ಬಹುತೇಕ ನ್ಯಾಯಾಧೀಶರು ಭ್ರಷ್ಟರು ಎಂಬ ಹೇಳಿಕೆ| ಬಹುತೇಕ ಜಡ್ಜ್‌ಗಳು ಭ್ರಷ್ಟರು ಎಂದ ಮಾಜಿ ಸಚಿವಗೆ ಜೈಲು!| ಲಂಕಾದ ಸುಪ್ರೀಂ ಕೋರ್ಟ್ 4 ವರ್ಷ ಜೈಲು ಶಿಕ್ಷೆ
ಕೊಲಂಬೋ(ಜ.14): ಶ್ರೀಲಂಕಾದ ಬಹುತೇಕ ನ್ಯಾಯಾಧೀಶರು ಭ್ರಷ್ಟರು ಎಂಬ ಹೇಳಿಕೆ ನೀಡಿದ ವಿಪಕ್ಷ ನಾಯಕನಿಗೆ ಲಂಕಾದ ಸುಪ್ರೀಂ ಕೋರ್ಟ್ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಲಂಕಾದ ಮಾಜಿ ಸಚಿವ ರಾಮನಾಯಕೆ (57) ಎಂಬುವರೇ 4 ವರ್ಷದ ಸಜೆಗೆ ಗುರಿಯಾದವರು. ಆದರೆ ತಾನು ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ನನ್ನನ್ನು ಗುರಿಯಾಗಿಸಲಾಗಿದೆ ಎಂದು ರಂಜನ್ ರಾಮನಾಯಕೆ ಅವರು ದೂರಿದ್ದಾರೆ.
ಆದರೆ ಈ ಬಗ್ಗೆ 20 ಪುಟಗಳ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ನ್ಯಾಯಾಧೀಶರ ವಿರುದ್ಧ 2017ರಲ್ಲಿ ರಾಮನಾಯಕೆ ನೀಡಿದ ಭ್ರಷ್ಟಾಚಾರದ ಹೇಳಿಕೆಯನ್ನು ನ್ಯಾಯಾಂಗ ನಿಂದನೆಯಾಗಿ ಪರಿಗಣಿಸಲಾಗಿದ್ದು, ರಾಮನಾಯಕೆ ದೋಷಿಯಾಗಿದ್ದಾರೆ. ಹಾಗಾಗಿ ಅವರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತಿದೆ ಎಂದಿದೆ.