ಪ್ರವಾಸಿ ನ್ಯೂಜಿಲೆಂಡ್ ಯುವತಿಯನ್ನು ಮಂಚಕ್ಕೆ ಕರೆದ, ತಿರಸ್ಕರಿಸಿ ಮುನ್ನಡೆದಾಗ ಆಘಾತ, ವಿಡಿಯೋ

Published : Nov 18, 2025, 03:53 PM IST
New Zealand Solo traveller

ಸಾರಾಂಶ

ಪ್ರವಾಸಿ ನ್ಯೂಜಿಲೆಂಡ್ ಯುವತಿಯನ್ನು ಮಂಚಕ್ಕೆ ಕರೆದ, ತಿರಸ್ಕರಿಸಿ ಮುನ್ನಡೆದಾಗ ಆಘಾತ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಿರುಕುಳ ನೀಡಿದವನ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಕೊಲೊಂಬೊ (ನ.18) ವಿದೇಶಿಗರು ಸೋಲೋ ಪ್ರವಾಸ ಮಾಡುವುದು ಹೊಸದೇನಲ್ಲ. ಹಲವು ದೇಶಗಳಿಗೆ ತೆರಳಿ ಸುತ್ತಾಡಿ ಅಲ್ಲಿನ ಪ್ರವಾತಿ ತಾಣ, ಆಹಾರ, ಸಂಸ್ಕೃತಿ ಕುರಿತ ವಿಶೇಷ ಅನುಭವದೊಂದಿಗೆ ಮರಳುತ್ತಾರೆ. ಭಾರತ ಸೇರಿದಂತೆ ಎಷ್ಯಾದ ರಾಷ್ಟ್ರಗಳಿಗೆ ಅತೀ ಹಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಆಗಮಿಸುತ್ತಾರೆ. ಕೆಲವು ಬಾರಿ ಕೆಲ ಕೆಟ್ಟ ಘಟನೆಗಳೊಂದಿಗೆ ಮರಳುತ್ತಾರೆ. ಇದೀಗ ನ್ಯೂಜಿಲೆಂಡ್ ಯುವತಿಯೊಬ್ಬಳು ಹೀಗೆ ಏಕಾಂಗಿಯಾಗಿ ಪ್ರವಾಸಕ್ಕೆ ತೆರಳಿದಾಗ ನಡೆದ ಘಟನೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ದಾರಿಯಲ್ಲಿ ಪ್ರೀತಿಯಿಂದ ಮಾತನಾಡಿಸುವಂತೆ ನಾಟಕ ಮಾಡಿದ ಅಸಾಮಿ ಬಳಿಕ ಪ್ರವಾಸಿ ಯುವತಿಯನ್ನು ಮಂಚಕ್ಕೆ ಕರೆದಿದ್ದಾನೆ. ಇಷ್ಟು ಸಾಲದು ಎಂದು ವಿಕೃತಿ ಮೆರೆದ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ಈ ವಿಡಿಯೋ ನೋಡಿ ಹಲವರು ಆಕ್ರೋಶ ಹೊರಹಾಕಿದ್ದಾರೆ.

ನ್ಯೂಜಿಲೆಂಡ್ ಯುವತಿಗೆ ಕಿರುಕುಳ

ನ್ಯೂಜಿಲೆಂಡ್‌ನ ಯುವತಿ ಮೋಲ್ಸ್ ವಿಶ್ವದ ಹಲವು ರಾಷ್ಟ್ರಗಳಿಗೆ ಏಕಾಂಗಿಯಾಗಿ ತೆರಳುತ್ತಾಳೆ. ಅಲ್ಲಿನ ವಿಶೇಷ ತಾಣಗಳ ಕುರಿತು, ಆಹಾರ ಕುರಿತು ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾಳೆ. ಹೀಗೆ ಶ್ರೀಲಂಕಾ ಪ್ರವಾಸ ಮಾಡಿದ್ದಾಳೆ. ಈ ವೇಳೆ ನಡೆದ ಘಟನೆ ಕುರಿತು ಹೇಳಿಕೊಂಡದ್ದಾಳೆ. ಈ ವಿಡಿಯೋ ಹಂಚಿಕೊಳ್ಳಬೇಕೋ, ಬೇಡವೋ ಅನ್ನೋ ಕುರಿತು ಚರ್ಚೆ ನೆಡೆಸಿದೆ.ಕೊನೆಗೆ ಸೋಲೋ ಪ್ರವಾಸ ಮಾಡುವ ಮಹಿಳೆ ಎದುರಿಸುವ ಪ್ರಮುಖ ಸಮಸ್ಯೆ ಇದು. ಇದು ವಾಸ್ತವ ಎಂದು ಹೇಳಿ ವಿಡಿಯೋ ಹಂಚಿಕೊಂಡಿದ್ದಾರೆ. ಇದೇ ವೇಳೆ ನಡೆದ ಘಟನೆ ಕುರಿತು ವಿವರಣ ನೀಡಿದ್ದಾರೆ.

ಸ್ಥಳೀಯನ ಮಾತು ಕೇಳಿದ ಪ್ರವಾಸಿ ಯುವತಿಗೆ ಆಘಾತ

ಶ್ರೀಲಂಕಾಗೆ ತೆರಳಿ ಅಲ್ಲಿನ ಆಟೋ ರಿಕ್ಷಾ ಬಾಡಿಗೆ ಪಡೆದು ಪ್ರಯಾಣ ಮುಂದುವರಿಸಿದೆ. ಅರುಗಮ್ ಬೇನಿಂದ ಪಿಸಿಕುಡಾಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ತನ್ನ ಬಾಡಿಗೆ ಆಟೋ ರಿಕ್ಷಾ ನಿಲ್ಲಿಸಿದ್ದಾಳೆ. ಈ ವೇಳೆ ಸ್ಕೂಟರ್ ಮೂಲಕ ಹಿಂಬಾಲಿಸುತ್ತಿದ್ದ ಯುವಕನೊಬ್ಬ ಆಗಮಿಸಿದ್ದಾನೆ. ಯುವಕನ ಜೊತೆ ಮಾತನಾಡಲು ಭಾಷೆ ಸಮಸ್ಯೆ ಆದರೂ ಯುವಕ ಕಷ್ಟ ಪಟ್ಟು ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದ. ನಗು ಮುಖದಿಂದ ಮಾತನಾಡಿಸುತ್ತಿದ್ದ ಯುವಕ ಆತ್ಮೀಯನಾಗಿ ಮಾತನಾಡುಸುತ್ತಿದ್ದಾನೆ, ಫ್ರೆಂಡ್ಲಿಯಾಗಿದ್ದಾನೆ ಎಂದುಕೊಂಡಿದ್ದಾಳೆ. ಮಾತನಾಡುತ್ತಿದ್ದಂತೆ ಶ್ರೀಲಂಕಾ ಸ್ಥಳೀಯ ಪ್ರವಾಸಿ ಯುವತಿಯನ್ನು ಮಂಚಕ್ಕೆ ಕರೆದಿದ್ದಾನೆ. ಈ ಮಾತುಗಳನ್ನು ಕೇಳಿ ಯುವತಿ ಆಘಾತಗೊಂಡಿದ್ದಾಳೆ. ಜೊತೆಗೆ ಭಯಪಟ್ಟಿದ್ದಾಳೆ.

ಯವಕನಿಗೆ ಖಡಕ್ ಉತ್ತರ ನೀಡಿದ ನ್ಯೂಜಿಲೆಂಡ್ ಯುವತಿ, ನೋ ನೋ,, ಎಂದು ತನ್ನ ರಿಕ್ಷಾ ಸ್ಟಾರ್ಟ್ ಮಾಡಿದ್ದಾಳೆ. ಈ ವೇಳೆ ಸ್ಥಳೀಯ ಶ್ರೀಲಂಕನ್ ಆಕೆಯ ಎದುರಲ್ಲೆ ಹಸ್ತMYಥುನ ಮಾಡಿದ್ದಾನೆ. ವೇಗವಾಗಿ ವಾಹನ ಚಲಾಯಿಸಿಕೊಂಡು ಮುಂದೆ ಸಾಗಿದ್ದಾಳೆ. ಸ್ಥಳೀಯನಿಂದ ತಪ್ಪಿಸಿಕೊಂಡ ಸಾಗಿದ ಯುವತಿ ನಿಟ್ಟುಸಿರು ಬಿಟ್ಟಿದ್ದಾಳೆ. ಕೊನೆಗೆ ತನಗಾದ ಅನುಭದ ವಿಡಿಯೋವನ್ನು ಹಂಚಿಕೊಂಡಿದ್ದಾಳೆ.

ಶ್ರೀಲಂಕಾ ಹೀಗೆ ಅಲ್ಲ

ಇದೇ ವೇಳೆ ಸೋಲೋ ಟ್ರಾವೆಲ್ ಪ್ರತಿ ದಿನ ಪ್ರತಿ ಕ್ಷಣ ಸುಂದರವಾಗಿರುವುದಿಲ್ಲ, ಈ ರೀತಿಯ ಹಲವು ಸವಾಲುಗಳು ಎದುರಾಗುತ್ತದೆ. ಪ್ರತಿ ದಿನ ನಿಮ್ಮ ಬಲ, ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಈ ಘಟನೆಯಿಂದ ಸಂಪೂರ್ಣ ಶ್ರೀಲಂಕಾದವರು ಹೀಗೆ ಎಂದು ಹೇಳುವುದು ತಪ್ಪು. ಕಾರಣ ನಾನು ಹಲವು ಶ್ರೀಲಂಕಾದ ಸ್ಥಳೀಯರನ್ನು ಭೇಟಿ ಮಾಡಿದ್ದೇನೆ. ಎಲ್ಲರು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಉತ್ತಮ ಜನರನ್ನು ಮಾತನಾಡಿದ್ದೇನೆ. ಈತನ ಒಬ್ಬನ ಕೃತ್ಯದಿಂದ ಶ್ರೀಲಂಕಾ ಹೀಗೆ ಎಂದು ಹೇಳುವುದು ತಪ್ಪು ಎಂದು ಯುವತಿ ಹೇಳಿಕೊಂಡಿದ್ದಾಳೆ. ಯುವಕನ ವರ್ತನೆಗೆ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಕ್ರಮ ಕೈಗೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ. 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ಸರ್ಕಾರದಲ್ಲಿ 63% ಕಮಿಷನ್‌: ಅಶೋಕ್‌
ಸಾಮಾಜಿಕ ಜಾಲತಾಣ ಖಾತೆ ಪಬ್ಲಿಕ್‌ ಇದ್ರಷ್ಟೇ ವೀಸಾ : ಟ್ರಂಪ್‌