Russia: ನಾಲ್ಕೂ ಕಾಲು ಕಳೆದುಕೊಂಡಿದ್ದ ಶ್ವಾನ ಮೋನಿಕಾಗೆ ಮರು ಜೀವ ಕೊಟ್ಟ ವೈದ್ಯರು!

By Suvarna NewsFirst Published Nov 20, 2021, 1:31 PM IST
Highlights

*ಕಿಡಿಗೇಡಿಗಳ ಕೃತ್ಯದಿಂದ ತನ್ನ ನಾಲ್ಕೂ ಕಾಲು ಕಳೆದುಕೊಂಡಿದ್ದ ಶ್ವಾನ!
*ಕೃತಕ ಟೈಟಾನಿಯಂ ಕಾಲು ಅಳವಡಿಸುವ ಮೂಲಕ ಮೋನಿಕಾಗೆ ಮರುಜೀವ
*ಕ್ರೌಡ್‌ ಫಂಡಿಂಗ್‌ ಮೂಲಕ ಹಣ ಸಂಗ್ರಹಿಸಿದ್ದ ಅಲ್ಲಾ ಲಿಯೊಂಕಿನಾ!

ಮಾಸ್ಕೋ(ನ.20): ಕಿಡಿಗೇಡಿಗಳ ಅಮಾನವೀಯ ಕೃತ್ಯದಿಂದ ತನ್ನ ನಾಲ್ಕೂ ಕಾಲುಗಳನ್ನು ಕಳೆದುಕೊಂಡಿದ್ದ ರಷ್ಯಾದ ತನಿಖಾ ನಾಯಿ (Rescue Dog) ಈಗ ಶಸ್ತ್ರಚಿಕಿತ್ಸೆ (Operation) ಮೂಲಕ ಕೃತಕ ಕಾಲುಗಳನ್ನು (Artificial Leg) ಪಡೆದಿದೆ. ಕ್ರೌಡ್ ಫಂಡಿಂಗ್ (Crowd Funding) ಅಭಿಯಾನದ ಮೂಲಕ ಹಣ ಸಂಗ್ರಹಿಸಿ ನಾಯಿಗೆ  ನಾಲ್ಕು ಕೃತಕ ಟೈಟಾನಿಯಂ (Titaniam) ಕಾಲುಗಳನ್ನು ಅಳವಡಿಸಲಾಗಿದೆ.  ಹಾಗಾಗಿ ರಷ್ಯಾದ (Russia)  ನಾಯಿ ಮೋನಿಕಾ (Monika) ತನ್ನ ಹೊಸ ಜೀವನಕ್ಕೆ ಸಿದ್ಧವಾಗಿದೆ.  ಎರಡು ವಾರಗಳ ಚಿಕಿತ್ಸೆ ನಂತರ ನಾಯಿ ಇನ್ನೂ ದುರ್ಬಲವಾಗಿದ್ದು ಸ್ವಲ್ಪ ದಣಿದಂತೆ ಕಾಣುತ್ತಿದೆ, ಆದರೆ ಅವಳು ಮತ್ತೆ ತನ್ನ ಕಾಲುಗಳ ಮೇಲೆ ಮರಳಿದ್ದಾಳೆ.

30 ಕ್ಕೂ ಹೆಚ್ಚು ಪ್ರಾಣಿಗಳಿಗೆ ಕೃತಕ ಅಂಗ!

"ಅದೃಷ್ಟ (luck) ಮತ್ತು ಅನುಭವವು (experience) ಅದರ ಪಾತ್ರವನ್ನು ವಹಿಸಿದೆ" ಎಂದು ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ  ಪೂರ್ಣಗೊಳಿಸಿದ ಪ್ರಾಣಿ ವೈದ್ಯ (veterinary doctor) ಸೆರ್ಗೆಯ್ ಗೋರ್ಶ್ಕೋವ್ (Sergei Gorshkov) ಹೇಳಿದ್ದಾರೆ.  ಸೈಬೀರಿಯನ್ ನಗರದ ನೊವೊಸಿಬಿರ್ಸ್ಕ್‌ನ 33 ವರ್ಷದ ವೈದ್ಯ  ಬೆಕ್ಕಿಗೂ (cat) ನಾಲ್ಕು ಕಾಲು ಕಸಿ ಸೇರಿದಂತೆ 30 ಕ್ಕೂ ಹೆಚ್ಚು  ರೋಗದಿಂದ ಬಳಲುತ್ತಿದ್ದ ಪ್ರಾಣಿಗಳಿಗೆ (Animal) ಕೃತಕ ಅಂಗಗಳನ್ನು (Body parts) ಅಳವಡಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ನಾಯಿಯ ಮೇಲೆ ಆಪರೇಷನ್ ಮಾಡಲು ಸೆರ್ಗೆಯ್ ಪ್ರಯತ್ನಿಸಿದ್ದರು.

Orange Dog: ನಾಯಿ ಫೋಟೋಶೂಟ್, ಕಲರಿಂಗ್‌ಗೆ ಖರ್ಚು ಮಾಡಿದ್ದು 5 ಲಕ್ಷ

ಜೀವನವನ್ನು ಬದಲಾಯಿಸುವ ಶಸ್ತ್ರಚಿಕಿತ್ಸೆಗಾಗಿ ಮೋನಿಕಾಳನ್ನು  ದೂರದ ಪ್ರದೇಶಕ್ಕೆ ಕರೆದೊಯ್ಯಲಾಗಿತ್ತು. ಗೋರ್ಷ್ಕೋವ್‌ನ ಚಿಕಿತ್ಸಾಲಯದಿಂದ 4,000 ಕಿಲೋಮೀಟರ್ (2,485 ಮೈಲುಗಳು) ದೂರದಲ್ಲಿರುವ ದಕ್ಷಿಣ ರಷ್ಯಾದ ಕ್ರಾಸ್ನೋಡರ್ (Krasnodar) ಬಳಿಯ ಕಾಡಿನಲ್ಲಿ ಸ್ವಯಂಸೇವಕರಿಗೆ ಅಕೆ ಸಿಕ್ಕಿದ್ದಳು.ಅಲ್ಲಿಂದ ಸ್ವಯಂಸೇವಕರು ಆಕೆಯನ್ನು ದೂರದ ಆಸ್ಪತ್ರೆಗೆ ಕರೆದೊಯ್ದಿದ್ದರು.

ಆಕೆಗೆ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ!

"ಆಕೆಗೆ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ದ್ವೇಷ ಸಾಧಿಸಲು ಆಕೆಯ ಕಾಲುಗಳನ್ನು ಯಾರೋ ಕತ್ತರಿಸಿದ್ದಾರೆಂದು ಕೆಲವು ಸ್ವಯಂಸೇವಕರು ಹೇಳಿದ್ದಾರೆ" ಎಂದು ವರದಿಯಾಗಿದೆ. ಮೋನಿಕಾ  ಎರಡರಿಂದ ನಾಲ್ಕು ವರ್ಷ ವಯಸ್ಸಿನವಳು ಎಂದು ಅಂದಾಜಿಸಲಾಗಿದೆ. ಮೋನಿಕಾಳನ್ನು ಹಾಗೆಯೇ ಬಿಟ್ಟಿದ್ದರೆ ಗಾಯಗೊಂಡಿರುವ ಸಾವಿರಾರು ಬೀದಿನಾಯಿಗಳ  (stray dogs) ರೀತಿಯಲ್ಲಿ  ನರಕ ಯಾತನೆ ಅನುಭವಿಸುತ್ತಿದ್ದಳು. ಅದೃಷ್ಟವಶಾತ್ ಕ್ರಾಸ್ನೋಡರ್‌ನ ಸ್ವಯಂಸೇವಕರಾದ ಅಲ್ಲಾ ಲಿಯೊಂಕಿನಾ ( Alla Leonkina) , ಮೋನಿಕಾ ಕಾಳಜಿ ವಹಿಸಿದರು.

ಆನ್‌ಲೈನ್ ಅಭಿಯಾನದ ಮೂಲಕ ಹಣ ಸಂಗ್ರಹ!

ನರಕಯಾತನೆ ಅನುಭವಿಸುತ್ತಿದ್ದ ಮೋನಿಕಾಳನ್ನು ಸುಮಾರು ಒಂದು ವರ್ಷದವರೆಗೆ ತಾನು ಮತ್ತು ಸ್ನೇಹಿತೆ ನೋಡಿಕೊಂಡರು ಎಂದು ಲಿಯೊಂಕಿನಾ ಹೇಳಿದ್ದಾರೆ. ಮೋನಿಕಾಳನ್ನು ನೋಡಿಕೊಳ್ಳುತ್ತಿರುವಾಗ, ಅವರು ಗೋರ್ಶ್ಕೋವ್ ಅವರ ಕ್ಲಿನಿಕ್ ಬಗ್ಗೆ ತಿಳಿದುಕೊಂಡು, ಶಸ್ತ್ರಚಿಕಿತ್ಸೆಗೆ ಹಣ ಪಡೆಯಲು ಆನ್‌ಲೈನ್ ಅಭಿಯಾನವನ್ನು (Online Campaign) ಪ್ರಾರಂಭಿಸಿದರು. ಒಂದು ತಿಂಗಳೊಳಗೆ, ಅವರು 400,000 ರೂಬಲ್ಸ್ಗಳನ್ನು (rubles) (ಸುಮಾರು 4 ಲಕ್ಷ)  ಸಂಗ್ರಹಿಸಿದರು. ಮೋನಿಕಾ ವಿಮಾನದಲ್ಲಿ ತನ್ನ ಪಕ್ಕದಲ್ಲಿ ಕುಳಿತು ಸೈಬೀರಿಯಾಕ್ಕೆ ಹಾರಿದ್ದಾಳೆ ಎಂದು ಲಿಯೊಂಕಿನಾ ಹೇಳಿದರು. 3D ಪ್ರಿಂಟರ್ (3D Printer) ಬಳಸಿ ತಯಾರಿಸಲಾದ ಪ್ರಾಸ್ಥೆಟಿಕ್ ಟೈಟಾನಿಯಂ (prosthetic titanium)  ಕಾಲುಗಳನ್ನು ಮೋನಿಕಾಗ ಜೋಡಿಸಲಾಗಿದೆ. ಶಸ್ತ್ರ ಚಿಕಿತ್ಸೆಯ ನಂತರ ಸ್ವಲ್ಪ ಆಯಾಸಗೊಂಡಂತೆ ಮೋನಿಕಾ ಕಾಣುತ್ತಿದ್ದರು, ತನ್ನ ನಾಲ್ಕೂ ಕಾಲುಗಳನ್ನು ಹಿಂಪಡೆದಿರುವುದು ಮೋನಿಕಾ ಬದುಕನ್ನು ಬದಲಾಯಿಸಿದೆ.

click me!