Saudi Arabia: ಸೌದಿಯಲ್ಲಿ ಒಂದೇ ದಿನ 81 ಮಂದಿಗೆ ಗಲ್ಲು ಶಿಕ್ಷೆ

By Kannadaprabha News  |  First Published Mar 14, 2022, 7:51 AM IST

ವಿವಿಧ ಪ್ರಕರಣಕ್ಕೆ ಶಿಕ್ಷೆಗೆ ಗುರಿಯಾಗಿದ್ದ 81 ಕೈದಿಗಳನ್ನು ಸೌದಿ ಅರೇಬಿಯಾ ಸರ್ಕಾರ ಶನಿವಾಶ ಗಲ್ಲಿಗೇರಿಸಿದೆ. ಇದು ಸೌದಿಯಲ್ಲಿ ಇದುವರೆಗೆ ಒಂದೇ ದಿನ ಗಲ್ಲು ಶಿಕ್ಷೆ ವಿಧಿಸಿದ ಗರಿಷ್ಠ ಪ್ರಮಾಣವಾಗಿದೆ.


ದುಬೈ (ಮಾ.14): ವಿವಿಧ ಪ್ರಕರಣಕ್ಕೆ ಶಿಕ್ಷೆಗೆ ಗುರಿಯಾಗಿದ್ದ 81 ಕೈದಿಗಳನ್ನು ಸೌದಿ ಅರೇಬಿಯಾ (Saudi Arabia) ಸರ್ಕಾರ ಶನಿವಾರ ಗಲ್ಲಿಗೇರಿಸಿದೆ. ಇದು ಸೌದಿಯಲ್ಲಿ ಇದುವರೆಗೆ ಒಂದೇ ದಿನ ಗಲ್ಲು ಶಿಕ್ಷೆ ವಿಧಿಸಿದ ಗರಿಷ್ಠ ಪ್ರಮಾಣವಾಗಿದೆ. ಇದಕ್ಕೂ ಮುನ್ನಾ 1983ರಲ್ಲಿ ಮೆಕ್ಕಾ ಮಸೀದಿಯ (Makkah Masjid) ಮೇಲೆ ದಾಳಿ ಮಾಡಿ ಮಸೀದಿಯನ್ನು ವಶಪಡಿಸಿಕೊಂಡಿದ್ದ ಹಿನ್ನೆಲೆಯಲ್ಲಿ 63 ಜನರನ್ನು ಗಲ್ಲಿಗೇರಿಸಲಾಗಿತ್ತು.

ಶನಿವಾರ ಮರಣದಂಡನೆ ಶಿಕ್ಷೆಗೆ ಒಳಗಾದವರ 81 ಜನರ ಪೈಕಿ ಪುರುಷರು, ಮಹಿಳೆಯರು, ಮಕ್ಕಳನ್ನು ಕೊಂದವರು, ಅಲ್‌ ಖೈದಾ, ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಗೆ ಸೇರಿದವರು, ಬಂಡುಕೋರರು ಹಾಗೂ ಇನ್ನಿತರ ಪ್ರಕರಣಗಳಲ್ಲಿ ಒಳಗೊಂಡಿದ್ದರು ಎಂದು ಕೋರ್ಟ ತಿಳಿಸಿದೆ. 81 ಜನರ ಪೈಕಿ 73 ಸೌದಿ, 7 ಮಂದಿ ಯೆಮನ್‌ನವರು ಹಾಗೂ ಒಬ್ಬ ಸಿರಿಯನ್‌ ಪ್ರಜೆ ಸೇರಿದ್ದಾನೆ.

Tap to resize

Latest Videos

2016ರಲ್ಲೂ ಕೂಡ ಶಿಯಾ ಧರ್ಮಗುರು ನಿಮರ್‌ ಅಲ್‌ ನಿಯಮ್‌ರ ಸೇರಿದಂತೆ 46 ಜನರನ್ನು ಒಂದೇ ದಿನ ಗಲ್ಲಿಗೇರಿಸಲಾಗಿತ್ತು. ಮರಣದಂಡನೆ ಶಿಕ್ಷೆಯನ್ನು ಶನಿವಾರವೇ ಏಕೆ ಪ್ರಕಟಿಸಿದೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ವಿಶ್ವದ ಗಮನ ರಷ್ಯಾ ಉಕ್ರೇನ್‌ ಯುದ್ಧದ ಮೇಲೆ ಕೇಂದ್ರಿಕೃತವಾಗಿದ್ದ ಬೆನ್ನಲ್ಲೆ ಇಂತಹ ಬೆಳವಣಿಗೆ ನಡೆದಿದ್ದು ಅಚ್ಚರಿಗೆ ಕಾರಣವಾಗಿದೆ.

Ahmedabad Bomb Blasts: ಮಂಗಳೂರಿನ ಇಬ್ಬರಿಗೆ ಗಲ್ಲು

ಯೆಮನ್‌ನಲ್ಲಿ ಕೇರಳ ನರ್ಸ್‌ಗೆ ಗಲ್ಲು ಶಿಕ್ಷೆ: ಯೆಮನ್‌ ಪ್ರಜೆಯೊರ್ವನನ್ನು ಪೀಸುಗಳಾಗಿ ಕತ್ತರಿಸಿ ಕೊಲೆ ಮಾಡಿದ್ದ ಕೇರಳದ ಮಹಿಳೆಗೆ ನೀಡಿದ ಮರಣದಂಡನೆ ಶಿಕ್ಷೆಯನ್ನು ಯೆಮನ್‌ ಕೋರ್ಟ್‌  ಎತ್ತಿ ಹಿಡಿದಿದೆ. 2017ರಲ್ಲಿ ಯೆಮೆನ್ ಪ್ರಜೆಯೊಬ್ಬರ (Yemeni national) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಯನ್ನು ತಗ್ಗಿಸುವಂತೆ ಕೇರಳ ನರ್ಸ್ (Kerala nurse) ನಿಮಿಷಾ ಪ್ರಿಯಾ (Nimisha Priya) ಸಲ್ಲಿಸಿದ್ದ ಮೇಲ್ಮನವಿಯನ್ನು ಯೆಮೆನ್ ನ್ಯಾಯಾಲಯದ ತ್ರಿಸದಸ್ಯ ಪೀಠ ತಿರಸ್ಕರಿಸಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ (Palakkad district)  ಕೊಲ್ಲಂಗೋಡ್ (Kollengode) ಮೂಲದ 33 ವರ್ಷದ ನಿಮಿಷಾ ಈಗ ಯೆಮೆನ್ ಜೈಲಿನಲ್ಲಿ ಕೊಳೆಯುತ್ತಿದ್ದಾಳೆ. ನೀರಿನ ತೊಟ್ಟಿಯಲ್ಲಿ ಯೆಮೆನ್‌ ವ್ಯಕ್ತಿಯನ್ನು  ಉಸಿರುಗಟ್ಟಿಸಿ ಕೊಂದಿದ್ದಕ್ಕಾಗಿ ಆಕೆಗೆ ಈ ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿನ ಮರು ಪರಿಶೀಲನೆಗೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗಿದ್ದರೂ, ಸುಪ್ರೀಂಕೋರ್ಟ್ ನ್ಯಾಯಾಲಯದ ತೀರ್ಪನ್ನು ಹಿಂಪಡೆಯುವ ಸಾಧ್ಯತೆಯಿಲ್ಲ.

2017 ರಲ್ಲಿ ನಿಮಿಷ ಪ್ರಿಯಾ ಯೆಮನ್‌ ಪ್ರಜೆ ತಲಾಲ್ ಅಬ್ದೋ ಮಹದಿ (Talal Abdo Mahdi) ಯನ್ನು ಕೊಲೆ ಮಾಡಿ, ಅವನ ದೇಹವನ್ನು ತುಂಡುಗಳಾಗಿ ಕತ್ತರಿಸಿ ನೀರಿನ ತೊಟ್ಟಿಯಲ್ಲಿ ವಿಲೇವಾರಿ ಮಾಡಿದ್ದಳು. ಈ ಆರೋಪದಲ್ಲಿ ನಿಮಿಷಾ ತಪ್ಪಿತಸ್ಥಳೆಂದು ಕಂಡು ಬಂದಿದೆ. ಹೀಗಾಗಿ ಯೆಮೆನ್‌ನ ವಿಚಾರಣಾ ನ್ಯಾಯಾಲಯವು 2018ರಲ್ಲಿ ಆಕೆಗೆ ಮರಣದಂಡನೆ ಶಿಕ್ಷೆಯನ್ನು ನೀಡಿತ್ತು. ನಂತರ ನಿಮಿಶಾ ತಾನು ಸರಿಯಾದ ಕಾನೂನು ನೆರವು ಪಡೆದಿಲ್ಲ ಮತ್ತು ತಲಾಲ್‌ನಿಂದ ದೈಹಿಕವಾಗಿ ಕಿರುಕುಳಕ್ಕೊಳಗಾಗಿದೆ ಎಂದು ಪ್ರಕರಣದ ಬಗ್ಗೆ ಮೇಲ್ಮನವಿಯನ್ನು ಸಲ್ಲಿಸಿದ್ದರು.

Shakti Mills gangrape case: 3 ರೇಪಿಸ್ಟ್‌ಗಳ ಗಲ್ಲು ಶಿಕ್ಷೆ, ಜೀವಾವಧಿಯಾಗಿ ಬದಲು!

2014ರಲ್ಲಿ ನಿಮಿಷಪ್ರಿಯ ಯೆಮೆನ್‌ನಲ್ಲಿ ಕ್ಲಿನಿಕ್ ಸ್ಥಾಪಿಸಲು ತಲಾಲ್ ಅವರ ಸಹಾಯವನ್ನು ಕೋರಿದ್ದರು. ಯೆಮನ್‌ನಲ್ಲಿ ವ್ಯಾಪಾರವನ್ನು ಪ್ರಾರಂಭಿಸಲು  ಪರವಾನಗಿ ಪ್ರಕ್ರಿಯೆಗಾಗಿ ಯೆಮೆನ್ ಪ್ರಜೆಯೊಬ್ಬರ ಸಹಾಯ ಅಗತ್ಯವಿರುತ್ತದೆ. ಆದರೆ ನಂತರ ಆಕೆ ಮತ್ತೊಬ್ಬ ಯೆಮೆನ್ ಪ್ರಜೆಯ ಸಹಾಯದಿಂದ ವ್ಯಾಪಾರ ಆರಂಭಿಸಿದಳು. ಹೀಗೆ ಆಕೆ ಕ್ಲಿನಿಕ್‌ನಿಂದ ಆದಾಯವನ್ನು ಗಳಿಸಲು ಪ್ರಾರಂಭಿಸಿದ ನಂತರ ಈ ವಿಚಾರದಲ್ಲಿ ತಲಾಲ್ ಮಧ್ಯಪ್ರವೇಶಿಸಲು ಪ್ರಾರಂಭಿಸಿದ ಮತ್ತು ಆದಾಯದಲ್ಲಿ ಪಾಲು ಕೇಳಲು ಶುರು ಮಾಡಿದ. 

ನಕಲಿ ಮದುವೆ ದಾಖಲೆಗಳನ್ನು ಸೃಷ್ಟಿಸಿದ ತಲಾಲ್ , ನಿಮಿಷಾ ತನ್ನ ಪತ್ನಿ ಎಂದು ಎಲ್ಲರಿಗೂ ಹೇಳಿದ. ಅಲ್ಲದೇ ಆಕೆಗೆ ಬೆದರಿಕೆ ಹಾಕಲು ಆರಂಭಿಸಿದ್ದಲ್ಲದೇ ದೈಹಿಕವಾಗಿ ಹಿಂಸೆ ನೀಡುತ್ತಿದ್ದ. ಅಲ್ಲದೇ ಆತ ಮಾದಕ ವ್ಯಸನಿಯಾಗಿದ್ದ ಎಂದು ನಿಮಿಷಾ ಆರೋಪಿಸಿದ್ದಾರೆ.ಇದಾದ ಬಳಿಕ ಆಕೆ ಪೊಲೀಸರಿಗೆ ದೂರು ನೀಡಿದ್ದಳು ಮತ್ತು ಅವನನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

click me!