
ಕಾಬೂಲ್(ಆ.24): ಈಗಾಗಲೇ ನಿಗದಿಯಾಗಿರುವ ಗಡುವಾದ ಆಗಸ್ಟ್ 31ರಂದೇ ಅಮೆರಿಕ ಹಾಗೂ ಬ್ರಿಟನ್ ಪಡೆಗಳು ಅಷ್ಘಾನಿಸ್ತಾನವನ್ನು ತೊರೆಯಬೇಕು. ಒಂದು ವೇಳೆ ಈ ಗಡುವು ಮೀರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಾಲಿಬಾನ್ ನೇರ ಎಚ್ಚರಿಕೆ ನೀಡಿದೆ.
ಮಂಗಳವಾರ ಬ್ರಿಟನ್, ಅಮೆರಿಕ, ಫ್ರಾನ್ಸ್, ಕೆನಡಾ, ಜರ್ಮನಿ, ಇಟಲಿ ಹಾಗೂ ಜಪಾನ್ ಒಳಗೊಂಡ ‘ಜಿ-7’ ಗುಂಪಿನ ದೇಶಗಳು ಸಭೆ ನಡೆಸಲಿದ್ದು, ಆ.31ರ ನಂತರವೂ ಅಷ್ಘಾನಿಸ್ತಾನದಲ್ಲಿ ಅಮೆರಿಕ ಹಾಗೂ ಮಿತ್ರಪಡೆಗಳು ಇರಬೇಕು, ಪೂರ್ತಿ ಕರೆಸಿಕೊಳ್ಳಬಾರದು ಎಂದು ಒತ್ತಾಯಿಸುವ ಸಾಧ್ಯತೆ ಇದೆ. ಆಫ್ಘನ್‌ನಲ್ಲಿನ ವಿದೇಶಿಗರ ತೆರವು ಕಾರಾರಯಚರಣೆ ಇನ್ನೂ ಮುಗಿಯದ ಕಾರಣ ಪಡೆಗಳ ಇರುವಿಕೆ ಅಗತ್ಯ ಎಂದು ಹೇಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಾಲಿಬಾನ್ ಸೋಮವಾರ ಅಮೆರಿಕಕ್ಕೆ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದೆ.
"
ಈ ಬಗ್ಗೆ ಸೋಮವಾರ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ತಾಲಿಬಾನ್ ವಕ್ತಾರ ಡಾ|ಸುಹೇಲ್ ಶಹೀನ್, ‘ಆ.31ರಂದು ತನ್ನ ಪೂರ್ತಿ ಪಡೆಗಳನ್ನು ಆಫ್ಘನ್‌ನಿಂದ ವಾಪಸ್ ಕರೆಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಅದೇ ಅಂತಿಮ ನುಡಿಯಾಗಬೇಕು. ಅಮೆರಿಕ ಹಾಗೂ ಅದರ ಮಿತ್ರದೇಶವಾದ ಬ್ರಿಟನ್ ಸೇನೆಯ ವಾಪಸಾತಿಗೆ ಮತ್ತಷ್ಟುಸಮಯಾವಕಾಶ ನೀಡಲಾಗದು. ಈ ಗಡುವಿನೊಳಗೆ ಅಮೆರಿಕ ತನ್ನ ಸೇನೆಯನ್ನು ಪೂರ್ತಿ ಹಿಂಪಡೆಯದಿದ್ದರೆ ಅದರ ಪರಿಣಾಮ ಭೀಕರವಾಗಿರಲಿದೆ. ಅಲ್ಲದೆ ನಮ್ಮನ್ನು ಪ್ರಚೋದಿಸಿದಂತೆ ಆಗಲಿದೆ’ ಎಂದು ಹೇಳಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ