
ವಾಷಿಂಗ್ಟನ್: ರಷ್ಯಾ- ಉಕ್ರೇನ್ ಯುದ್ಧ ಸ್ಥಗಿತ ಮಾಡಲೆಂದೇ ಭಾರತದ ಮೇಲೆ ನಾವು ಹೆಚ್ಚುವರಿ ತೆರಿಗೆ ಹೇರಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಅಮೆರಿಕ ಕೋರ್ಟ್‌ನಲ್ಲಿ ವಾದ ಮಂಡಿಸಿದೆ.
ವಿದೇಶಗಳ ಮೇಲೆ ಮನಸೋ ಇಚ್ಛೆ ತೆರಿಗೆ ಹೇರುವುದು ಅಮೆರಿಕದ ಅಧ್ಯಕ್ಷರ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ತೆರಿಗೆ ಹೇರಿಕೆ ಅಕ್ರಮ ಎಂಬ ಇತ್ತೀಚಿನ ಕೋರ್ಟ್ ತೀರ್ಪು ಪ್ರಶ್ನಿಸಿ, ಟ್ರಂಪ್ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆ ವೇಳೆ, ಟ್ರಂಪ್ ಸರ್ಕಾರದ ಪರ ವಕೀಲರು, ‘ಯುದ್ಧಗ್ರಸ್ತವಾಗಿರುವ ರಷ್ಯಾ-ಉಕ್ರೇನ್ ನಡುವೆ ಶಾಂತಿ ಸ್ಥಾಪಿಸುವ ಸಲುವಾಗಿ, ಪುಟಿನ್‌ರ ರಾಷ್ಟ್ರದಿಂದ ತೈಲ ತರಿಸಿಕೊಳ್ಳುತ್ತಿರುವ ಭಾರತದ ಮೇಲೆ ತೆರಿಗೆ ಹೇರಲಾಗಿದೆ’ ಎಂದು ತೆರಿಗೆ ಹೇರಿಕೆ ಸಮರ್ಥಿಸಿಕೊಂಡಿದ್ದಾರೆ. ಜತೆಗೆ, ‘ಜಿಲ್ಲಾ ನ್ಯಾಯಾಲಯದ ನಿರ್ಧಾರವು, ಕಳೆದ 5 ತಿಂಗಳುಗಳಿಂದ ಸುಂಕಗಳ ಮೂಲಕ ಅಧ್ಯಕ್ಷರು ವಿದೇಶಗಳೊಂದಿಗೆ ನಡೆಸುತ್ತಿರುವ ಮಾತುಕತೆಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ’ ಎಂದು ವಾದಿಸಿದ್ದಾರೆ.
ಅಂತೆಯೇ, ಒಂದೊಮ್ಮೆ ಈ ಕೇಸನ್ನು ಸುಪ್ರೀಂ ಕೋರ್ಟ್‌ನಲ್ಲೂ ಸೋತರೆ, ಇತ್ತೀಚೆಗೆ ಯುರೋಪಿಯನ್ ಯೂನಿಯನ್ ಜತೆ ಮಾಡಿಕೊಂಡ ವ್ಯಾಪಾರ ಒಪ್ಪಂದವೂ ರದ್ದಾಗಲಿದೆ. ಇದರಿಂದ ಅಮೆರಿಕ ಭಾರೀ ನಷ್ಟ ಅನುಭವಿಸಬೇಕಾಗುವುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ