ನಾಸಾ ಚಂದ್ರಯಾನಕ್ಕೆ ತಾಂತ್ರಿಕ ದೋಷ: ಆರ್ಟೆಮಿಸ್‌ 1 ಯೋಜನೆ ಮುಂದೂಡಿಕೆ

By Kannadaprabha News  |  First Published Aug 30, 2022, 9:32 AM IST

50 ವರ್ಷಗಳ ಬಳಿಕ ಮತ್ತೊಮ್ಮೆ ಚಂದ್ರಯಾನಕ್ಕೆ ಸಜ್ಜಾಗಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ಗೆ ಭಾರೀ ನಿರಾಸೆ ಉಂಟಾಗಿದೆ.


ವಾಷಿಂಗ್ಟನ್‌: 50 ವರ್ಷಗಳ ಬಳಿಕ ಮತ್ತೊಮ್ಮೆ ಚಂದ್ರಯಾನಕ್ಕೆ ಸಜ್ಜಾಗಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ಗೆ ಭಾರೀ ನಿರಾಸೆ ಉಂಟಾಗಿದೆ. ‘ಆರ್ಟೆಮಿಸ್‌ 1’ ಯೋಜನೆಯ ಭಾಗವಾಗಿ, ಸೋಮವಾರ ಆಗಸಕ್ಕೆ ಹಾರಬೇಕಿದ್ದ ‘ರಾಕೆಟ್‌ ಸ್ಪೇಸ್‌ ಲಾಂಚ್‌ ಸಿಸ್ಟಮ್‌’ (ಎಸ್‌ಎಲ್‌ಎಸ್‌) ರಾಕೆಟ್‌ನಲ್ಲಿ ಕೆಲ ತಾಂತ್ರಿಕ ದೋಷಗಳು ಕಂಡುಬಂದಿದ್ದು, ಕಡೆಯ ಹಂತದಲ್ಲಿ ಉಡ್ಡಯನವನ್ನು ಕನಿಷ್ಠ ಸೆ.2ರವರೆಗೆ ಮುಂದೂಡಲಾಗಿದೆ.

ಚಂದ್ರಯಾನ, ಮುಂಬರುವ ವರ್ಷಗಳಲ್ಲಿ ಚಂದ್ರನ ಸಂಪನ್ಮೂಲ ಬಳಕೆ ಮತ್ತು ಇತರೆ ಗ್ರಹಗಳಿಗೆ ತೆರಳುವ ಮುನ್ನ ಚಂದ್ರನನ್ನು ಪಿಟ್‌ ಸ್ಟಾಪ್‌ ಆಗಿ ಬಳಸುವ ಯೋಜನೆಯ ಭಾಗವಾಗಿ ನಾಸಾ ಆರ್ಟೆಮಿಸ್‌ 1, 2, 3 ಮತ್ತು 3 ಯೋಜನೆ ರೂಪಿಸಿದೆ. ಇದರ ಮೊದಲ ಭಾಗವಾಗಿ ಆರ್ಟೆಮಿಸ್‌ 1 ಸೋಮವಾರ ಸಂಜೆ ಭಾರತೀಯ ಕಾಲಮಾನ 6.30ರವೇಳೆಗೆ ಕೇಪ್‌ಕೆನವರೆಲ್‌ ಉಡ್ಡಯನ ಕೇಂದ್ರದಿಂದ ನಭಕ್ಕೆ ಹಾರಬೇಕಿತ್ತು. ಆದರೆ ಇಂಧನ ಟ್ಯಾಂಕ್‌ನಲ್ಲಿ ಸೋರಿಕೆ ಮತ್ತು ರಾಕೆಟ್‌ನ 4 ಎಂಜಿನ್‌ಗಳ ಪೈಕಿ ಒಂದರಲ್ಲಿ ದೋಷ ಕಂಡುಬಂದ ಪರಿಣಾಮ ಅಂತಿಮ ಹಂತದಲ್ಲಿ ಉಡ್ಡಯನ ಮುಂದೂಡಲಾಯಿತು.

Tap to resize

Latest Videos

ಮಂಗಳ ಗ್ರಹದಲ್ಲಿ ಏಲಿಯನ್ ರಹಸ್ಯ ದ್ವಾರ? ವೈರಲ್ ಚಿತ್ರದ ಅಸಲಿಯತ್ತೇನು?

ಆರ್ಟೆಮಿಸ್‌ 1:

ಇದು ಮಾನವ ರಹಿತ ಉಡ್ಡಯನ. ಈ ಯೋಜನೆಯಡಿ ನಾಸಾ ಇದುವರೆಗೆ ಅಭಿವೃದ್ಧಿಪಡಿಸಿರುವ ಅತ್ಯಂತ ಶಕ್ತಿಶಾಲಿ ರಾಕೆಟ್‌ ಸ್ಪೇಸ್‌ ಲಾಂಚ್‌ ಸಿಸ್ಟಮ್‌ (ಎಸ್‌ಎಲ್‌ಎಸ್‌) ಪ್ರಯೋಗಕ್ಕೆ ಒಳಪಡಲಿದೆ. ಹೈಬ್ರಿಡ್‌ ಮಾದರಿಯ ಈ ರಾಕೆಟ್‌, ಓರಿಯನ್‌ ಸ್ಪೇಸ್‌ಶಿಪ್‌ ಅಥವಾ ಮುಂಬರುವ ದಿನಗಳಲ್ಲಿ ಮಾನವ ಸಹಿತ ಗಗನಯಾನಕ್ಕೆ ನೆರವಾಗುವ ಕ್ಯಾಪ್ಯುಲ್‌ ಅನ್ನು ನಭಕ್ಕೆ ಹೊತ್ತೊಯ್ಯಬೇಕಿದೆ.

James Webb Telescope ತೆಗೆದ ಅದ್ಭುತ ಚಿತ್ರ, ಬಾಹ್ಯಾಕಾಶದಲ್ಲಿ ಕಂಡಿತು ಕೃಷ್ಣನ ಸುದರ್ಶನ ಚಕ್ರ!

ಆರ್ಟೆಮಿಸ್‌ 2/3:

ಆರ್ಟೆಮಿಸ್‌ 1ರ ಫಲಿತಾಂಶ ಆಧರಿಸಿ 2024ರಲ್ಲ ಆರ್ಟೆಮಿಸ್‌ 2 ಮತ್ತು 2025ರಲ್ಲಿ ಆರ್ಟೆಮಿಸ್‌ 3 ಉಡ್ಡಯನ ಕೈಗೊಳ್ಳಲು ನಾಸಾ ಉದ್ದೇಶಿಸಿದೆ. ಆರ್ಟೆಮಿಸ್‌ 2 ಮಾನವ ಸಹಿತ ಉಡ್ಡಯನವಾಗಿರಲಿದೆ. ಇದು ಚಂದ್ರನ ಕಕ್ಷೆಯಲ್ಲಿ ಹೆಚ್ಚಿನ ಕಾಲ ಕಳೆದು ಭೂಮಿಗೆ ಮರಳಲಿದೆ. ಆರ್ಟೆಮಿಸ್‌ 3 ಮೊದಲ ಮಹಿಳಾ ಗಗನಯಾತ್ರಿಯನ್ನು ಕೊಂಡೊಯ್ಯುವ ಉದ್ದೇಶ ಹೊಂದಿದೆ. ಜೊತೆಗೆ ಗಗನಯಾತ್ರಿಗಳು ಚಂದ್ರನ ಮೇಲೆ ಇಳಿಯಲಿದ್ದಾರೆ. ಇದುವರೆಗೂ ವಿಶ್ವದ ಅರಿವಿಗೆ ಬಾರದ ಚಂದ್ರನ ದಕ್ಷಿಣ ಧ್ರುವದತ್ತ ತೆರಳಿ ಅಧ್ಯಯನ ಕೈಗೊಳ್ಳಲಿದ್ದಾರೆ.

click me!