ಉಕ್ರೇನ್‌ ಮೇಲೆ ಸೂಪರ್‌ಬಾಂಬ್‌ ಅಟ್ಯಾಕ್: ಅಣ್ವಸ್ತ್ರ ದಾಳಿ ಸಾಧ್ಯತೆ ತಳ್ಳಿ ಹಾಕದ ರಷ್ಯಾ

Published : Mar 24, 2022, 07:34 AM ISTUpdated : Mar 24, 2022, 07:40 AM IST
ಉಕ್ರೇನ್‌ ಮೇಲೆ ಸೂಪರ್‌ಬಾಂಬ್‌ ಅಟ್ಯಾಕ್: ಅಣ್ವಸ್ತ್ರ ದಾಳಿ ಸಾಧ್ಯತೆ ತಳ್ಳಿ ಹಾಕದ ರಷ್ಯಾ

ಸಾರಾಂಶ

*ಶರಣಾಗತಿಗೆ ನಕಾರ ಬಳಿಕ ಮರಿಯುಪೋಲ್‌ ಮೇಲೆ ದಾಳಿ ತೀವ್ರ *ಅಣ್ವಸ್ತ್ರ ದಾಳಿ ಸಾಧ್ಯತೆ ತಳ್ಳಿಹಾಕದ ರಷ್ಯಾ *ರಷ್ಯಾ ಅಸ್ತಿತ್ವಕ್ಕೆ ಧಕ್ಕೆಯಾದರೆ ಅಣ್ವಸ್ತ್ರ ಬಳಕೆ *ಚರ್ನೋಬಿಲ್‌ ಪ್ರಯೋಗಾಲಯ ನಾಶ

ಕೀವ್‌ (ಮಾ. 24) : ಉಕ್ರೇನ್‌ ರಷ್ಯಾ ಯುದ್ಧ 29ನೇ ದಿನಕ್ಕೆ ಕಾಲಿಟ್ಟಿದ್ದು ಉಕ್ರೇನ್‌ ನಗರಗಳ ಮೇಲೆ ರಷ್ಯಾ ಭೀಕರ ವಾಯುದಾಳಿಯನ್ನು ಮುಂದುವರೆಸಿದೆ. ಮರಿಯುಪೋಲ್‌ನಲ್ಲಿ ಶರಣಾಗುವಂತೆ ರಷ್ಯಾ ನೀಡಿದ್ದ ಸೂಚನೆಯನ್ನು ಉಕ್ರೇನ್‌ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಕರಾವಳಿ ನಗರ ಮರಿಯುಪೋಲ್‌ ಮೇಲೆ ಮಂಗಳವಾರ ರಾತ್ರಿ ರಷ್ಯಾ 2 ಸೂಪರ್‌ಬಾಂಬ್‌ ಬಾಂಬ್‌ಗಳಿಂದ ದಾಳಿ ಮಾಡಿದೆ.

ಈ ಬಾಂಬ್‌ಗಳ ದಾಳಿಯಿಂದಾಗಿ ನಗರದಲ್ಲಿ 1 ಲಕ್ಷ ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಉಕ್ರೇನ್‌ ಸರ್ಕಾರ ತಿಳಿಸಿದೆ. ರಷ್ಯಾ ಬಾಂಬ್‌ ದಾಳಿಯ ನಂತರ ನಾಶವಾದ ಅವಶೇಷಗಳು ಬಿಟ್ಟರೆ ಮಾರಿಯುಪೋಲ್‌ನಲ್ಲಿ ಮತ್ತೇನು ಉಳಿದಿಲ್ಲ. 

ಇದನ್ನೂ ಓದಿವಿಶ್ವವನ್ನೇ ಬೆಚ್ಚಿ ಬೀಳಿಸಿದ ಪುಟಿನ್‌ಗೆ ಕಾಡುತ್ತಿದೆ ಆ ಭೀತಿ: 1,000 ವೈಯಕ್ತಿಕ ಸಿಬ್ಬಂದಿಗೆ ಗೇಟ್‌ಪಾಸ್!

ಸುರಕ್ಷಿತ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದ್ದ ಸಮಯದಲ್ಲೇ ಶಕ್ತಿಶಾಲಿ ಬಾಂಬ್‌ ದಾಳಿ ನಡೆದಿದೆ ಎಂದು ಜೆಲೆನ್‌ಸ್ಕಿ ಹೇಳಿದ್ದಾರೆ. ಉಕ್ರೇನ್‌ ಸರ್ಕಾರ ಮರಿಯುಪೋಲ್‌ನಿಂದ ಜನರ ತೆರವಿಗೆ ಯತ್ನ ನಡೆಸುತ್ತಿರುವ ಹೊತ್ತಿನಲ್ಲೇ, ರಷ್ಯಾ ನಗರದ ಮೇಲಿನ ತನ್ನ ದಾಳಿ ತೀವ್ರಗೊಳಿಸಿದೆ.

ಅಣ್ವಸ್ತ್ರ ದಾಳಿ ಸಾಧ್ಯತೆ ತಳ್ಳಿ ಹಾಕದ ರಷ್ಯಾ: ಉಕ್ರೇನ್‌ ಮೇಲೆ ಸತತ 28 ದಿನಗಳಿಂದ ದಾಳಿ ನಡೆಸುತ್ತಿರುವ ರಷ್ಯಾ, ಅಗತ್ಯ ಬಿದ್ದರೆ ಅಣ್ವಸ್ತ್ರ ದಾಳಿಯ ಸಾಧ್ಯತೆ ಮುಕ್ತವಾಗಿರಿಸಿಕೊಂಡಿರುವುದಾಗಿ ಹೇಳಿದೆ. ಈ ಮೂಲಕ ಮತ್ತೊಮ್ಮೆ ನ್ಯಾಟೋ ದೇಶಗಳಿಗೆ ಬಹಿರಂಗ ಎಚ್ಚರಿಕೆ ಸಂದೇಶ ರವಾನಿಸಿದೆ.

ಸಂದರ್ಶನವೊಂದರ ವೇಳೆ ಅಣ್ವಸ್ತ್ರ ಬಳಕೆ ಕುರಿತು ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ನ ವಕ್ತಾರ ಡಿಮಿಟ್ರಿ ಪೆಸ್ಕೋವ್‌, ಅಣ್ವಸ್ತ್ರ ಬಳಕೆಯ ಕುರಿತಾದ ಎಲ್ಲ ಕಾರಣಗಳನ್ನು ಈಗಾಗಲೇ ನೀಡಲಾಗಿದೆ. ರಷ್ಯಾದ ಅಸ್ತಿತ್ವಕ್ಕೆ ಧಕ್ಕೆ ಎದುರಾದರೆ ಅಣ್ವಸ್ತ್ರವನ್ನು ಬಳಕೆ ಮಾಡುತ್ತದೆ ಎಂದು ಹೇಳುವ ಮೂಲಕ ಉಕ್ರೇನ್‌ ಮೇಲೆ ಅಣ್ವಸ್ತ್ರ ದಾಳಿ ನಡೆಯಬಹುದು ಎಂಬುದನ್ನು ಅವರು ನಿರಾಕರಿಸಿದ್ದಾರೆ.

ಇದನ್ನೂ ಓದಿ: Ukraine Crisis 2ಸಾವಿರ ಕೋಟಿ ರೂ ನಗದು ಜೊತೆ ಉಕ್ರೇನ್‌ನಿಂದ ಮಾಜಿ ಸಂಸದನ ಪತ್ನಿ ಪಲಾಯನಕ್ಕೆ ಯತ್ನ, ಬಂಧನ!

ರಷ್ಯಾದ ಬಳಿ 6,500 ಅಣ್ವಸ್ತ್ರ ಸಿಡಿತಲೆಗಳಿವೆ ಎಂದು ಅಮೆರಿಕ ಅಂದಾಜಿಸಿದೆ. ಯಾವುದೇ ದೇಶದ ಶಸ್ತ್ರ ಸಂಗ್ರಹಕ್ಕೆ ಹೋಲಿಸಿದರೆ ಅತಿ ಹೆಚ್ಚು ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಬಳಸಲು ರಷ್ಯಾ ತಯಾರಿ ನಡೆಸುತ್ತಿರುವ ಸೂಚನೆಗಳು ಕಂಡುಬಂದಿಲ್ಲ.

ಚರ್ನೋಬಿಲ್‌ ಪ್ರಯೋಗಾಲಯ ನಾಶ: ರಷ್ಯಾದ ಸೇನಾಪಡೆಗಳು ಚರ್ನೋಬಿಲ್‌ ಪರಮಾಣು ಘಟಕದ ನೂತನ ಪ್ರಯೋಗಾಲಯವನ್ನು ನಾಶಪಡಿಸಿವೆ. ದಾಳಿಯಿಂದಾಗಿ ಚರ್ನೋಬಿಲ್‌ ಘಟಕದ ಸುತ್ತಲು ವಿಕಿರಣದ ಮಟ್ಟವನ್ನು ಅಳೆಯುತ್ತಿದ್ದ ಮಾನಿಟರ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆಂತಕಕಾರಿ ವಿಷಯವು ಬೆಳಕಿಗೆ ಬಂದಿದೆ.

ವಿಕಿರಣಶೀಲ ತ್ಯಾಜ್ಯದ ನಿರ್ವಹಣಾ ಕ್ರಮವನ್ನು ಸುಧಾರಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಯುರೋಪಿಯನ್‌ ಆಯೋಗದ ನೆರವಿನೊಂದಿಗೆ ಈ ಪ್ರಯೋಗಾಲಯವನ್ನು 2015ರಲ್ಲಿ ನಿರ್ಮಿಸಲಾಗಿತ್ತು. ಪ್ರಯೋಗಾಲಯದಲ್ಲಿ ವಿಕಿರಣಶೀಲ ಪದಾರ್ಥಗಳ ಮಾದರಿ ಹಾಗೂ ವಿಕಿರಣ ಸೂಸುವ ರಾಸಾಯನಿಕಗಳ ಅಸ್ಥಿರ ಪರಮಾಣುಗಳಾದ ರೇಡಿಯೋನ್ಯೂಕ್ಲೈಡ್‌ಗಳನ್ನು ಅಧ್ಯಯನಕ್ಕಾಗಿ ಸಂಗ್ರಹಿಸಲಾಗಿತ್ತು.

ಇದೀಗ ಇದು ರಷ್ಯಾದ ಕೈ ವಶವಾಗಿದೆ. ಘಟಕದಲ್ಲಿದ್ದ ವಿಕಿರಣದ ಮಾನಿಟರ್‌ಗಳ ಕಾರ್ಯ ಸ್ಥಗಿತವಾಗಿದ್ದರಿಂದ ವಾತಾವರಣದಲ್ಲಿದ್ದ ವಿಕಿರಣದ ಮಟ್ಟದಲ್ಲಿ ಇದರಿಂದಾಗಿ ಏರಿಕೆಯಾಗಿದೆಯೇ ಎಂಬುದನ್ನು ಖಚಿತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಉಕ್ರೇನಿನ ಸ್ಟೇಟ್‌ ಏಜೆನ್ಸಿ ಕಳವಳ ವ್ಯಕ್ತಪಡಿಸಿದೆ.

ಆಕ್ರಮಣ ನಿಲ್ಲಿಸಿಲ್ಲ: ರಷ್ಯಾ ಸೇನೆ ಸ್ಪಷ್ಟನೆ: ಉಕ್ರೇನಲ್ಲಿ ರಷ್ಯಾ ಆಕ್ರಮಣವನ್ನು ಸ್ಥಗಿತಗೊಳಿಸಿದೆ ಎಂಬ ವರದಿಯನ್ನು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ತಳ್ಳಿಹಾಕಿದ್ದಾರೆ. ಉಕ್ರೇನಿನಲ್ಲಿ ರಷ್ಯಾ ಅಧ್ಯಕ್ಷ ಪುಟಿನ್‌ ಅವರು ಸಾಧಿಸಿದ್ದೇನು ಎಂದು ಮಾಧ್ಯಮವೊಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಾಧಿಸಬೇಕಿರುವುದು ಇನ್ನೂ ಬಾಕಿ ಇದೆ. ಆದರೆ ಯೋಜನೆ ಪ್ರಕಾರವೇ ಮಿಲಿಟರಿ ಕಾರಾರ‍ಯಚರಣೆ ಸಾಗುತ್ತಿದೆ. ಉಕ್ರೇನ್‌ನ ಮಿಲಿಟರಿ ಸಾಮರ್ಥ್ಯವನ್ನು ತೊಡೆದುಹಾಕುವುದು ಮತ್ತು ಉಕ್ರೇನ್‌ ತಟಸ್ಥ ದೇಶವಾಗಿ ಬದಲಾಗುವುದನ್ನು ಖಚಿತಪಡಿಸಿಕೊಳ್ಳುವುದು ಪುಟಿನ್‌ ಅವರ ಮುಖ್ಯ ಗುರಿ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?