
ಸೌದಿ ಅರೇಬಿಯಾ(ಮಾ.28): ರಂಜಾನ್, ಈದ್ ಹಬ್ಬಕ್ಕೆ ತಯಾರಿಗಳು ನಡೆಯುತ್ತಿದೆ. ವಿಶ್ವದೆಲ್ಲಡೆ ಈ ಹಬ್ಬವನ್ನು ಮುಸ್ಲಿಮ್ ಬಾಂದವರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ರಂಜಾನ್, ಈದ್ ಹಬ್ಬದ ಪ್ರಯುಕ್ತ ಸೌದಿ ಅರೆಬಿಯಾದಲ್ಲಿ ಒಂಟೆ ಹರಾಜು ಸಾಮಾನ್ಯ. ಹೀಗೆ ಈ ಬಾರಿಯ ಹರಾಜಿನಲ್ಲಿ ದಾಖಲೆ ಸೃಷ್ಟಿಯಾಗಿದೆ. ಬರೋಬ್ಬರಿ 14 ಕೋಟಿ ರೂಪಾಯಿಗೆ ಒಂದು ಒಂಟೆಯನ್ನು ಖರೀದಿಸಿ ಎಲ್ಲರ ಗಮನಸೆಳೆದಿದ್ದಾರೆ.
ಈದ್ ಹಬ್ಬದ ದಿನ ಸೌದಿ ಅರೆಬಿಯಾದಲ್ಲಿ ಒಂಟೆಗಳನ್ನು ಬಲಿಕೊಡಲಾಗುತ್ತದೆ. ಹೀಗಾಗಿ ಈ ಸಂದರ್ಭಗಳಲ್ಲಿ ಒಂಟೆ ಹರಾಜು ಸಾಮಾನ್ಯವಾಗಿರುತ್ತೆದ. ಸೌದಿ ಅರೆಬಿಯಾದಲ್ಲಿ ಸ್ಥಳೀಯರು ಈ ಹರಾಜಿನಲ್ಲಿ ಪಾಲ್ಗೊಂಡು ಒಂಟೆಗಳನ್ನು ಖರೀದಿಸುತ್ತಾರೆ. ಈ ಬಾರಿ ವಿಶೇಷ ತಳಿಯ ಹಾಗೂ ದೊಡ್ಡ ಗಾತ್ರದ ಒಂಟೆಗಳ ಹರಾಜು ನಡೆದಿದೆ. ನೋಟದಲ್ಲಿ ಸಾಮಾನ್ಯಂತೆ ಕಂಡು ಬಂದ್ ಅರಬ್ ವ್ಯಕ್ತಿ ಸಾಂಪ್ರದಾಯಿಕ ಧಿರಿಸು ಹಾಕಿಕೊಂಡು ಹರಾಜಿನಲ್ಲಿ ಪಾಲ್ಗೊಂಡಿದ್ದ. ಹರಾಜಿನಲ್ಲಿ 7 ಮಿಲಿಯನ್ ಸೌದಿ ರಿಯಾಲ್ ನೀಡಿ ಅಂದರೆ ಭಾರತೀಯ ರೂಪಾಯಿಗಳಲ್ಲಿ 14.23 ಕೋಟಿ ರೂಯಿ ನೀಡಿ ಒಂಟೆ ಖರೀದಿಸಿದ್ದಾನೆ.
ಕುಂದಾನಗರಿಯಲ್ಲಿ ರಂಜಾನ್: ಸಿಹಿ ತಿನಿಸುಗಳೊಂದಿಗೆ ಶುರುವಾಗುತ್ತೆ ಅಜಾನ್!
ವಿಶೇಷ ತಳಿಯ ಒಂಟೆಯಾಗಿರುವ ಕಾರಣ ಹರಾಜು ಆರಂಭಗೊಂಡಿದ್ದೆ 5 ಮಿಲಿಯನ್ ಸೌದಿ ರಿಯಾಲ್ ಅಂದರೆ 10.16 ಕೋಟಿ ರೂಪಾಯಿಯಿಂದ. ಹರಾಜು ಆರಂಭಗೊಂಡ ಬೆನ್ನಲ್ಲೇ 10 ರಿಂದ 12 ಕೋಟಿಗೆ ಏರಿಕೆಯಾಯ್ತು. ಪಟ್ಟು ಬಿಡದ ವ್ಯಕ್ತಿ 14.23 ಕೋಟಿ ರೂಪಾಯಿಗೆ ಬಿಡ್ ಮಾಡಿ ಒಂಟೆ ಖರೀದಿಸಿದ್ದಾನೆ. ಈ ಹರಾಜಿನ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ.
ವಿಶ್ವದಲ್ಲೇ ಅತಿ ವಿರಳ ಪ್ರಬೇಧದ ಒಂಟೆ ತಳಿ ಇದಾಗಿದೆ. ಸೌದಿ ಅರೇಬಿಯಾ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ಈ ಒಂಟೆಯ ಮಾಂಸಕ್ಕೆ ಭಾರಿ ಬೇಡಿಕೆ ಇದೆ. ಹೀಗಾಗಿ ಇದರ ಹರಾಜಿನ ಬೆಲೆ 10 ಕೋಟಿ ರೂಪಾಯಿಯಿಂದ ಆರಂಭಗೊಂಡಿದೆ. 11 ಕೋಟಿ ರೂಪಾಯಿ ವರೆಗೂ ಬಿಡ್ ಆಗಿರುವ ಉದಾಹರಣೆಗಳಿವೆ ಎಂದು ಆಯೋಜಕರು ಹೇಳಿದ್ದಾರೆ. ಆದರೆ ಇದೇ ಮೊದಲ ಬಾರಿಗೆ 14.23 ಕೋಟಿ ರೂಪಾಯಿಗೆ ಬಿಡ್ ಆಗಿದೆ. ಇದು ದಾಖಲೆ ಎಂದು ಆಯೋಜಕರು ಹೇಳಿದ್ದಾರೆ.
ಮುಹಮ್ಮದ್ ಪೈಗಂಬರರ ಬೋಧನೆ ಇಸ್ಲಾಂಗೆ ಸೀಮಿತವಲ್ಲ, ಇಡೀ ಮಾನವಕುಲಕ್ಕೆ ದಾರಿದೀಪ
ಈದ್ ಹಬ್ಬಕ್ಕೆ ಆಯೋಜಿಸುವ ಒಂಟೆ ಹರಾಜಿನಲ್ಲಿ ಪಾಲ್ಗೊಂಡು ಹೆಚ್ಚಿನ ಮೊತ್ತಕ್ಕೆ ಹರಾಜು ಮಾಡುವುದು ಅಲ್ಲಿನ ವಾಡಿಕೆ. ಹೀಗಾಗಿ ಹಲವು ಪ್ರತಿಷ್ಠಿತ ಕುಟುಂಬಗಳು ಜಿದ್ದಿಗೆ ಬಿದ್ದು ಕೋಟಿ ಕೋಟಿ ರೂಪಾಗೆ ಒಂಟೆ ಖರೀದಿಸಿದ ಉದಾಹರಣೆಗಳು ಇವೆ ಎಂದು ಆಯೋಜಕರು ಹೇಳಿದ್ದಾರೆ.
ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವನ್ನು ಮುಸಲ್ಮಾನರು ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ನಿಮಿತ್ತ ಬೆಳಗ್ಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ