ಒಂದೇ ಶಾಲೆಯ ಶಿಕ್ಷಕಿ, ವಿದ್ಯಾರ್ಥಿನಿ, ಪ್ರಿನ್ಸಿಪಾಲ್, ಸೂಪರ್‌ವೈಸರ್‌ನ್ನ ಮದುವೆಯಾದ ವ್ಯಕ್ತಿ

Published : Aug 02, 2025, 01:37 PM ISTUpdated : Aug 02, 2025, 01:38 PM IST
Saudi Arabia Man

ಸಾರಾಂಶ

ಸೌದಿ ವ್ಯಕ್ತಿಯೊಬ್ಬರು ಒಂದೇ ಶಾಲೆಯಲ್ಲಿ ನಾಲ್ವರು ಮಹಿಳೆಯರನ್ನು ವಿವಾಹವಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸುದ್ದಿಯ ಹಿಂದಿನ ಸತ್ಯಾಸತ್ಯತೆ ಏನು ಎಂಬುದನ್ನು ತಿಳಿದುಕೊಳ್ಳೋಣ.

ರಿಯಾದ್: ಸಾಮಾಜಿಕ ಜಾಲತಾಣದಲ್ಲೊಂದು ಪೋಸ್ಟ್ ಬೆಂಕಿಯಂತೆ ಶೇರ್ ಆಗುತ್ತಿದೆ. ಸೌದಿ ವ್ಯಕ್ತಿಯೊಬ್ಬ ನಾಲ್ಕನೇ ಮದುವೆಯಾಗಿದ್ದಾನೆ ಎಂಬ ನ್ಯೂಸ್ ಹರಿದಾಡುತ್ತಿದೆ. ಈ ವ್ಯಕ್ತಿ ನಾಲ್ಕನೇ ಮದುವೆಯಾಗಿದ್ದರಲ್ಲಿ ವಿಶೇಷತೆ ಇದೆ. ಈತನ ನಾಲ್ವರು ಪತ್ನಿಯರು ಒಂದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೇ ಶಾಲೆಯ ನಾಲ್ವರನ್ನು ಈ ವ್ಯಕ್ತಿ ಮದುವೆಯಾಗಿದ್ದಾನೆ ಹೆಸರಿನಲ್ಲಿ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮೊದಲು ‘Life in Saudi Arabia' ಹೆಸರಿನ ಪೇಜ್‌ನಲ್ಲಿ ನಾಲ್ಕು ಮದುವೆಯ ಕುರಿತಾದ ಪೋಸ್ಟ್ ಹಂಚಿಕೊಳ್ಳಲಾಗಿತ್ತು. ನಂತರ ನೆಟ್ಟಿಗರು AI ಇಮೇಜ್ ಬಳಸಿಕೊಂಡು ತಮಾಷೆ ಸಾಲುಗಳನ್ನು ಬರೆದುಕೊಂಡು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಸೌದಿ ಅರೇಬಿಯಾದ ವ್ಯಕ್ತಿಯೊಬ್ಬರು, ಒಂದೇ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕಿ, ಸೂಪರ್‌ ವೈಸರ್, ಪ್ರಿನ್ಸಿಪಾಲ್ ಮತ್ತು ಅಲ್ಲಿಯೇ ಓದುತ್ತಿರುವ ವಿದ್ಯಾರ್ಥಿನಿಯನ್ನು ಮದುವೆಯಾಗಿದ್ದಾನೆ ಎಂದು ವೈರಲ್ ಪೋಸ್ಟ್‌ಗಳು ಹೇಳುತ್ತಿವೆ. ವಿವಿಧ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಆದ್ರೆ ಈ ಪೋಸ್ಟ್ ಸತ್ಯವೇ ಎಂದು ನೋಡೋಣ ಬನ್ನಿ.

ವೈರಲ್ ಸುದ್ದಿ ಹಿಂದಿನ ಸತ್ಯ ಏನು?

OpIndia ವರದಿ ಪ್ರಕಾರ, ಇದು 2012ರ ನ್ಯೂಸ್ ಆಗಿದ್ದು, ಮತ್ತೊಮ್ಮೆ ಮುನ್ನಲೆಗೆ ಬಂದಿದೆ. 2012ರಲ್ಲಿ “ಲೈಫ್ ಇನ್ ಸೌದಿ ಅರೇಬಿಯಾ,” “ದಿ ಇಂಡಿಪೆಂಡೆಂಟ್,” ಮತ್ತು “ಗಲ್ಫ್ ನ್ಯೂಸ್” ಈ ಕುರಿತು ವರದಿಯನ್ನು ಮಾಡಿದ್ದವು. Life in Saudi Arabia ವರದಿ ಪ್ರಕಾರ, ಈ ಸುದ್ದಿ ನಿಜವಾಗಿದೆ. ಮೂವರು ಪತ್ನಿಯರು ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಆತ ನಾಲ್ಕನೇ ಮದುವೆಯಾಗುತ್ತಾನೆ. ಮೂವರು ಪತ್ನಿಯರು ಕೆಲಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ ಆತನ ನಾಲ್ಕನೇ ಪತ್ನಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ನಾಲ್ವರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆ

ಓರ್ವ ಪತ್ನಿ ಶಿಕ್ಷಕಿ, ಮತ್ತೋರ್ವ ಪತ್ನಿ ಶಿಕ್ಷಕಿಯರನ್ನು ಮೇಲ್ವಿಚಾರಣೆ ಮಾಡುವ ಹುದ್ದೆಯಲ್ಲಿದ್ದರು. ಮೂರನೇಯವರು ಶಾಲೆಯ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುತ್ತಿದ್ದರು. ನಾಲ್ಕನೇ ಪತ್ನಿಯೂ ಅಲ್ಲಿಯೇ ಶಿಕ್ಷಣ ಪಡೆದುಕೊಳ್ಳುತ್ತಿದ್ದಳು ಎಂದು Life in Saudi Arabia ವರದಿ ಪ್ರಕಟಿಸಿದೆ. ಸದ್ಯ ಈ ಪೋಸ್ಟ್ ವೈರಲ್ ಆಗಿದ್ದು, ಆತ ಮಚ್ಚೆ ಇರುವಂತಹ ವ್ಯಕ್ತಿ. ಇಡೀ ಶಾಲೆಯ ಸಿಲ್ಯಾಬಸ್ ಕವರ್ ಮಾಡಿದ್ದಾನೆ ಎಂದು ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.

ಮಕ್ಕಳನ್ನು ಅದೇ ಶಾಲೆಗೆ ಕಳುಹಿಸಿ ದಾಖಲೆ ಮಾಡಿ

ಕೆಲವರು ಇದೊಂದು ಸುಳ್ಳು ಸುದ್ದಿಯಾಗಿದೆ. ಅಲ್ಲಿ ಮಹಿಳೆಯರಿಗೆ ಕೆಲಸ ಮಾಡುವ ಸ್ವಾತಂತ್ರ್ಯ ಇಲ್ಲ ಎಂದಿದ್ದಾರೆ. ಭವಿಷ್ಯದಲ್ಲಿ ಈತ ತನ್ನ ಮಕ್ಕಳನ್ನು ಇದೇ ಶಾಲೆಗೆ ಕಳುಹಿಸಿದ್ರೆ ಮತ್ತೊಂದು ದಾಖಲೆಯಾಗುತ್ತದೆ. ಈ ಫೋಟೋದಲ್ಲಿರುವ ನಾಲ್ವರು ಮಹಿಳೆಯರು ಒಂದೇ ರೀತಿಯಾಗಿ ಕಾಣಿಸುತ್ತಿದೀರಾ? ಇವರೆಲ್ಲಾ ಸಂಬಂಧಿ ಸೋದರಿಯರೇ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ನೆಟ್ಟಿಗರೊಬ್ಬರು, ಇದು ಎಐ ರಚಿತ ಚಿತ್ರ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಸೌದಿ ಪುರುಷರು ಪಾಕ್ ಸೇರಿದಂತೆ ಈ 4 ದೇಶದವರನ್ನು ಮದುವೆಯಾಗುವಂತಿಲ್ಲ!

ಕೆಲವರು ಮುಸ್ಲಿಮರು ನಾಲ್ಕು ಮದುವೆಯಾಗುತ್ತಾರೆ ಮತ್ತು ಜೀವನ ನಡೆಸುತ್ತಾರೆ. ಆದ್ರೆ ನಾಲ್ಕು ಪತ್ನಿಯರು ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡೋದು ಆಶ್ಚರ್ಯವನ್ನುಂಟು ಮಾಡಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ವ್ಯಕ್ತಿಗೂ ಮತ್ತು ನಾಲ್ಕನೇ ಪತ್ನಿಯ ನಡುವಿನ ವಯಸ್ಸಿನ ಅಂತರವೆಷ್ಟು ಎಂದು ಪ್ರಶ್ನೆ ಮಾಡಿದ್ದಾರೆ. ಇದು ಕೇವಲ ಮುಸ್ಲಿಂ ರಾಷ್ಟ್ರಗಳಲ್ಲಿ ಮಾತ್ರ ಸಾಧ್ಯ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಒಂದಿಷ್ಟು ಮಂದಿ ಅಸಭ್ಯ ಮತ್ತ ಅವಹೇಳನಕಾರಿಯಾಗಿ ಕಮೆಂಟ್ ಸಹ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ