ದೇವರ ನಂಬದವರಿಗೆ ಕೋವಿಡ್‌: ಸುದ್ದಿ ಪ್ರಚಾರ!

By Kannadaprabha NewsFirst Published Nov 20, 2020, 8:33 AM IST
Highlights

ಭಯೋತ್ಪಾದಕ ಚಟುವಟಿಕೆಗಳಿಂದ ಜನರಲ್ಲಿ ಭೀತಿ ಉಂಟು ಮಾಡುತ್ತಿದ್ದ ಐಸಿಸ್‌, ಅಲ್‌ಖೈದಾ ಮುಂತಾದ ಉಗ್ರ ಸಂಘಟನೆಗಳು ಇದೀಗ ಕೋವಿಡ್ ಬಗ್ಗೆಯೂ ಜನರಲ್ಲಿ ಆತಂಕ ಹುಟ್ಟು ಹಾಕುತ್ತಿವೆ. 

ವಿಶ್ವಸಂಸ್ಥೆ (ನ.20): ಭಯೋತ್ಪಾದಕ ಚಟುವಟಿಕೆಗಳಿಂದ ಜನರಲ್ಲಿ ಭೀತಿ ಉಂಟು ಮಾಡುತ್ತಿದ್ದ ಐಸಿಸ್‌, ಅಲ್‌ಖೈದಾ ಮುಂತಾದ ಉಗ್ರ ಸಂಘಟನೆಗಳು ಇದೀಗ, ಕೋವಿಡ್‌ ಬಗ್ಗೆ ಸಂಚಿನ ಸುಳ್ಳು ಸುದ್ದಿಗಳನ್ನು ಜಾಲತಾಣಗಳಲ್ಲಿ ಪಸರಿಸುತ್ತಿವೆ.

ಉಗ್ರ ಸಂಘಟನೆಗಳು ಈ ಮೂಲಕ ಜನರನ್ನು ಭಯ ಭೀತರನ್ನಾಗಿ ಮಾಡುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 

ದೇವರಲ್ಲಿ ವಿಶ್ವಾಸ ಇರಿಸದವರಿಗೆ ದೇವರು ಕೊಟ್ಟಶಿಕ್ಷೆ, ಪಶ್ಚಿಮದ ಬಗ್ಗೆ ದೇವರು ಮುನಿಸಿಕೊಂಡಿದ್ದಾನೆ ಹೀಗಾಗಿ ಕೋವಿಡ್‌ ಬಂದಿದೆ ಮುಂತಾದ ಸುಳ್ಳು ಸುದ್ದಿಗಳ ಮೂಲಕ ಜನರಲ್ಲಿ ಹೆದರಿಕೆ ಉಂಟು ಮಾಡುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

'ಮೊದಲ ಹಂತದಲ್ಲಿ 94000 ಕೊರೋನಾ ಯೋಧರಿಗೆ ಲಸಿಕೆ' ...

ಐಸಿಸ್‌, ಇಸಿಲ್‌, ಅಲ್‌ಖೈದಾ, ಅಲ್‌ ಶಬಾಬ್‌ ಮುಂತಾದ ಉಗ್ರ ಸಂಘಟನೆಗಳು ಈ ಕೃತ್ಯದಲ್ಲಿ ತೊಡಗಿವೆ.

ಹಿಂದೆ ವಿವಿಧ ರಿತಿಯ ದುಷ್ಕೃತ್ಯ ನಡೆಸಿ ಜನರ ಪ್ರಾಣಕ್ಕೆ ಸಂಚಕಾರ ತರುತ್ತಿದ್ದ ಉಗ್ರ ಸಂಘಟನೆಗಳು ಮತ್ತೊಂದು ರೀತಿಯಲ್ಲಿ ಜನರಲ್ಲಿ ಭಯೋತ್ಪಾದನೆ ಮಾಡುತ್ತಿವೆ. 

click me!