Russia Ukraine War: ಉಕ್ರೇನ್‌ ಬಿಟ್ಟು ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಆಹಾರ ನೀಡಿದ ಸಿಖ್‌ ವ್ಯಕ್ತಿ

By Suvarna News  |  First Published Feb 28, 2022, 10:34 AM IST
  • ದೇಶ ಬಿಟ್ಟು ಹೋಗುತ್ತಿರುವವರಿಗೆ ಆಹಾರ ನೀಡಿದ ಸಿಖ್‌ ವ್ಯಕ್ತಿ
  • ಜೀವ ಉಳಿಸಿಕೊಳ್ಳಲು ದೇಶ ಬಿಡುತ್ತಿರುವ ಉಕ್ರೇನ್‌ ಜನ
  • ಪೋಲೆಂಡ್‌ನತ್ತ ತೆರಳುವ ರೈಲಿನಲ್ಲಿರುವ ಜನರಿಗೆ ಆಹಾರ

ಉಕ್ರೇನ್‌  ಮೇಲೆ ರಷ್ಯಾ ಆಕ್ರಮಣ ಮಾಡಲು ಶುರು ಮಾಡಿ ಈಗಾಗಲೇ ಐದು ದಿನಗಳು ಕಳೆದಿದ್ದು, ಆರನೇ ದಿನವೂ ಯುದ್ಧ ಮುಂದುವರೆದಿದೆ. ನಾಗರಿಕ ಪ್ರದೇಶಗಳ ಮೇಲೂ ಯಾವುದೇ ಕರುಣೆ ಇಲ್ಲದೇ ರಷ್ಯಾ ಬಾಂಬ್‌ ದಾಳಿಗಳನ್ನು ನಡೆಸುತ್ತಿದೆ. ಈ ಮಧ್ಯೆ ಇಲ್ಲಿನ ನಾಗರಿಕರು ಜೀವ ಉಳಿಸಿಕೊಳ್ಳುವ ಸಲುವಾಗಿ ಸಮೀಪದ ದೇಶಗಳತ್ತ ವಲಸೆ ಹೋಗುತ್ತಿದ್ದಾರೆ. ಇವರಲ್ಲದೇ ಶಿಕ್ಷಣಕ್ಕಾಗಿ ಈ ದೇಶಕ್ಕೆ ಬಂದ ವಿವಿಧ ದೇಶಗಳ ಸಾವಿರಾರು ವಿದ್ಯಾರ್ಥಿಗಳು ಸಮೀಪದ ದೇಶಗಳಿಗೆ ಹೊರಟು ಹೋಗುತ್ತಿದ್ದಾರೆ. ಹೀಗೆ ಹೋಗುತ್ತಿರುವ  ಅನೇಕ ವಿದ್ಯಾರ್ಥಿಗಳಿಗೆ ರೈಲಿನಲ್ಲಿ ಸಿಖ್ ವ್ಯಕ್ತಿಯೊಬ್ಬರು ಆಹಾರ ನೀಡುತ್ತಿದ್ದು, ಇದರ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಖಲ್ಸಾ ಏಡ್‌ ಸಂಸ್ಥಾಪಕ ರವೀಂದರ್‌ ಸಿಂಗ್‌ (Ravinder Singh) ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದು ವಿಡಿಯೋ ವೈರಲ್‌ ಆಗಿದೆ. 

ವಿದ್ಯಾರ್ಥಿಗಳು ಪ್ರಯಾಣಿಸುತ್ತಿರುವ ಈ ರೈಲು ಪೂರ್ವ ಉಕ್ರೇನ್‌ನಿಂದ (Ukraine) ಪೊಲೆಂಡ್‌ ನ ಗಡಿಯತ್ತ ಪ್ರಯಾಣಿಸುತ್ತಿದೆ. 18 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಹರ್‌ದೀಪ್ ಸಿಂಗ್ (Hardeep Singh) ಎಂಬುವವರು ಉಕ್ರೇನ್‌ ತೊರೆಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಹಾರ ನೀಡುತ್ತಿರುವ ದೃಶ್ಯವಿದೆ. ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ.  ಅಲ್ಲದೇ ನೆಟ್ಟಿಗರು ಇವರ ಈ ಉತ್ತಮ ಕಾರ್ಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಎಲ್ಲಾ ಹೀರೋಗಳು ಟೋಪಿ ಧರಿಸಿರುವುದಿಲ್ಲ, ಕೆಲವರು ಟರ್ಬನ್‌ ಧರಿಸಿರುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

: Guru Ka Langar on a train

These guys were fortunate to get on this train which is travelling east of Ukraine to the west (to Polish border )

Hardeep Singh has been providing Langar and assistance to many students from different countries.What a guy pic.twitter.com/CyWZnWVePz

— ravinder singh (@RaviSinghKA)

Tap to resize

Latest Videos

 

ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ವಾಪಸಾತಿ ಸೇರಿದಂತೆ ಇತರ ಸಂದರ್ಭಗಳ ಕುರಿತು ಚರ್ಚಿಸಲು ಭಾನುವಾರ ಪ್ರಧಾನಿ ನರೇಂದ್ರ ಮೋದಿ (ಪಿಎಂ ಮೋದಿ) ಉನ್ನತ ಮಟ್ಟದ ಸಭೆ (ಎಚ್‌ಎಲ್‌ಎಂ) ನಡೆಸಿದ್ಧರು. ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಹಿಂತಿರುಗಿದ ಪ್ರಧಾನಿ ಮೋದಿಯವರ ಉನ್ನತ ಮಟ್ಟದ ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಪ್ರಸ್ತುತಿ ನೀಡಿದರು. ಉಕ್ರೇನ್‌ನಲ್ಲಿ ಸುಮಾರು 16,000 ಭಾರತೀಯರು ಸಿಲುಕಿಕೊಂಡಿದ್ದಾರೆ, ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು.

Russia Ukraine Crisis: ಉಕ್ರೇನ್‌ನ 2ನೇ ದೊಡ್ಡ ನಗರಕ್ಕೆ ರಷ್ಯಾ ಸೇನೆ ಲಗ್ಗೆ
 

ಪ್ರಧಾನಿಯವರ ಸಭೆ 2 ಗಂಟೆಗೂ ಹೆಚ್ಚು ಕಾಲ ನಡೆಯಿತು. ನಮ್ಮ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸ್ಥಳಾಂತರಿಸುವಿಕೆಯನ್ನು ಖಚಿತಪಡಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದರು. ಸ್ಥಳಾಂತರಿಸುವಿಕೆಯನ್ನು ತ್ವರಿತಗೊಳಿಸಲು ಉಕ್ರೇನ್‌ನ ನೆರೆಯ ರಾಷ್ಟ್ರಗಳೊಂದಿಗೆ ಸಹಕಾರವನ್ನು ಹೆಚ್ಚಿಸಲು ಚರ್ಚೆಗಳನ್ನು ನಡೆಸಲಾಯಿತು.

ಅಂತಾರಾಷ್ಟ್ರೀಯ ಕೋರ್ಟ್‌ಗೆ ಉಕ್ರೇನ್‌ ಮೊರೆ: ಭದ್ರತಾ ಮಂಡಳಿಯಿಂದ ರಷ್ಯಾ ವಜಾಗೆ ಬಿಗಿಪಟ್ಟು
 

ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿದ್ದ ಪ್ರಧಾನಿ ಮೋದಿ 

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ತಕ್ಷಣ, ಪ್ರಧಾನಿ ಮೋದಿ ಅವರು ಗುರುವಾರ ಸಂಜೆ ಸಂಪುಟ ಭದ್ರತಾ ಸಮಿತಿಯ ಸಭೆ ನಡೆಸಿದರು. ಈ ಸಭೆಯಲ್ಲಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಕುರಿತು ಚರ್ಚಿಸಲಾಯಿತು. ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿದ್ದಾರೆ. ಪುಟಿನ್ ಜೊತೆಗಿನ ಮಾತುಕತೆಯ ವೇಳೆ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಎಂದು ಪಿಎಂಒ ಹೇಳಿದೆ. ಅಲ್ಲದೆ, ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ವಾಪಸಾತಿಯ ಬಗ್ಗೆ ಮಾತನಾಡಿದ್ದಾರೆ.
 

click me!