮೀಡಿಯಾ, ರೀಲ್ಸ್ ನೋಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಳು. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹೊತ್ತು ಕಳೆಯಲು ಆರಂಭಿಸಿದ ಈಕೆ ಬ್ಲಾಕ್ಔಟ್ ಅಪಾಯಕಾರಿ ಗೇಮ್ ಚಾಲೆಂಜ್ ಸ್ವೀಕರಿಸಿದ್ದಳು.

ಶಾಲೆಗೆ ಲೇಟ್ ಆಗುತ್ತಿದ್ದರೂ ಮಗಳು ಎದ್ದಬರಲಿಲ್ಲ ಎಂದು ನೋಡಲು ಹೋದರೆ ಬೆಡ್‌ರೂಂನಲ್ಲಿ ಮಗಳು ಇರಲಿಲ್ಲ. ಈ ವೇಳೆ ಜಾಕ್ಲಿನ್ ಮನೆಯ ಹಿತ್ತಲಿನ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು.ಕಿರುಚಾಟ ಕೇಳಿ ಓಡೋಡಿ ಬಂದ ತಂದೆ ಆಕೆಗೆ ಸಿಪಿಆರ್ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಮಗಳು ಬದುಕುಳಿಯಲಿಲ್ಲ. ಮಗಳು ತಂತಿಯ ಸಹಾಯದಿಂದ ಉಸಿರುಗಟ್ಟಿಸಿ ಪ್ರಾಣ ಕಳೆದುಕೊಂಡಿದ್ದಳು.

ಏನಿದು ಬ್ಲಾಕ್ಔಟ್ ಚಾಲೆಂಜ್

ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳಿಗಾಗಿ ನೀಡುವ ಚಾಲೆಂಜ್ ಗೇಮ್ ಇದು. ಈ ಚಾಲೆಂಜ್ ಸ್ವೀಕರಿಸುವ ಮಕ್ಕಳು ಪ್ರಜ್ಞೆ ತಪ್ಪುವವರೆಗೆ ಉಸಿರು ಬಿಗಿಹಿಡಿಯುವ ಆಟ. ಒಂದು ಕ್ಷಣದ ಕಿಕ್, ಅತೀವ ಸಂತೋಷ ಇದರಿಂದ ಸಿಗುತ್ತೆ ಎಂದು ಬ್ಲಾಕ್ಔಟ್ ಚಾಲೆಂಜ್ ಹೇಳುತ್ತೆ. ಈ ತಪ್ಪು ಕಲ್ಪನೆ ಹಾಗೂ ಕುತೂಹಲ ಮಕ್ಕಳಲ್ಲಿ ಮೂಡಿಸಲಾಗುತ್ತದೆ. ಸ್ವಯಂ ಉಸಿರು ಬಿಗಿ ಹಿಡಿಯುವುದು ಅಥವಾ ಇತರ ವಸ್ತುಗಳ ಮೂಲಕ ಉಸಿರು ಬಿಗಿಹಿಡಿಯುವಂತೆ ಮಾಡಲು ಕೆಲ ಸಲಕರಣೆಗಳ ಆಯ್ಕೆಯನ್ನು ಗೇಮ್ ನೀಡುತ್ತದೆ. ಸಿಡಿಸಿ ವರದಿ ಪ್ರಕಾರ ಈ ಬ್ಲಾಕ್‌ಔಟ್ ಗೇಮ್ ಚಾಲೆಂಜ್ ಸ್ವೀಕರಿಸಿ ಆಡಿದ ಮಕ್ಕಳ ಪೈಕಿ 80 ಮಕ್ಕಳು ಬಲಿಯಾಗಿದ್ದಾರೆ. ಬಲಿಯಾದ ಎಲ್ಲರೂ 9 ರಿಂದ 14 ವರ್ಷ ಮಕ್ಕಳು.

ಪೋಷಕರ ಎಚ್ಚರ

ಜಾಕ್ಲಿನ್ ಪೋಷರು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಮಕ್ಕಳು ಮೊಬೈಲ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರೆ ಗಮನಹರಿಸಬೇಕು. ಮಕ್ಕಳು ಯಾವ ವಿಡಿಯೋ ನೋಡುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಅನ್ನೋ ಕುರಿತು ತೀವ್ರ ನಿಗಾವಹಿಸಲು ಸೂಚಿಸಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Israel's role in Iran conflict ಹಾರ್ಮುಜ್ ಹಸ್ತಕ್ಷೇಪ; ಇರಾನ್ ಕೊರಳಿಗೆ 22 ರಾಷ್ಟ್ರಗಳ ಉರುಳು!
20 ವರ್ಷ ಗೊತ್ತೇ ಆಗ್ಲಿಲ್ಲ ಗಂಡನ ಸೀಕ್ರೆಟ್! ಸತ್ಯ ಬಯಲಾಗ್ತಿದ್ದಂತೆ ಸೋಡಾಚೀಟಿ ಕೊಟ್ಟ ಪತ್ನಿ