
ಕನ್ಸಾಸ್(ಜು.03): ಮಿಂಚು-ಹಾಗೂ ಸಿಡಿಲಿನ ಪದ ಒಂದು ರೀತಿಯಲ್ಲಿ ಭಯ ಹುಟ್ಟಿಸುತ್ತೆ. ಕಾರಣ ಅದರ ಪರಿಣಾಮ ಅತ್ಯಂತ ಭೀಕರ. ಅದೆಷ್ಟೋ ಜೀವಗಳು ಸಿಡಿಲಿಗೆ ಬಲಿಯಾಗಿದೆ. ಅದೆಷ್ಟೇ ಜೀವನಗಳು ಸಿಡಿಲಿನ ಭೀಕರತೆ ನಲುಗಿದೆ. ಇದೀಗ ಅಮೆರಿಕದ ಕನ್ಸಾಸ್ ಪ್ರಾಂತ್ಯದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಸಿಡಿಲು ಬಡಿದ ದೃಶ್ಯ ಭಯ ಹುಟ್ಟಿಸುವಂತಿದೆ.
ಕೋಳಿ ಮರಿಗೆ ಸಿಹಿ ಮುತ್ತು ನೀಡಿ ಬಿಗಿದಪ್ಪಿದ ಕೋತಿ ಮರಿ; ಹೃದಯಸ್ಪರ್ಶಿ ವಿಡಿಯೋ ವೈರಲ್!
ಜೂನ್ 25 ರಂದು 3 ವರ್ಷದ, 1.5 ವರ್ಷದ ಹಾಗೂ 8 ತಿಂಗಳ ಮುಗುವಿನೊಂದಿಗೆ ದಂಪತಿ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ. ಕನ್ಸಾಸ್ ಹೆದ್ದಾರಿಯಲ್ಲಿ ಎಂದಿನಂತೆ ಟ್ರಾಫಿಕ್ ಕೂಡ ಸಹಜವಾಗಿತ್ತು. ಮಳೆ ಸುರಿತ್ತಿದ್ದ ಕಾರಣ ಎಲ್ಲಾ ವಾಹನಗಳು ಮಂದಗತಿಯಲ್ಲಿ ಚಲಿಸುತ್ತಿತ್ತು.
ಇದಕ್ಕಿದ್ದಂತೆ ಸಿಡಿಲು ಕಾರಿಗೆ ಬಡಿದಿದೆ. ಈ ದೃಶ್ಯ ಹಿಂಬದಿ ಕಾರಿನ ಕ್ಯಾಮಾರದಲ್ಲಿ ಸೆರೆಯಾಗಿದೆ. ಸಿಡಿಲು ಬಡಿತಕ್ಕೆ ಕಾರು ಅಲ್ಲೆ ನಿಂತುಹೋಗಿದೆ. ತಕ್ಷಣವೇ ಹಿಂಬದಿ ಕಾರಿನಲ್ಲಿದ್ದವರು, ನೆರವಿಗೆ ಧಾವಿಸಿದ್ದಾರೆ. ಹತ್ತಿರ ಹೋಗಿ ನೋಡಿದಾಗ, ಕಾರಿನಲ್ಲಿದ್ದ ಐವರು ಯಾವುದೇ ಅಪಾಯವಿಲ್ಲದೆ ಸುರಕ್ಷತವಾಗಿದ್ದಾರೆ.
ಬಲೆ ಬೀಸಿ ಹಿಡಿದ ಮೀನಿನ ಹೊಟ್ಟೆಯೊಳಗೆ ಫುಲ್ ಬಾಟಲ್ ವಿಸ್ಕಿ; ವಿಡಿಯೋ ವೈರಲ್
ಪುಟಾಣಿ ಮಕ್ಕಳು ಹಾಗೂ ದಂಪತಿ ಸೇಫ್ ಆಗಿದ್ದಾರೆ. ಆದರೆ ಕಾರು ಸೆನ್ಸಾರ್, ಗೇರ್, ಹ್ಯಾಂಡಲ್ ಲಾಕ್ ಆಗಿದೆ. ಕಾರಿನ ಎಂಜಿನ್ ಸೇರಿದಂತೆ ಎಲ್ಲವೂ ಹಾಳಾಗಿದೆ. ಆದರೆ ಈ ಭಯಾನಕ ವಿಡಿಯೋ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ