Russia Ukraine war: ತಾನೇ ಮಾಡಿಕೊಂಡ ಎಡವಟ್ಟು...ಪುಟಿನ್‌ಗೆ ಸೌಂದರ್ಯವರ್ಧಕ ಸಿಗುತ್ತಿಲ್ಲ!

By Kannadaprabha News  |  First Published Mar 19, 2022, 3:31 AM IST

* ಯುದ್ಧದಿಂದಾಗಿ ಪುಟಿನ್‌ಗೆ ಸೌಂದರ‍್ಯವರ್ಧಕ ಸಿಗುತ್ತಿಲ್ಲ!

* ಫಾರ್ಮಾ ಕಂಪನಿಗಳಿಂದ ರಷ್ಯಾಕ್ಕೆ ಔಷಧ ಪೂರೈಕೆ ಸ್ಥಗಿತ

* ಸೌಂದರ್ಯವರ್ಧಕ ಚಿಕಿತ್ಸೆಗೆ ಬೇಕಾದ ಸಲಕರಣೆ ಕೊರತೆ


ಮಾಸ್ಕೋ(ಮಾ. 19) ಉಕ್ರೇನ್‌ (Ukraine) ಮೇಲೆ ಯುದ್ಧ ಸಾರಿದ್ದಕ್ಕಾಗಿ ಪಾಶ್ಚಾತ್ಯ ದೇಶಗಳು ರಷ್ಯಾ (Russia) ಮೇಲೆ ನಿರ್ಬಂಧ ವಿಧಿಸಿರುವುದರಿಂದ ಸ್ವತಃ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ಗೇ (Vladimir Putin ) ಸೌಂದರ‍್ಯವರ್ಧಕ ಚಿಕಿತ್ಸೆಗೆ ಬೇಕಾದ ಸಲಕರಣೆಗಳು ಸಿಗದಂತಾಗಿದೆ.

69 ವರ್ಷದ ಪುಟಿನ್‌ ತಮ್ಮ ಸೌಂದರ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಸೊಗಸುಗಾರರಾಗಿರುವ ಅವರು ಮುಖ ನಯವಾಗಿರಲು ಹಾಗೂ ಕಣ್ಣಿನ ಸುತ್ತ ಕಪ್ಪು ಕಲೆಗಳು ಮತ್ತು ನೆರಿಗೆಗಳು ಇರದಂತೆ ನೋಡಿಕೊಳ್ಳಲು ನಿಯಮಿತವಾಗಿ ಬೊಟೊಕ್ಸ್‌ ಮಾಡಿಸಿಕೊಳ್ಳುತ್ತಾರೆ. ಆದರೆ, ಪ್ರಸಿದ್ಧ ಫಾರ್ಮಾಸುಟಿಕಲ್‌ ಕಂಪನಿಗಳಾದ ಎಲಿ ಲಿಲ್ಲಿ ಕೋ., ನೋವಾರ್ಟಿಸ್‌ ಹಾಗೂ ಆ್ಯಬ್‌ವೀ ಇಂಕ್‌ ಮುಂತಾದವುಗಳು ರಷ್ಯಾಕ್ಕೆ ವೈದ್ಯಕೀಯ ಉತ್ಪನ್ನ ಮತ್ತು ಔಷಧಗಳ ಪೂರೈಕೆ ನಿಲ್ಲಿಸಿದ್ದು, ಕೇವಲ ಕ್ಯಾನ್ಸರ್‌ ಮುಂತಾದ ಜೀವರಕ್ಷಕ ಔಷಧಿಗಳನ್ನು ಮಾತ್ರ ಪೂರೈಸುತ್ತಿವೆ. ಹೀಗಾಗಿ ಪುಟಿನ್‌ಗೆ ಬೊಟೊಕ್ಸ್‌ ಮುಂತಾದ ಸೌಂದರ್ಯವರ್ಧಕ ಔಷಧ ಹಾಗೂ ಚಿಕಿತ್ಸೆಗಳು ಸಿಗದಂತಾಗಿದೆ ಎಂದು ‘ದಿ ಇಂಡಿಪೆಂಡೆಂಟ್‌’ ವರದಿ ಮಾಡಿದೆ.

Latest Videos

undefined

ಪುಟಿನ್‌ ಬೊಟೊಕ್ಸ್‌ ಹಾಗೂ ಸೌಂದರ್ಯವರ್ಧಕ ಚಿಕಿತ್ಸೆಗೆ ಒಳಗಾಗುವುದನ್ನು ಸಾಕಷ್ಟುವರ್ಷಗಳಿಂದ ಪಾಶ್ಚಾತ್ಯ ಮಾಧ್ಯಮಗಳು ವರದಿ ಮಾಡುತ್ತಾ ಬಂದಿವೆ. ಅವರ ನಯವಾದ ಹಣೆ, ಗುಲಾಬಿ ಕೆನ್ನೆ, ನೆರಿಗೆಯಿಲ್ಲದ ಕಣ್ಣಿನ ಸುತ್ತಲ ಭಾಗಗಳು ಇಂತಹ ಚಿಕಿತ್ಸೆಗಳ ಫಲ. ಅವರು ಸಾಕಷ್ಟುಕಾಸ್ಮೆಟಿಕ್‌ ಸರ್ಜರಿಗಳನ್ನು ಕೂಡ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.

Mother And Baby: ತಾಯಿ ತಣ್ಣೀರಿನಲ್ಲಿ ಸ್ನಾನ ಮಾಡಿದರೆ, ಮಗುವಿಗೆ ಶೀತವಾಗುತ್ತಾ?

 ಯುದ್ಧ ನಿಲ್ಲಿಸಲು ಪರಸ್ಪರ ಸಹಕಾರ: ಬೈಡೆನ್‌ಗೆ ಚೀನಾ ಅಧ್ಯಕ್ಷ ಕ್ಸಿ ಆಗ್ರಹ:  ಬೀಜಿಂಗ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಚೀನಾ ಅಧ್ಯಕ್ಷ ಕ್ಸಿ-ಜಿನ್‌ಪಿಂಗ್‌ ನಡುವೆ ಶುಕ್ರವಾರ ಮಹತ್ವದ ವಿಡಿಯೋ ಸಂವಾದ ನಡೆದಿದ್ದು, ಈ ವೇಳೆ ‘ಯುದ್ಧ ಯಾರಿಗೂ ಬೇಕಿಲ್ಲ’ ಎಂದು ಕ್ಸಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಚೀನಾ ಮತ್ತು ಅಮೆರಿಕಗಳು ಉಕ್ರೇನ್‌-ರಷ್ಯಾ ನಡುವಿನ ಯುದ್ಧ ನಿಲ್ಲಿಸಲು ‘ಅಂತಾರಾಷ್ಟ್ರೀಯ ಜವಾಬ್ದಾರಿ’ ತೆಗೆದುಕೊಳ್ಳಬೇಕು. ಪರಸ್ಪರ ಸಹಕಾರದಿಂದ ವರ್ತಿಸಬೇಕು ಎಂದೂ ಹೇಳಿದ್ದಾರೆ.

‘ವಿಶ್ವ ಇಂದು ಸ್ಥಿರವಾಗಿಲ್ಲ. ಇಂಥ ಸಂದರ್ಭದಲ್ಲಿ ಯುದ್ಧ ಈ ವಿಶ್ವಕ್ಕೆ ಬೇಕಿಲ್ಲ. ಹೀಗಾಗಿ ದೇಶ ದೇಶಗಳ ನಡುವಿನ ಸಂಬಂಧ ಮಿಲಿಟರಿ ಹಗೆತನದ ಹಂತಕ್ಕೆ ಹೋಗಲು ಸಾಧ್ಯವಿಲ್ಲ’ ಎಂದು ತಿಳಿಸಿದರು. ಜೊತೆಗೆ ಶಾಂತಿ ಮತ್ತು ಭದ್ರತೆಯು ಅಂತಾರಾಷ್ಟ್ರೀಯ ಸಮುದಾಯದ ಅತ್ಯಂತ ಮೌಲ್ಯಯುತವಾದ ಸಂಪತ್ತು ಎಂದು ಘೋಷಿಸಿದರು.

ಪೋಲೆಂಡ್ ಗಡಿಯಿಂದ ದಾಳಿ : ಸತತ ಮೂರು ವಾರಗಳಿಂದ ದಾಳಿ ನಡೆಸುತ್ತಿದ್ದರೂ ಉಕ್ರೇನ್‌ ರಾಜಧಾನಿ ಕೀವ್‌ ನಗರವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಇರುಸುಮುರುಸಿಗೆ ಒಳಗಾಗಿರುವ ರಷ್ಯಾ, ಹೇಗಾದರೂ ಮಾಡಿ ಉಕ್ರೇನ್‌ನ ಪ್ರತಿರೋಧವನ್ನು ಸಂಪೂರ್ಣವಾಗಿ ತಡೆಯುವ ದೃಷ್ಟಿಯಿಂದ ದಾಳಿ ನಡೆಸುತ್ತಿದೆ. 

ಪ್ರಮುಖವಾಗಿ ಪೋಲೆಂಡ್‌ ಗಡಿಯಿಂದ 40 ಮೈಲಿ ದೂರದಲ್ಲಿರುವ ಲ್ವೀವ್‌ ನಗರದ ವಿಮಾನ ನಿಲ್ದಾಣದ ಭಾಗಗಳಲ್ಲಿ ರಷ್ಯಾ, ಕಪ್ಪು ಸಮುದ್ರದಿಂದಲೇ ಕ್ಷಿಪಣಿ ದಾಳಿ ನಡೆಸಿದೆ. ಈ ವೇಳೆ ವಿಮಾನ ನಿಲ್ದಾಣದ ಮಿಲಿಟರಿ ವಿಮಾನ ರಿಪೇರಿ ಘಟಕ ಹಾಗೂ ಬಸ್‌ ರಿಪೇರಿ ಘಟಕ ಹಾನಿಗೊಳಗಾಗಿವೆ. ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ಆಸ್ಪತ್ರೆ, ಶಾಲೆ ಮತ್ತು ಕಟ್ಟಡಗಳಲ್ಲಿ ಅಡಗಿಕೊಂಡಿದ್ದಾರೆ.

ಇದೇ ವೇಳೆ, ಉಕ್ರೇನ್‌ ರಾಜಧಾನಿ ಕೀವ್‌, ಕೀವ್‌ ಹೊರವಲಯದ ಪ್ರದೇಶಗಳು, ಲ್ವೀವ್‌ನ ವಿಮಾನ ನಿಲ್ದಾಣ, ಖಾರ್ಕೀವ್‌, ಮರಿಯುಪೋಲ್‌ ಮುಂತಾದ ಪ್ರಮುಖ ನಗರಗಳ ಮೇಲೆ ಬಾಂಬ್‌ ಮತ್ತು ಶೆಲ್‌ ದಾಳಿ ನಡೆಸಿದೆ. ಇದರಿಂದಾಗಿ ಹಲವು ಕಟ್ಟಡಗಳು ನಾಶಗೊಂಡಿವೆ. ಯುದ್ಧದ ವಾತಾವರಣ ಮಾತ್ರ ಬದಲಾಗಿಲ್ಲ.
 

click me!