
ಲಂಡನ್ (ಜು.24) ಸೌದಿ ಪ್ರಿನ್ಸ್ ಅಬ್ದುಲ್ಲಾ ಬಿನ್ ಫಹಾದ್ ಬಿನ್ ಅಬ್ದುಲ್ಹಾ ಬಿನ್ ಅಬ್ದುಲ್ಹಾಜಿಜ್ ಬಿನ್ ಜಲ್ವೈ ಅಲ್ ಸೌದ್ ನಿಗೂಢ ಸಾವಿನ ಹಲವು ಸ್ಫೋಟಕ ಮಾಹಿತಿ ಹೊರಬಂದಿದೆ. ಯುವ ರಾಜಕುಮಾರ್ ಲಂಡನ್ ಐಷಾರಾಮಿ ಹೊಟೆಲ್‌ನಲ್ಲಿ ತಂಗಿದ್ದ ವೇಳೆ ಈ ಘಟನೆ ನಡೆದಿತ್ತು. ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ಯುವ ರಾಜಕುಮಾರ್ ಅಬ್ದುಲ್ಹಾ ಬಿನ್ ಫಹಾದ್ ಸಾವಿನ ಕುರಿತು ಸುದೀರ್ಘ ತನಿಖೆ ಇದೀಗ ಕಾರಣಗಳನ್ನು ಬಹಿರಂಗಪಡಿಸಿದೆ. ಕಳೆದ ವರ್ಷ ನಡೆದ ಸೌದಿ ಪ್ರಿನ್ಸ್ ಸಾವಿನ ಕುರಿತು ಯುಕೆ ತನಿಖಾ ಸಂಸ್ಥೆ ವರದಿ ನೀಡಿದೆ.
ಕೇವಲ 29 ವರ್ಷದ ಸೌದಿ ಪ್ರಿನ್ಸ್ ಕಳೆದ ವರ್ಷ ನವೆಂಬರ್ 25 ರಂದು ಲಂಡನ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಲಂಡನ್‌ನ ಐಷಾರಾಮಿ ಹೊಟೆಲ್‌ನಲ್ಲಿ ತಂಗಿದ್ದರು. ತಡ ರಾತ್ರಿ ವರೆಗೂ ಹಲವು ಆರ್ಡರ್ ಮಾಡಿದ್ದ ಸೌದಿ ಪ್ರಿನ್ಸ್ ಮರುದಿನ ಬೆಳಗ್ಗೆ ನಿಗೂಢವಾಗಿ ಮೃತಪಟ್ಟಿದ್ದರು. ಎಷ್ಟು ಹೊತ್ತಾದರೂ ಕೋಣೆಯಿಂದ ಹೊರಬರದ ಕಾರಣ ಸಿಬ್ಬಂದಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿಗಳು ಬಾಗಿಲು ಓಡೆದು ಒಳಗೆ ಪ್ರವೇಶಿಸಿದಾಗ ನಿರ್ಜೀವಾಗಿ ಸೌದಿ ಪ್ರಿನ್ಸ್ ಮಲಗಿದ್ದರು. ತಕ್ಷಣವೇ ಆಸ್ಪತ್ರೆಯ ವೈದ್ಯರಿಂದ ನರೆವು ನೀಡಿದರೂ ಯಾವುದೇ ಸ್ಪಂದನೆ ಇರಲಿಲ್ಲ. ಆಸ್ಪತ್ರೆ ದಾಖಲಿಸಿದಾಗ ವೈದ್ಯರ ಪರಿಶೀಲಿಸಿ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ಲಂಡನ್ ಮ್ಯಾರಿಯೆಟ್ ಹೊಟೆಲ್‌ನಲ್ಲಿ ತಂಗಿದ್ದ ಸೌದಿ ಪ್ರಿನ್ಸ್ ತಡ ರಾತ್ರಿವರೆಗೂ ವಿಪರೀತ ಮದ್ಯ ಸೇವಿಸಿದ್ದರು. ಜೊತೆಗೆ ಹಲವು ಡ್ರಗ್ಸ್ ತೆಗೆದುಕೊಂಡಿದ್ದರು. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮುಂಜಾನೆ ವೇಳೆಗೆ ಸೌದಿ ಪ್ರಿನ್ಸ್ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂಬದು ತನಿಖೆಯಿಂದ ಬಹಿರಂಗವಾಗಿದೆ. ಸೌದಿ ದೇಹದ ಮೆಡಿಲಕ್ ಟೆಸ್ಟ್, ಡ್ರಗ್ಸ್ ಸ್ಯಾಂಪಲ್ಸ್ ಎಲ್ಲವೂ ಸಾಬೀತಾಗಿದೆ.
ಸೌದಿ ಪ್ರಿನ್ಸ್ ಸ್ವಯಂ ಪ್ರೇರಿತವಾಗಿ ಅಥವಾ ಮೂರನೇ ವ್ಯಕ್ತಿಯಿಂದ ದಾಳಿಯಾಗಲಿ ನಡೆದಿಲ್ಲ. ತಮ್ಮ ಆರೋಗ್ಯ, ಜೀವನದ ಜೊತೆ ಚೆಲ್ಲಾಟವಾಡಿದ ಪ್ರಿನ್ಸ್, ವಿಪರೀತ ಮದ್ಯ ಹಾಗೂ ಡ್ರಗ್ಸ್‌ನಿಂದ ಮೃತಪಟ್ಟಿದ್ದಾರೆ ಎಂಬುದ ವೈದ್ಯಕೀಯ ಪರೀಕ್ಷೆಗಳಿಂದ ಸಾಬೀತಾಗಿದೆ.
ಪ್ರಿನ್ಸ್ ಅಬ್ದುಲ್ಹಾ ಬಿನ್ ವೈದ್ಯಕೀಯ ವರದಿ ಅದರಲ್ಲೂ ಪ್ರಮುಖವಾಗಿ ಟಾಕ್ಸಿಕಾಲಜಿ ವರದಿಯಲ್ಲಿ ವಿಪರೀತ ಮದ್ಯ ಸೇವನೆ ಸಾಬೀತಾಗಿದೆ. ಇನ್ನು ಜಿಬಿಹೆಚ್ ಸೇರಿದಂತೆ ಹಲವು ಡ್ರಗ್ಸ್ ದೇಹದಲ್ಲಿ ಪತ್ತೆಯಾಗಿತ್ತು. ಇನ್ನು ಸಿಸಿಟಿವಿ ಸೇರಿದಂತೆ ಹಲವು ದಾಖಳೆಗಳನ್ನು ವಿಚಾರಣೆ ವೇಳೆ ಸಲ್ಲಿಕೆ ಮಾಡಲಾಗಿತ್ತು. ಸಂಪೂರ್ಣ ತನಿಖೆ ಹಾಗೂ ವಿಚಾರಣೆಯಲ್ಲಿ ಪ್ರಿನ್ಸ್ ಅಬ್ದುಲ್ಹಾ ಸಾವಿನ ರಹಸ್ಯ ಕೊನೆಗೂ ಬಹಿರಂಗವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ