Russia Ukraine Crisis: ಮತ್ತೊಂದು ಅಣುಸ್ಥಾವರ ವಶದತ್ತ ರಷ್ಯಾ!

Kannadaprabha News   | Asianet News
Published : Mar 06, 2022, 04:30 AM IST
Russia Ukraine Crisis: ಮತ್ತೊಂದು ಅಣುಸ್ಥಾವರ ವಶದತ್ತ ರಷ್ಯಾ!

ಸಾರಾಂಶ

- 10ನೇ ದಿನವೂ ಉಕ್ರೇನ್‌ ಮೇಲೆ ಭೀಕರ ದಾಳಿ - ಕದನ ವಿರಾಮ ಘೋಷಿಸಿ ಬಾಂಬ್‌ ಹಾಕಿದ ಪುಟಿನ್‌! - ಉಕ್ರೇನ್‌ನ ನಂ.1 ಅಣುಸ್ಥಾವರ ವಶದ ನಂತರ 2ನೇ ಬೃಹತ್‌ ಅಣುಸ್ಥಾವರದ ಬಳಿ ಸೇನೆ ನಿಯೋಜನೆ

ಕೀವ್‌ (ಮಾ.6): ಉಕ್ರೇನ್‌ (Ukraine) ಮೇಲೆ ಸತತ 10 ದಿನಗಳಿಂದ ಭೀಕರ ಯುದ್ಧ ನಡೆಸುತ್ತಿರುವ ರಷ್ಯಾ (Russia), ಯುರೋಪ್‌ (Europe)ಖಂಡದ ಅತಿದೊಡ್ಡ ಅಣು ವಿದ್ಯುತ್‌ ಘಟಕ ಝೆಪೋರ್‌ಝಿಯಾವನ್ನು (zaporizhzhia ) ಶುಕ್ರವಾರ ವಶಕ್ಕೆ ಪಡೆದಿತ್ತು. ಅದರ ಬೆನ್ನಲ್ಲೇ, ಶನಿವಾರ ಉಕ್ರೇನಿನ ಎರಡನೇ ಅತಿದೊಡ್ಡ ಅಣುಸ್ಥಾವರ ಯುಝ್ನೋಕ್ರೈನ್ಸ್ಕ್ ದಿಂದ (yuzhnoukrainsk) ಕೇವಲ 20 ಕಿ.ಮೀ. ದೂರಲ್ಲಿ ತನ್ನ ಸೇನೆಯನ್ನು ನೆಲೆಗೊಳಿದೆ. ಇದರ ಬೆನ್ನಲ್ಲೇ ಬಂದರು ನಗರಿ ಮರಿಯುಪೋಲ್‌ಗೂ ಲಗ್ಗೆ ಹಾಕಿದೆ. ತನ್ಮೂಲಕ ಉಕ್ರೇನ್‌ನ ಉತ್ತರ ಹಾಗೂ ದಕ್ಷಿಣ ಭಾಗಗಳಿಂದಲೂ ರಷ್ಯಾ ಮುನ್ನುಗ್ಗುತ್ತಿದೆ.

ಇನ್ನೊಂದೆಡೆ, ಉಕ್ರೇನ್‌ನ ಎರಡು ನಗರಗಳಿಂದ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಉದ್ದೇಶಿದಿಂದ ಶನಿವಾರ ಕೆಲ ಹೊತ್ತು ರಷ್ಯಾ ಕದನವಿರಾಮ ಘೋಷಿಸಿತ್ತು. ಆದರೆ, ಆ ಸಮಯದಲ್ಲೂ ಭಾರಿ ಪ್ರಮಾಣದ ಶೆಲ್‌ ದಾಳಿ ನಡೆಸಿದೆ ಎಂದು ಉಕ್ರೇನ್‌ ಆರೋಪಿಸಿದ್ದು, ಕದನ ವಿರಾಮ ವಿಫಲವಾದಂತಾಗಿದೆ.

ಅಣುಸ್ಥಾವರ ವಶಕ್ಕೆ ಅಮೆರಿಕ ಕಿಡಿ: ಅಣುಸ್ಥಾವರ (nuclear power plant ) ಮೇಲಿನ ದಾಳಿ ಯುದ್ಧಾಪರಾಧ, ಅಲ್ಲಿನ 15 ರಿಯಾಕ್ಟರ್‌ಗಳಿಗೆ ಅಪಾಯವನ್ನು ಉಂಟುಮಾಡುವ ಪ್ರಯತ್ನವನ್ನು ಕೂಡಲೇ ಕೈಬಿಡಬೇಕು. ವಿಕಿರಣ ಸೋರಿಕೆಯಾದರೆ ಭಾರೀ ಅಪಾಯ ಉಂಟಾಗಲಿದೆ ಎಂದು ಉಕ್ರೇನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆಕ್ರೋಶ ಹೊರಹಾಕಿದೆ. ಯುರೋಪ್‌ ಸೇರಿದಂತೆ ಅನೇಕ ದೇಶಗಳೂ ಅಣು ಘಟಕದ ಮೇಲಿನ ದಾಳಿಗೆ ಖಂಡನೆ ವ್ಯಕ್ತಪಡಿಸಿವೆ. ಆದರೂ ರಷ್ಯಾ ತನ್ನ ಪಟ್ಟು ಬಿಡದೆ ಮತ್ತಷ್ಟುಅಣು ಘಟಕಗಳ ವಶಕ್ಕೆ ಮುಂದಾಗಿದೆ.

ಮರಿಯುಪೋಲ್‌ ವಶಕ್ಕೆ: ಈಗಾಗಲೇ ಉಕ್ರೇನ್‌ನ ಖೇರ್ಸನ್‌ ಮತ್ತು ಬೆರ್ದಿಯಾನ್‌ಸ್ಕ್‌ ನಗರಗಳನ್ನು ವಶಕ್ಕೆ ಪಡೆದಿರುವ ರಷ್ಯಾ, ಶನಿವಾರ ದಕ್ಷಿಣದ ಆಯಕಟ್ಟಿನ ಬಂದರು ನಗರ ಮರಿಯುಪೋಲ್‌ ಅನ್ನು ಸುತ್ತುವರೆದು ನಿರ್ಬಂಧಿಸಿದೆ ಎಂದು ನಗರದ ಮೇಯರ್‌ ಹೇಳಿದ್ದಾರೆ. ರಷ್ಯಾ ನಡೆಸಿದ ಭೀಕರ ಶೆಲ್‌ ದಾಳಿ ಪರಿಣಾಮ 4.5 ಲಕ್ಷ ಜನಸಂಖ್ಯೆ ಇರುವ ನಗರದಲ್ಲಿ ನೀರು ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಮರಿಯುಪೋಲ್‌ ವಶಕ್ಕೆ ಪಡೆದಿರುವುದು ಉಕ್ರೇನ್‌ ಮೇಲಿನ ಆಕ್ರಮಣದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಏಕೆಂದರೆ ಉಕ್ರೇನ್‌ ವಿರುದ್ಧ ಜಲದಿಗ್ಭಂಧನಕ್ಕೆ ಇದು ಆಯಕಟ್ಟಿನ ಜಾಗವಾಗಿದೆ. ಡಾನ್‌ಬಾಸ್‌ ಮತ್ತು ಕ್ರಿಮಿಯಾದಿಂದ ಸೈನ್ಯವನ್ನು ಸಂಪರ್ಕಿಸಲೂ ಇದು ನೆರವಾಗಲಿದೆ ಎನ್ನಲಾಗುತ್ತಿದೆ.

Russia Ukraine War ರಷ್ಯಾ ಸೇನೆಗೆ ಹಿನ್ನಡೆ ತಂದ ಮೇಡ್ ಇನ್ ಚೀನಾ ಟೈರ್!
ಉಕ್ರೇನ್‌ನಿಂದ ರಷ್ಯಾ ವಿಮಾನ ನಾಶ: ಈ ನಡುವೆ ರಷ್ಯಾ ದಾಳಿಗೆ ಪ್ರಬಲ ಪ್ರತಿರೋಧ ಒಡ್ಡುತ್ತಿರುವ ಉಕ್ರೇನ್‌ ವಾಯುಪಡೆಯು (Ukraine AirForce) ಚೆರ್ನಿಹಿವ್‌ನಲ್ಲಿ (Cherni Hive) ರಷ್ಯಾದ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿದೆ ಮತ್ತು ಪೈಲಟ್‌ನನ್ನು ವಶಕ್ಕೆ ಪಡೆದಿದೆ. ಸಹ ಪೈಲಟ್‌ ಮೇಜರ್‌ ಕ್ರಿವೊಲ್‌ಪೋವ್‌ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಉಕ್ರೇನ್‌ ಈ ವಿಡಿಯೋವನ್ನೂ ಸಹ ಹಂಚಿಕೊಂಡಿದೆ.

ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ 25 ಲಕ್ಷ ಪರಿಹಾರ ವಿತರಿಸಿದ ಬೊಮ್ಮಾಯಿ
ಯುದ್ಧದಲ್ಲಿ ಈವರೆಗೆ ಉಕ್ರೇನ್‌ನಲ್ಲಿ 331 ನಾಗರಿಕರು ಮೃತಪಟ್ಟು, 675 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಸಾವು-ನೋವಿನ ಪ್ರಮಾಣ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ ಎಂದೂ ಅದು ತಿಳಿಸಿದೆ. ಏತನ್ಮಧ್ಯೆ ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ‘ಉಕ್ರೇನ್‌ನೊಂದಿಗೆ ಮೂರನೇ ಸುತ್ತಿನ ಸಂಧಾನ ಸಭೆಯನ್ನು ಬೆಲಾರಸ್‌ನಲ್ಲಿ ನಡೆಸಲು ರಷ್ಯಾ ಕಾಯುತ್ತಿದೆ, ಮುಂದಿನ ವಾರ ಈ ಸಭೆ ನಡೆಯಬಹುದು’ ಎಂದು ತಿಳಿಸಿದ್ದಾರೆ.


ಶನಿವಾರ ಆಗಿದ್ದೇನು?

- ಉಕ್ರೇನ್‌ನ ಇನ್ನೊಂದು ಅಣುಸ್ಥಾವರ ವಶಕ್ಕೆ ಮುಂದಾದ ರಷ್ಯಾ

- ಪ್ರಮುಖ ಬಂದರು ನಗರಿ ಮರಿಯುಪೋಲ್‌ ಮೇಲೂ ಆಕ್ರಮಣ

- ನಾಗರಿಕರ ಸ್ಥಳಾಂತರಕ್ಕೆ ರಷ್ಯಾದಿಂದ ಕದನವಿರಾಮ; ಉಲ್ಲಂಘನೆ

- ಚೆರ್ನಿಹಿವ್‌ನಲ್ಲಿ ರಷ್ಯಾದ ಯುದ್ಧವಿಮಾನ ಹೊಡೆದ ಉಕ್ರೇನ್‌

- ಉಕ್ರೇನ್‌ನಲ್ಲಿ ಈವರೆಗೆ 331 ಸಾವು: ವಿಶ್ವಸಂಸ್ಥೆಯಿಂದ ಅಂಕಿಅಂಶ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ
ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!