'ಅದೊಂದು ವಿಚಾರದಲ್ಲಿ ಗಾಂಧೀಜಿ ಹಾಗೆ ಮಾಡಬಾರದಿತ್ತು'

By Suvarna NewsFirst Published Nov 18, 2020, 4:47 PM IST
Highlights

ರಾಮಾಯಣ ಮತ್ತು ಮಹಾಭಾರತದ ಕತೆ ಕೇಳಿ ಬೆಳೆದೆ/ ಆತ್ಮಕತೆಯಲ್ಲಿ ಒಬಾಮಾ ಉಲ್ಲೇಖ/ ತಮ್ಮ ಬಾಲ್ಯದ ದಿನಗಳನ್ನು ತೆರೆದಿಟ್ಟ ಅಮೆರಿಕ ಮಾಜಿ ಅಧ್ಯಕ್ಷ/  ಗಾಂಧೀಜಿ ಜಾತಿ ವ್ಯವಸ್ಥೆಗೆ ಪರಿಹಾರ ಹುಡುಕಲಿಲ್ಲ

ವಾಷಿಂಗ್ ಟನ್(ನ.  18) ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಜೀವನ ಚರಿತ್ರೆ 'ಅ ಪ್ರಾಮೀಸ್ಡ್ ಲ್ಯಾಂಡ್' ನಲ್ಲಿ ಭಾರತದ ವಿಚಾರಗಳನ್ನು ಹೇಳಿದ್ದಾರೆ. ರಾಮಾಯಣ ಮತ್ತು ಮಹಾಭಾರತದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ.

ಭಾರತಕ್ಕೆ ವಿಶೇಷ ಸ್ಥಾನ ನೀಡಿರುವ ಒಬಾಮ ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಬಾಲ್ಯದಲ್ಲಿ ಕೇಳಿ ಬೆಳೆದಿದ್ದೇನೆ ಎಂದಿದ್ದಾರೆ. ಭಾರತದಕ್ಕೆ ಪುರಾತನ ಮಾನ್ಯತೆ ಇದೆ. ಏಳು ನೂರು ಭಾಷೆಗಳ ಸಮ್ಮಿಲನ  ಇದೆ ಎಂದು ದಾಖಲೆಮಾಡಿದ್ದಾರೆ.


2010 ರವರೆಗೂ ನಾನು ಭಾರತಕ್ಕೆ  ಭೇಟಿ ಕೊಟ್ಟಿರಲಿಲ್ಲ. ಆದರೆ ಭಾರತದ ಬಗ್ಗೆ ವಿಶೇಷವಾದ ಸ್ಥಾನವೊಂದನ್ನು ಆಗಲೇ ನೀಡಿದ್ದೆ. ಇದಕ್ಕೆ ಕಾರಣ ಇದೆ. ನನ್ನ ಬಾಲ್ಯದ ದಿನಗಳನ್ನು ಇಂಡೋನೇಷಿಯಾದಲ್ಲಿ ಕಳೆದೆ. ಅಲ್ಲಿ ರಾಮಾಯಣ ಮತ್ತು ಮಹಾಭಾರತದ ಕತೆ ಆಲಿಸುತ್ತಿದ್ದೆ. 

'ಮನಮೋಹನ್ ಸಿಂಗ್‌ಗೆ ಸೋನಿಯಾ ಪಟ್ಟ ಕಟ್ಟಿದ್ದು ಯಾಕೆ?'

ಭಾರತ ಮತ್ತು ಪಾಕಿಸ್ತಾನದ ಕಾಲೇಜು ಗೆಳೆಯರು ದಾಲ್ ಮತ್ತು ಕೀಮಾ ಮಾಡುವುದನ್ನು ಹೇಳಿಕೊಟ್ಟಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಕಾಂಗ್ರೆಸ್ ಬಗ್ಗೆಯೂ ಮಾತನಾಡಿರುವ ಒಬಾಮಾ ಸೋನಿಯಾ ಗಾಂಧಿ ಯಾವ ಕಾರಣಕ್ಕೆ ಮನಮೋಹನ್ ಸಿಂಗ್ ಅವರನ್ನು  ಪ್ರಧಾನಿಯಾಗಿ ಆಯ್ಕೆ ಮಾಡಿಕೊಂಡಿದ್ದರು ಎಂಬ ವಿವರವನ್ನು ಹೇಳಿದ್ದರು.

ಗಾಂಧೀಜಿ ಭಾರತದ ಜಾತಿ ವ್ಯವಸ್ಥೆಗೆ ಪರಿಹಾರ ನೀಡಲಿಲ್ಲ; ಭಾರತದ ಬಗೆಗಿನ ನನ್ನ ಸೆಳೆತಕ್ಕೆ ಮುಖ್ಯ ಕಾರಣ ಮಹಾತ್ಮ ಗಾಂಧೀಜಿ. ಬ್ರಿಟಿಷರ ವಿರುದ್ಧ ಅವರು ನಡೆಸಿದ ಅಹಿಂಸಾ ಚಳವಳಿ.  ಆದರೆ ಗಾಂಧಿ ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿಭಾಯಿಸಲಿಲ್ಲ. ಧರ್ಮದ ಆಧಾರದ ಮೇಲೆ ದೇಶ ವಿಭಜನೆ ತಡೆಯಲಿಲ್ಲ ಎಂದು ಒಬಾಮಾ ಬೇಸರ ವ್ಯಕ್ತಪಡಿಸಿದ್ದಾರೆ. 

click me!