ವಿಷ ಬೆರೆಸಿದ ಚಹಾ ಕುಡಿಸಿ ರಷ್ಯಾದ ಪ್ರತಿಪಕ್ಷ ನಾಯಕನ ಕೊಲೆಗೆ ಯತ್ನ?

By Suvarna NewsFirst Published Aug 21, 2020, 1:55 PM IST
Highlights

ವಿಷ ಬೆರೆಸಿದ ಚಹಾ ಕುಡಿಸಿ ರಷ್ಯಾದ ಪ್ರತಿಪಕ್ಷ ನಾಯಕ ನ್ಯಾವಲಾನಿ ಕೊಲೆಗೆ ಯತ್ನ?| ರಷ್ಯಾದ ಪ್ರತಿಪಕ್ಷ ನಾಯಕ ಅಲೆಕ್ಸಿ ನ್ಯಾವಲಾನಿ ದಿಢೀರ್‌ ಅಸ್ವಸ್ಥಗೊಂದು ಆಸ್ಪತ್ರೆಗೆ ದಾಖಲು

ಮಾಸ್ಕೋ(ಆ.21): ರಷ್ಯಾದ ಪ್ರತಿಪಕ್ಷ ನಾಯಕ ಅಲೆಕ್ಸಿ ನ್ಯಾವಲಾನಿ ದಿಢೀರ್‌ ಅಸ್ವಸ್ಥಗೊಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮರ್‌ ಪುಟಿನ್‌ ಅವರ ಕಡು ವೈರಿಯಾಗಿರುವ ಅಲೆಕ್ಸಿ ಅವರಿಗೆ ಚಹಾದಲ್ಲಿ ವಿಷ ಬೆರೆಸಿ ಹತ್ಯೆಯ ಸಂಚು ರೂಪಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಭಾರತದ ಜೊತೆ ಸೇರಿ ಲಸಿಕೆ ಉತ್ಪಾದನೆಗೆ ರಷ್ಯಾ ಉತ್ಸುಕ!

ಸದ್ಯ ಅಲೆಕ್ಸಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂದು ಸೈಬೀರಿಯಾದ ಟಾಮ್ಸ್‌$್ಕ ನಗರದ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ನ್ಯಾವಲಾನಿ(44) ಟಾಮ್‌ಸ್ಕ್‌ ನಗರದಿಂದ ಮಾಸ್ಕೋಗೆ ಆಗಮಿಸುವ ವೇಳೆ ಅವರು ವಿಮಾನ ನಿಲ್ದಾಣದಲ್ಲಿ ಚಹಾ ಮಾತ್ರವೇ ಸೇವಿಸಿದ್ದರು. ಹೀಗಾಗಿ, ಚಹಾದಲ್ಲಿ ವಿಷ ಬೆರೆಸಿದ್ದಿರಬಹುದು ಎಂದು ವಕ್ತಾರೆ ಶಂಕಿಸಿದ್ದಾರೆ.

ಬೆಳಗಾವಿಯ ಆಸ್ಪತ್ರೆಯಲ್ಲಿ ಮತ್ತೊಂದು ಲಸಿಕೆ ಪರೀಕ್ಷೆ!

ವಿಮಾನ ಪ್ರಯಾಣದ ವೇಳೆ ತೀವ್ರವಾಗಿ ಬೆವತುಕೊಂಡ ಕಾರಣ ವಿಮಾನವನ್ನು ಸೈಬಿರಿಯಾದಲ್ಲೇ ತುರ್ತು ಭೂಸ್ಪರ್ಶ ಮಾಡಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ವಕ್ತಾರೆ ಹೇಳಿದ್ದಾರೆ.

click me!