ಲಂಕಾದಲ್ಲಿ ಬಂಕ್‌, ಎಲ್‌ಪಿಜಿ ಮಳಿಗೆಗಳಿಗೆ ಸೇನೆ ಭದ್ರತೆ!

By Suvarna News  |  First Published Mar 24, 2022, 7:33 AM IST

* ಆರ್ಥಿಕ ಬಿಕ್ಕಟ್ಟು ಹಿನ್ನೆಲೆಯಲ್ಲಿ ಭಾರತಕ್ಕೆ ವಲಸೆ ಹೆಚ್ಚಳ

* ಲಂಕಾದಲ್ಲಿ ಬಂಕ್‌, ಎಲ್‌ಪಿಜಿ ಮಳಿಗೆಗಳಿಗೆ ಸೇನೆ ಭದ್ರತೆ

* ಪೆಟ್ರೋಲ್‌ 250 ರು, ಎಲ್‌ಪಿಜಿಗೆ 2000 ರು.


ಕೊಲಂಬೋ(ಮಾ.24): ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿದು ಆರ್ಥಿಕತೆ ಅಲ್ಲೋಲ ಕಲ್ಲೋಲವಾಗಿದೆ. ಕಳೆದ 7 ದಶಕಗಳ ಇತಿಹಾದಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಪರಿಣಾಮ ಅಡುಗೆ ಅನಿಲ, ಪೆಟ್ರೋಲ್‌ ಮತ್ತು ಡೀಸೆಲ್‌ನಂಥ ಅಗತ್ಯವಸ್ತುಗಳ ಭಾರೀ ಕೊರತೆ ಉಂಟಾಗಿದೆ. ಹೀಗಾಗಿ ಪೆಟ್ರೋಲ್‌ ಬಂಕ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತ ಜನರು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಅದು ಹಿಂಸಾಚಾರಕ್ಕೆ ತಿರುಗಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಪೆಟ್ರೋಲ್‌ ಬಂಕ್‌ಗಳಲ್ಲಿ ಸೇನೆ ನಿಯೋಜಿಸಿ ಶ್ರೀಲಂಕಾ ಆದೇಶ ಹೊರಡಿಸಿದೆ. ಸದ್ಯ ದೇಶದಲ್ಲಿ ಪೆಟ್ರೋಲ್‌ ದರ 250 ಲಂಕಾ ರುಪಾಯಿ (.66.79 ) ಮತ್ತು ಪೆಟ್ರೋಲ್‌ ದರ 53.43 ಲಂಕಾ ರುಪಾಯಿ (. 53.43) ಇದೆ. ಅಡುಗೆ ಅನಿಲ ದರ 1900-2000 ರುಪಾಯಿಗೆ ಏರಿಕೆಯಾಗಿದೆ.

ಭಾರತಕ್ಕೆ ಹೆಚ್ಚಾಯ್ತು ವಲಸೆ:

Tap to resize

Latest Videos

ಶ್ರೀಲಂಕಾದಲ್ಲಿ ಹಿಂದೆಂದಿಗಿಂತ ಭೀಕರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿ ಅಗತ್ಯ ವಸ್ತುಗಳ ಕೊರತೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಅನೇಕ ಶ್ರೀಲಂಕಾ ಪ್ರಜೆಗಳು ಭಾರತದತ್ತ ವಲಸೆ ಆರಂಭಿಸಿದ್ದಾರೆ. ಮಂಗಳವಾರ ಮೂವರು ಮಕ್ಕಳು ಸೇರಿ 6 ಮಂದಿ ಭಾರತಕ್ಕೆ ಆಗಮಿಸಿದ್ದರು. ಅವರನ್ನು ತಮಿಳುನಾಡಿನ ರಾಮೇಶ್ವರಂನಲ್ಲಿ ರಕ್ಷಿಸಲಾಯಿತು ಎಂದು ಭಾರತೀಯ ನೌಕಾ ದಳ ತಿಳಿಸಿದೆ.

ಏಕೆ ಆರ್ಥಿಕ ಬಿಕ್ಕಟ್ಟು?

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ದೇಶದ ಪ್ರವಾಸೋದ್ಯಮ ಸ್ಥಗಿತಗೊಂಡು ಸಾಕಷ್ಟನಷ್ಟಉಂಟಾಗಿದೆ. ಈ ನಡುವೆ ದೇಶದ ರುಪಾಯಿ ಮೌಲ್ಯ ಕುಸಿತ ಕಂಡಿದೆ. ವಿದೇಶಗಳಲ್ಲಿರುವ ಶ್ರೀಲಂಕಾ ಪ್ರಜೆಗಳು ನೀಡುವ ಹಣದ ಪ್ರಮಾಣವೂ ಕುಸಿದಿದೆ. ಹೀಗಾಗಿ ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ತಲೆದೋರಿದೆ.

click me!