
ಕ್ರಿಸ್ಟ್‌ಚರ್ಚ್: ಇತ್ತೀಚೆಗೆ ಇಂಗಾಲ ಹೊರಸೂಸುವಿಕೆ (Carbon Emissions) ಬಗ್ಗೆ ಜಗತ್ತಿನಾದ್ಯಂತ ನಾನಾ ಚರ್ಚೆಗಳಾಗುತ್ತಿದೆ. ಇದಕ್ಕೆ ಕಾರಣ ಜಾಗತಿಕ ತಾಪಮಾನ (Global Warming). ತಾಪಮಾನ ಹೆಚ್ಚಾಗಿರುತ್ತಿರುವಂತೆ, ಇದನ್ನು ಕಡಿಮೆ ಮಾಡಲು ನಾನಾ ಸರ್ಕಾರಗಳು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ವಿಶ್ವಸಂಸ್ಥೆ (United Nations Organization) ಸಹ ಈ ನಿಟ್ಟಿನಲ್ಲಿ ಅನೇಕ ದೇಶಗಳಿಗೆ ಹಲವು ವಿಭಿನ್ನ ಗುರಿಯನ್ನು ನೀಡಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬಳಕೆಗೆ ಕಡಿವಾಣ ಹಾಕಿ ಎಲೆಕ್ಟ್ರಿಕ್ ರೈಲ್ವೆ ಎಂಜಿನ್ ಹಾಗೂ ಸೇನೆಯಿಂದ ಎಲೆಕ್ಟ್ರಿಕ್ ವಾಹನಗಳ ಖರೀದಿ - ಹೀಗೆ ಎಲೆಕ್ಟ್ರಿಕ್ (Electric) , ಬಯೋ ಇಂಧನ (Bio Fuel) ಮುಂತಾದವುಗಳಿಗೆ ಒತ್ತು ನೀಡಲಾಗುತ್ತಿದೆ. ಅಲ್ಲದೆ, ಪ್ರತಿ ಮನೆಗೆ ಉಚಿತ ಎಲ್‌ಪಿಜಿ ಕನೆಕ್ಷನ್ ಮುಂತಾದ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ನ್ಯೂಜಿಲೆಂಡ್ (New Zealand) ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಅದೇನಪ್ಪಾ ಅಂತೀರಾ..? ಮುಂದೆ ಓದಿ..
ದೇಶದಲ್ಲಿ ಹಸುಗಳನ್ನು (Cows) ಗೋ ಮಾತೆ ಎಂದು ಪೂಜಿಸಲಾಗುತ್ತದೆ. ಆದೆ, ನ್ಯೂಜಿಲೆಂಡ್‌ನಲ್ಲಿ ಇಂಗಾಲ ಹೊರಸೂಸುವಿಕೆಗೆ ಕಡಿವಾಣ ಹಾಕಲು ಈ ಗೋ ಮಾತೆಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಹೌದು, ಹಸುಗಳು ತೇಗುವುದು (Burps) ಹಾಗೂ ಹೂಸು (Fart) ಬಿಡುವುದಕ್ಕಾಗಿ ಅವುಗಳನ್ನು ಸಾಕಿದ ರೈತರ ಮೇಲೆ ತೆರಿಗೆ ವಿಧಿಸಲು ನ್ಯೂಜಿಲೆಂಡ್ ಸರ್ಕಾರ ನಿರ್ಧರಿಸಿದೆ. ಜಗತ್ತಿನಲ್ಲೇ ಇಂತಹ ವಿಚಿತ್ರ ತೆರಿಗೆಯನ್ನು ವಿಧಿಸಿದ್ದು ಇದೇ ಮೊದಲು. ದೇಶದ ಕೃಷಿ ಕ್ಷೇತ್ರದಿಂದ ಉತ್ಪಾದನೆಯಾಗುತ್ತಿರುವ ಹಸಿರು ಮನೆ ಅನಿಲ ಹೊರಸೂಸುವಿಕೆಯ ಏರಿಕೆಗೆ ಕಡಿವಾಣ ಹಾಕಲು ನಿರ್ಧರಿಸಿರುವ ನ್ಯೂಜಿಲೆಂಡ್ ಸರ್ಕಾರ ಈ ಹೊಸ ಹವಾಮಾನ ಬದಲಾವಣೆ ಪ್ರಸ್ತಾಪವನ್ನು ಸಲ್ಲಿಸಿದೆ ಎನ್ನಲಾಗಿದೆ.
ಇದನ್ನು ಓದಿ: ಸೇನೆಗೆ ಭಾರಿ ಸಂಖ್ಯೆಯ Electric Vehicles ಖರೀದಿ
ನ್ಯೂಜಿಲೆಂಡ್‌ನಲ್ಲಿ 62 ಲಕ್ಷ ಹಸುಗಳಿದ್ದು, ಮಿತಿಮೀರಿದ ಹೈನುಗಾರಿಕೆ ಇದೆ. ಅವು ಸ್ವಾಭಾವಿಕವಾಗಿ ಹಸಿರು ಮನೆ ಅನಿಲ (ಮೀಥೇನ್) ಹೊರಸೂಸುತ್ತವೆ. ಈ ನಿಟ್ಟಿನಲ್ಲಿ ಗೋಮೂತ್ರದಲ್ಲಿರುವ ನೈಟ್ರಸ್ ಆಕ್ಸೈಡ್ ಹಾಗೂ ತೇಗು ಮತ್ತು ಹೂಸಿನ ಮೂಲಕ ಸೃಷ್ಟಿಸುವ ಮಿಥೇನ್‌ಗೂ, ಜಾನುವಾರು ಸಾಕಿದ ರೈತರು ತೆರಿಗೆ ಪಾವತಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಮಿತಿಮೀರಿದ ಹೈನುಗಾರಿಕೆ ನಿಯತ್ರಿಸಿ ಇಂಗಾಲಕ್ಕೆ ಕಡಿವಾಣ ಹಾಕುವ ಉದ್ದೇಶ ಹೊಂದಲಾಗಿದೆ.
ತೆರಿಗೆ ಪಾವತಿಯಿಂದ ಸಂಗ್ರಹವಾದ ಹಣವನ್ನು ಹವಾಮಾನ ಸ್ನೇಹಿ ತಂತ್ರಜ್ಞಾನದ ಸಂಶೋಧನೆ ಹಾಗೂ ಅವುಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಸಹಾಯಧನ ನೀಡಲು ಬಳಸಿಕೊಳ್ಳಲಾಗುವುದು ಎಂದು ವರದಿಗಳು ತಿಳಿಸಿವೆ. ‘ಹಸಿರು ಮನೆ ಅನಿಲಗಳ ಕಡಿಮೆ ಹೊರಸೂಸುವಿಕೆಯ ನಿರ್ಧಾರಕ್ಕೆ ಬದ್ಧತೆ ತೋರಿಸುವ ನಿಟ್ಟಿನಲ್ಲಿ ನ್ಯೂಜಿಲೆಂಡ್ ಈ ಮಹತ್ವದ ಹೆಜ್ಜೆಯನ್ನಿರಿಸಿದೆ. ಮಿತಿ ಮೀರಿದ ಹೈನುಗಾರಿಕೆ ನಿಯಂತ್ರಣಕ್ಕಾಗಿ ಹಾಗೂ ಕೃಷಿ ಕ್ಷೇತ್ರವನ್ನು ಇನ್ನಷ್ಟು ಸುಸ್ಥಿರವಾಗಿಸುವ ನಿಟ್ಟಿನಲ್ಲಿ 2025ರಿಂದ ಜಾರಿಗೆ ತರುವ ಉದ್ದೇಶದಿಂದ ಪ್ರಸ್ತಾಪ ಸಲ್ಲಿಸಲಾಗಿದೆ’ ಎಂದು ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡೆನ್ ತಿಳಿಸಿದ್ದಾರೆ.
ಇದನ್ನೂ ಓದಿ: 2025ಕ್ಕೆ ದೇಶದ ಎಲ್ಲ ರೈಲು ಎಂಜಿನ್‌ಗಳು ಎಲೆಕ್ಟ್ರಿಕ್: Railway ನೀತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ