ಆಕಾಶದಿಂದ ಬಂತು ಗಿಫ್ಟ್; ಶವಪೆಟ್ಟಿಗೆ ತಯಾರಕ ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿ!

Published : Nov 19, 2020, 11:06 PM IST
ಆಕಾಶದಿಂದ ಬಂತು ಗಿಫ್ಟ್; ಶವಪೆಟ್ಟಿಗೆ ತಯಾರಕ ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿ!

ಸಾರಾಂಶ

ಅದೃಷ್ಟ ಒಂದಿದ್ದರೆ ಸಾಕು, ಅವಕಾಶ, ಆಸ್ತಿ, ಅಂತಸ್ತು ತನ್ನಿಂತಾನೆ ಬರುತ್ತದೆ ಅನ್ನೋ ಮಾತು ಹಲವು ಬಾರಿ ಸಾಬೀತಾಗಿದೆ. ಇದೀಗ ಶವಪೆಟ್ಟಿ ತಯಾರಕನ ಜೀವನದಲ್ಲಿ ಇದು ಸಂಭವಿಸಿದೆ. ದಿನ ಬೆಳಗಾಗುವುದರೊಳಗೆ ಶವಪೆಟ್ಟಿಗೆ ತಯಾರಕ ಕೋಟ್ಯಾಧಿಪತಿಯಾಗಿದ್ದಾನೆ. 

ಇಂಡೋನೇಷಿಯಾ(ನ.19):  ಶವಪೆಟ್ಟಿಗೆ ತಯಾರಿಸಿ ಜೀವನ ಸಾಗಿಸುತ್ತಿದ್ದ. ಆರ್ಥಿಕ ಸಂಕಷ್ಟದಲ್ಲೂ ಜೀವನ ನಿರ್ವಹಣೆ ಮಾಡಿಕೊಂಡು ಮುನ್ನಡೆಯುತ್ತಿದ್ದ. ಅಕೌಂಟ್ ಖಾತೆಯಲ್ಲಿ ಉಳಿತಾಯವಿಲ್ಲ. ದಿನದ ಆದಾಯ ಅಲ್ಲಿಗೆ ಸರಿ. ಕೈಯಲ್ಲಿ ಒಂದು ರೂಪಾಯಿ ಉಳಿಯುತ್ತಿರಲಿಲ್ಲ.  ಆದರೆ ಒಂದೇ ರಾತ್ರಿ ನೋಡಿ, ಬೆಳಗೆ ಎದ್ದಾಗ ಶವಪೆಟ್ಟಿಗೆ ತಯಾರಕ 9.8 ಕೋಟಿ ರೂಪಾಯಿ ಒಡೆಯನಾಗಿದ್ದ. ಈ ಘಟನೆ ನಡೆದಿದ್ದು ಇಂಡೋನೇಷಿಯಾದಲ್ಲಿ.

ಸಮುತ್ರಾ ವಲಯದಲ್ಲಿ ಶವಪೆಟ್ಟಿಗೆ ತಯಾರಕ 33 ವರ್ಷದ ಜೋಶುವಾ ಹುತಾಗಲಂಗ್ ಮನೆಯ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದ. ಶವಪೆಟ್ಟಿಗೆ ತಯಾರಿಕೆ ತೊಡಗಿದ್ದ ವೇಳೆ ಆಗಸದಿಂದ ಉಲ್ಕೆಯೊಂದು ರಭಸವಾಗಿ ನೆಲಕ್ಕಪ್ಪಳಿಸಿದೆ. ಆದರೆ ಜೋಶುವಾ ಮನೆಯ ಮೆಲ್ಚಾವಣಿಗೆ ಬಡಿದು ನೆಲಕ್ಕೆ ಅಪ್ಪಳಿಸಿದೆ. 

2.1 ಕೆಜಿ ತೂಕದ ಈ ಉಲ್ಕೆ ಅಪ್ಪಳಿಸಿದ ಕಾರಣ ಜೋಶುವಾ ಮನೆ ಮೆಲ್ಜಾವಣಿ ಕುಸಿದಿದೆ. ಆದರೆ 2.1 ಕೆಜಿ ತೂಕದ ಉಲ್ಕೆ 4.5 ಬಿಲಿಯನ್ ವರ್ಷಗಳಷ್ಟು ಹಳೆಯ ಉಲ್ಕೆಯಾಗಿದೆ. ಇಷ್ಟೇ ಅಲ್ಲ ಅದು ವಿಶೇಷ ಹಾಗೂ ಅತೀ ವಿರಳ ಲೋಹವಾಗಿದೆ. ಈ ಉಲ್ಕಾ ಲೋಹದ ಬೆಲೆ ಪ್ರತಿ ಗ್ರಾಂ ಬೆಲೆ 63,000 ರೂಪಾಯಿ.  2.1 ಕೆಜೆ ಉಲ್ಕೆಯ ಒಟ್ಟು ಬೆಲೆ 9.8 ಕೋಟಿ ರೂಪಾಯಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?