'ದಾವೂದ್ ಇಬ್ರಾಹಿಂ ಮುಸ್ಲಿಮರಿಗೆ ಸಾಕಷ್ಟು ಮಾಡಿದ್ದಾನೆ' ಸ್ಟಾರ್ ಕ್ರಿಕೆಟರ್ ಶಾಕಿಂಗ್ ಹೇಳಿಕೆ ವೈರಲ್

Published : Mar 20, 2024, 10:23 AM ISTUpdated : Mar 20, 2024, 10:25 AM IST
'ದಾವೂದ್ ಇಬ್ರಾಹಿಂ ಮುಸ್ಲಿಮರಿಗೆ ಸಾಕಷ್ಟು ಮಾಡಿದ್ದಾನೆ' ಸ್ಟಾರ್ ಕ್ರಿಕೆಟರ್ ಶಾಕಿಂಗ್ ಹೇಳಿಕೆ ವೈರಲ್

ಸಾರಾಂಶ

ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಮುಸ್ಲಿಮರಿಗಾಗಿ ಸಾಕಷ್ಟು ಮಾಡಿದ್ದಾರೆ ಎಂಬ ಪಾಕಿಸ್ತಾನದ ಈ ಸ್ಟಾರ್ ಕ್ರಿಕೆಟಿನ ಹೇಳಿಕೆ ಇದೀಗ ಹೆಡ್ಲೈನ್ ಪಡೆಯುತ್ತಿದೆ.  

ಅಂಡರ್‌ವರ್ಲ್ಡ್ ಡಾನ್ 'ದಾವೂದ್ ಇಬ್ರಾಹಿಂ ಮುಸ್ಲಿಮರಿಗಾಗಿ ಸಾಕಷ್ಟು ಮಾಡಿದ್ದಾರೆ' ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ನೀಡಿರುವ ಹೇಳಿಕೆ ಇದೀಗ ವೈರಲ್ ಆಗಿದೆ. 

ಪಾಕಿಸ್ತಾನಿ ಪತ್ರಕರ್ತ ಹಸನ್ ನಿಸಾರ್ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಿಯಾಂದಾದ್, ಇಬ್ರಾಹಿಂ ಅವರೊಂದಿಗಿನ ದೀರ್ಘಕಾಲದ ಪರಿಚಯದ ಬಗ್ಗೆ ಮಾತನಾಡಿದ್ದಾರೆ.  

ತಮ್ಮ ಮಗ ಜುನೈದ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪುತ್ರಿ ಮಹ್ರುಖ್ ಅವರನ್ನು ದುಬೈನಲ್ಲಿ ಟೈಟ್ ಸೆಕ್ಯೂರಿಟಿಯಲ್ಲಿ 2005ರಲ್ಲಿ ವಿವಾಹವಾಗಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಮಿಯಾಂದಾದ್, ಮುಸ್ಲಿಂ ಸಮುದಾಯಕ್ಕೆ ಇಬ್ರಾಹಿಂ ನೀಡಿದ ಕೊಡುಗೆಗಳನ್ನು ಶ್ಲಾಘಿಸಿದರು, ಅವರ ಕಾರ್ಯಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ ಎಂದು ಹೇಳಿದರು.

ಕಪ್ಪು ಗೌನ್‌ನಲ್ಲಿ ಶಿಲ್ಪಾ ಶೆಟ್ಟಿ; ನೀಳ ಸೊಂಟಕ್ಕೆ ಸರಿಸಾಟಿ ಯಾವ ನಾಯಕಿನೂ ಇಲ್ಲ ಎಂದ್ರು ಫ್ಯಾನ್ಸ್, ಆದ್ರೂ ಟ್ರೋಲ್ ಆಗಿದ್ದೇಕೆ?
 

'ನನಗೆ ಅವರು ದುಬೈನಲ್ಲಿದ್ದಾಗಿಂದ ಬಹಳ ಸಮಯದಿಂದ ತಿಳಿದಿದ್ದಾರೆ. ಅವರ ಮಗಳು ನನ್ನ ಮಗನನ್ನು ಮದುವೆಯಾದದ್ದು ನನಗೆ ಗೌರವದ ವಿಷಯವಾಗಿದೆ. ಅವಳು ತುಂಬಾ ಚೆನ್ನಾಗಿ ಓದಿದ್ದಾಳೆ ಮತ್ತು ಕಾನ್ವೆಂಟ್ ಮತ್ತು ವಿಶ್ವವಿದ್ಯಾಲಯದಲ್ಲಿ ಓದಿದ್ದಾಳೆ' ಎಂದು ಮಿಯಾಂದಾದ್ ಹೇಳಿದ್ದಾರೆ.

ಭಾರತದಲ್ಲಿ ವಾಂಟೆಡ್ ಭಯೋತ್ಪಾದಕನಾಗಿರುವ ದಾವೂದ್ ಇಬ್ರಾಹಿಂ, ಸುಮಾರು 260 ಜೀವಗಳನ್ನುತೆಗೆದ 1993ರ  ಮುಂಬೈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದಾನೆ. ಭಾರತದಲ್ಲಿ ತನ್ನ ಅಕ್ರಮ ಚಟುವಟಿಕೆಗಳಿಗೆ ಹೆಸರುವಾಸಿಯಾದ ಕ್ರಿಮಿನಲ್ ಸಿಂಡಿಕೇಟ್ ಕುಖ್ಯಾತ ಡಿ-ಕಂಪನಿಯನ್ನು ಅವನು ಮುನ್ನಡೆಸುತ್ತಾನೆ ಮತ್ತು ಸಂಘಟಿತ ಅಪರಾಧ ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಇಂಟರ್‌ಪೋಲ್‌ನಿಂದ ಆತನನ್ನು ವಾಂಟೆಡ್ ಕ್ರಿಮಿನಲ್ ಎಂದು ಪಟ್ಟಿಗೆ ಸೇರಿಸಲಾಗಿದೆ. 

ಔಟ್ ಆಫ್ ಔಟ್ ಅಂಕ ಪಡೆವ ನಿಮ್ಮ ಮಕ್ಕಳ ಕ್ಲಾಸ್‌ಮೇಟ್ಸ್ ಸೀಕ್ರೆಟ್ಸ್..
 

ಕಳೆದ ವರ್ಷ ಡಿಸೆಂಬರ್‌ನಲ್ಲಿ ದಾವೂದ್ ಇಬ್ರಾಹಿಂ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಪಾಕಿಸ್ತಾನದ ಕರಾಚಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಎಂಬ ವರದಿಗಳು ಬಂದಿದ್ದವು. ವಿಷ ಹಾಕಿ ಕೊಲೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಆದರೆ ಆ ವರದಿಗಳು ದೃಢಪಟ್ಟಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ