ಲಾಹೋರಿನಲ್ಲಿ ಮಹಾರಾಜ ರಂಜಿತ್ ಸಿಂಗ್ ಪುತ್ಥಳಿ ಧ್ವಂಸ

By Suvarna NewsFirst Published Aug 17, 2021, 8:05 PM IST
Highlights

* ಲಾಹೋರಿನಲ್ಲಿ ಮಹಾರಾಜ ರಂಜಿತ್ ಸಿಂಗ್ ಪುತ್ಥಳಿ ಧ್ವಂಸ
* ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಯೋ
* ತರೀಕ್- ಇ- ಲಬೀಕ್ ಗ್ರೂಪ್ ಗೆ ಸೇರಿದ ಸದಸ್ಯರಿಂದ ದಾಳಿ
*  2019 ರಲ್ಲಿ ಕಂಚಿನ ಪ್ರತಿಮೆ ಅನಾವರಣ ಮಾಡಲಾಗಿತ್ತು

ಲಾಹೋರ್(ಆ. 17)  ಪಾಕಿಸ್ತಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ಪುತ್ಥಳಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ.. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

ತರೀಕ್- ಇ- ಲಬೀಕ್ ಗ್ರೂಪ್ ಗೆ ಸೇರಿದ ಸದಸ್ಯರು ದಾಳಿ ಮಾಡಿದ್ದಾರೆ.  ಲಾಹೋರಿನಲ್ಲಿ ನಡೆದಿರುವ ಘಟನೆ ವೈರಲ್ ಆಗುತ್ತಿದೆ. ಒಂಭತ್ತು ಅಡಿಯ ಪುತ್ಥಳಿಯನ್ನು 2019 ರಲ್ಲಿ ಅನಾವರಣ ಮಾಡಲಾಗಿತ್ತು.  ಮಹಾರಾಜ ರಂಜಿತ್ ಸಿಂಗ್ 180ನೇ ಪುಣ್ಯಸ್ಮರಣೆ ನಿಮಿತ್ತ ಕಂಚಿನ ಪುತ್ಥಳಿ ಅನಾವರಣ ಮಾಡಲಾಗಿತ್ತು.

ಮಾಡುವಷ್ಟು ಮಾಡಿ ಈಗ ಶಾಂತಿ ಸಂದೇಶ ಎಂದ ತಾಲೀಬಾನಿಗಳು

ಸಿಖ್ ದೊರೆಯಾಗಿದ್ದ ರಂಜಿತ್ ಸಿಂಗ್ 1839ರಲ್ಲಿ ನಿಧನರಾಗುವ ಮುನ್ನ 40  ವರ್ಷ ಕಾಲ ಪಂಜಾಬ್ ಪ್ರ್ಯಾಂತ್ಯವನ್ನು ಆಳಿದ್ದರು.  ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದಿದ್ದು ತರೀಕ್- ಇ- ಲಬೀಕ್ ಪಾಕಿಸ್ತಾನದ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡಿತ್ತು. 

"

 

click me!