ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಜೀವನ ಚರಿತ್ರೆ/ ಗಾಂಧಿಗಳ ಬಗ್ಗೆ ಬರೆದ ಒಬಾಮಾ/ ಮನಮೋಹನ್ ಸಿಂಗ್ ಆಡಳಿತದಲ್ಲಿ ಏನಾಗಿತ್ತು/ ಪ್ರಧಾನಿ ಸ್ಥಾನಕ್ಕೆ ಮನಮೋಹನ್ ಆಯ್ಕೆ ಮಾಡಿದ್ದು ಯಾಕೆ?
ವಾಷಿಂಗ್ ಟನ್(ನ. 17) ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಜೀವನ ಚರಿತ್ರೆ 'ಅ ಪ್ರಾಮೀಸ್ಡ್ ಲ್ಯಾಂಡ್' ನಲ್ಲಿ ಭಾರತದ ಅನೇಕ ನಾಯಕರ ಬಗ್ಗೆಯೂ ಮಾತನಾಡಿದ್ದಾರೆ. ಗಾಂಧಿಗಳ ಬಗ್ಗೆ ಒಬಾಮಾ ಹೇಳಿರುವುದನ್ನು ಬಿಜೆಪಿ ಹೈಲೈಟ್ ಮಾಡಿದೆ.
1990 ರ ದಶಕದಲ್ಲಿ ಭಾರತವು ಮಾರುಕಟ್ಟೆ ಆಧಾರಿತ ಆರ್ಥಿಕತೆಯಾಯಿತು. ಮಧ್ಯಮ ವರ್ಗದವರ ಜೀವನ ಮಟ್ಟದಲ್ಲಿ ಮಹತ್ವದ ಬದಲಾವಣೆಗಳು ಆದವು. ಭಾರತದ ಆರ್ಥಿಕ ಪರಿವರ್ತನೆಯ ಮುಖ್ಯ ವಾಸ್ತುಶಿಲ್ಪಿಯಾಗಿ ಮನಮೋಹನ್ ಸಿಂಗ್ ಕಾಣಿಸಿಕೊಂಡರು. ಸಣ್ಣ ಸಿಖ್ ಸಮುದಾಯಕ್ಕೆ ಸೇರಿದ್ದ ಸಿಂಗ್ ಜನರ ಪ್ರೀತಿ ಗೆದ್ದರು ಎಂದು ಒಬಾಮಾ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.
ತಾಜ್ ಜಹೋಟೆಲ್ ಮೇಲೆ ಪಾಕ್ ಪ್ರೇರಿತ ಉಗ್ರಗಾಮಿಗಳು ಮಾಡಿದ್ದ ದಾಳಿ ಸಂದರ್ಭ ಮತ್ತು ಆ ವೇಳೆ ತೆಗೆದುಕೊಂಡ ಕೆಲ ನಿರ್ಧಾರಗಳು ಮನಮೋಹನ್ ಸಿಂಗ್ ಅವರಿಗೆ ರಾಜಕೀಯ ಹೊಡೆತ ನೀಡಿದವು. ಮುಸ್ಲಿಂ ವಿರೋಧಿ ನೀತಿ ಬೆಳವಣಿಗೆ ಸಹಜವಾಗಿಯೇ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿಗೆ ಲಾಭ ಮಾಡಿಕೊಟ್ಟಿತು. ಧಾರ್ಮಿಕ ಮತ್ತು ಜನಾಂಗೀಯ ಒಗ್ಗಟ್ಟು ಅಮಲು ಏರಿಸಬಹುದು ಎಂದು ಒಂದು ಕಡೆ ಒಬಾಮ ಹೇಳುತ್ತಾರೆ.
undefined
ಭಾರತದ ರಾಜಕಾರಣ ಇಂದಿಗೂ ಧರ್ಮ, ಆರೋಪ, ಜಾತಿ ಮೇಲೆ ನಿರ್ಧರಿತವಾಗುತ್ತಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದು ದೇಶದ ಅಭಿವೃದ್ಧಿ ಕಾರಣಕ್ಕೆ ಎಂಬುದು ಸಂಪೂರ್ಣ ನಿಜವಲ್ಲ ಎಂಬ ಮಾತನ್ನು ಹೇಳುತ್ತಾರೆ.
ಇಂದಿರಾಗೆ ತುರ್ತುಪರಿಸ್ಥಿತಿ ಹೇರಲು ಸಲಹೆ ನೀಡಿದ್ದು ಯಾರು?
ರಾಜಕೀಯ ಚಿಂತಕರು ಹೇಳುವಂತೆ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ ಅವರನ್ನು ಆಯ್ಕೆ ಮಾಡಿಕೊಂಡರು. ಪ್ರಬಲ ಸಮುದಾಯದಿಂದ ಬಂದ ವ್ಯಕ್ತಿ ಅಲ್ಲದಿರುವುದು, ಯಾವುದೆ ರಾಜಕೀಯ ಹಿನ್ನೆಲೆ ಇಲ್ಲದಿರುವುದು ಇದಕ್ಕೆ ಕಾರಣವಾಗಿತ್ತು. ತಮ್ಮ ಪುತ್ರ ರಾಹುಲ್ ಗಾಂಧಿಗೆ ಯಾವುದೇ ಅಪಾಯ ಆಗದಂತೆ ಎಚ್ಚರ ವಹಿಸಿದ್ದರು ಎಂದು ಒಬಾಮಾ ಒಂದು ಕಡೆ ಉಲ್ಲೇಖ ಮಾಡುತ್ತಾರೆ.
ಮನಮೋಹನ್ ಸಿಂಗ್ ಮನೆಯಲ್ಲಿ ಡಿನ್ನರ್ ಗೆ ಒಂದಾಗಿದ್ದ ಘಟನೆಯನ್ನು ಒಬಾಮಾ ಹೇಳುತ್ತಾರೆ. ಡಿನ್ನರ್ ಗೆ ಸೋನಿಯಾ ಮತ್ತು ರಾಹುಲ್ ಸಹ ಬಂದಿದ್ದರು.
ಜಾಸ್ತಿ ಆಲಿಸುತ್ತಿದ್ದ ಸೋನಿಯಾ ಅತಿ ಕಡಿಮೆ ಮಾತನಾಡುತ್ತಿದ್ದರು. ಪಾಲಿಸಿ ಮ್ಯಾಟರ್ ಗಳು ಬಂದಾಗ ಮತ್ತಷ್ಟು ಎಚ್ಚರಿಕೆ ವಹಿಸುತ್ತಿದ್ದರು. ಮಾತುಕತೆ ತಮ್ಮ ಪುತ್ರನ ಕಡೆ ತಿರುಗುವಂತೆ ಮಾಡುತ್ತಿದ್ದರು ಎಂದು ಒಬಾಮಾ ತಿಳಿಸಿದ್ದಾರೆ.
ನನಗೆ ಇಲ್ಲಿ ಒಂದು ವಿಚಾರ ಸ್ಪಷ್ಟವಾಗಿತ್ತು. ತಮ್ಮ ಪುತ್ರನನನ್ನು ಭವಿಷ್ಯದ ನಾಯಕನನ್ನಾಗಿ ಮಾಡಲು ಒಂದು ಕೋಟೆ ಕಟ್ಟಿಕೊಂಡಿದ್ದರು. ಮನಮೋಹನ್ ಸಿಂಗ್ ಅಧಿಕಾರ ತೊರೆದ ಮೇಲೆ ಆ ಜಾಗಕ್ಕೆ ರಾಹುಲ್ ಬಂದರು.. ಆದರೆ ಅದನ್ನು ಸಂಪೂರ್ಣವಾಗಿ ಭರಿಸಲು ವಿಫಲರಾದರು. ಇದರ ಲಾಭ ಬಿಜೆಪಿ ಪಡೆದುಕೊಂಡಿತು ಎಂದು ಒಬಾಮಾ ಬರೆದಿದ್ದಾರೆ.