Russia Ukraine Crisis: ಗನ್‌ ಕೈಗೆತ್ತಿಕೊಂಡ ಮಿಸ್‌ ಉಕ್ರೇನ್‌ ಅನಸ್ತಾಸೀಯಾ ಲೆನ್ನಾ!

By Kannadaprabha News  |  First Published Feb 28, 2022, 12:04 PM IST

ಜಪಾನಿನ ಉದ್ಯಮಿ ಹಿರೋಶಿ ಮಿಕ್ಕಿ ಮಿಕಿತಾನಿ ಉಕ್ರೇನ್‌ ಸರ್ಕಾರಕ್ಕೆ 65.25 ಕೋಟಿ ರು ದೇಣಿಗೆ ನೀಡುವುದಾಗಿ ಭಾನುವಾರ ಘೋಷಿಸಿದ್ದಾರೆ


ಕೀವ್‌ (ಫೆ. 28) : ಮಾಜಿ ಮಿಸ್‌ ಉಕ್ರೇನ್‌ ಅನಸ್ತಾಸೀಯಾ ಲೆನ್ನಾ ರಷ್ಯಾ ದಾಳಿಯಿಂದ ಉಕ್ರೇನ್‌ನನ್ನು ರಕ್ಷಿಸಲು ಗನ್‌ ಕೈಗೆತ್ತಿಕೊಂಡಿದ್ದಾರೆ. ಉಕ್ರೇನಿನ ಅಧ್ಯಕ್ಷ ವೊಲೊದಿಮಿರ್‌ ಝೆಲೆನ್‌ಸ್ಕಿ ದೇಶ ಬಿಟ್ಟು ಪಲಾಯನ ಮಾಡುವ ಅವಕಾಶ ತಿರಸ್ಕರಿಸಿ ದೇಶದ ರಕ್ಷಣೆಯಲ್ಲಿ ಭಾಗಿಯಾಗೋಣ ಎಂದು ಕರೆ ನೀಡಿದ್ದರು. ಇದರಿಂದ ಸ್ಫೂರ್ತಿ ಪಡೆದ ಲೆನ್ನಾ ಸ್ವಯಂಪ್ರೇರಣೆಯಿಂದ ಸೇನೆ ಸೇರಿದ್ದಾರೆ. 2015ರಲ್ಲಿ ಮಿಸ್‌ ಗ್ರಾಂಡ್‌ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಉಕ್ರೇನ್‌ನನ್ನು ಪ್ರತಿನಿಧಿಸಿದ್ದ ಲೆನ್ನಾ ಸೇನಾ ಸಮವಸ್ತ್ರ ಧರಿಸಿ, ಕೈಯಲ್ಲಿ ಗನ್‌ ಹಿಡಿದು ದೇಶ ರಕ್ಷಣೆಗೆ ಕಾರ್ಯದಲ್ಲಿ ತೊಡಗಿರುವ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಉಕ್ರೇನಿಗೆ 65 ಕೋಟಿ ದೇಣಿಗೆ ಘೋಷಿಸಿದ ಜಪಾನಿ ಉದ್ಯಮಿ ಮಿಕಿತಾನಿ!: ಜಪಾನಿನ ಉದ್ಯಮಿ ಹಿರೋಶಿ ಮಿಕ್ಕಿ ಮಿಕಿತಾನಿ ಉಕ್ರೇನ್‌ ಸರ್ಕಾರಕ್ಕೆ 65.25 ಕೋಟಿ ರು ದೇಣಿಗೆ ನೀಡುವುದಾಗಿ ಭಾನುವಾರ ಘೋಷಿಸಿದ್ದಾರೆ. ರಾಕುಟೆನ್‌ ಕಂಪನಿಯ ಮುಖ್ಯಸ್ಥನಾದ ಮಿಕಿತಾನಿ ಉಕ್ರೇನಿನ ಮೇಲೆ ರಷ್ಯಾ ಮಾಡಿದ ದಾಳಿಯನ್ನು ‘ಪ್ರಜಾಪ್ರಭುತ್ವಕ್ಕೆ ಒಡ್ಡಿದ ಸವಾಲು’ ಎಂದು ಟೀಕಿಸಿದ್ದಾರೆ.

Tap to resize

Latest Videos

ಇದನ್ನೂ ಓದಿ: Russia Ukraine Crisis: ಗೂಗಲ್, ಯುಟ್ಯೂಬ್‌ನಲ್ಲೂ ರಷ್ಯಾ ಮೀಡಿಯಾ ಬ್ಯಾನ್!

‘ಉಕ್ರೇನಿನ ಯುದ್ಧ ಸಂತ್ರಸ್ತರಿಗೆ 65.25ಕೋಟಿ ರು ಮಾನವೀಯ ನೆರವಾಗಿ ನೀಡುತ್ತೇನೆ. ಯುದ್ಧ ಬಿಟ್ಟು ರಷ್ಯಾ-ಉಕ್ರೇನ್‌ ಶಾಂತಿಯುತ ಮಾರ್ಗದಲ್ಲಿ ತಮ್ಮ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲಿ. ಉಕ್ರೇನಿನಲ್ಲಿ ಮತ್ತೆ ಶಾಂತಿ ಸ್ಥಾಪನೆಯಾಗಲಿ ಎಂದು ಬಯಸುತ್ತೇನೆ’ ಎಂದು ಅಧ್ಯಕ್ಷ ವೊಲೊದಿಮಿರ್‌ ಝೆಲೆನ್ಸ್‌ಸ್ಕಿಗೆ ಪತ್ರ ಬರೆದಿದ್ದಾರೆ. 2019ರಲ್ಲಿ ಮಿಕಿತಾನಿ ಉಕ್ರೇನಿನ ರಾಜಧಾನಿ ಕೀವ್‌ಗೆ ಭೇಟಿಕೊಟ್ಟಿದ್ದರು.

ಉಕ್ರೇನಲ್ಲಿ ನಾಯಿ ಬಿಟ್ಟು ದೇಶಕ್ಕೆ ಮರಳಲ್ಲ: ಭಾರತದ ವಿದ್ಯಾರ್ಥಿ ಹಟ: ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಯೊಬ್ಬನು ತಾನು ಸಾಕಿದ ನಾಯಿಯನ್ನು ನನ್ನೊಂದಿಗೆ ಭಾರತಕ್ಕೆ ಕರೆದೊಯ್ಯಲು ಅವಕಾಶ ನೀಡದಿದ್ದರೆ ತಾನೂ ಉಕ್ರೇನ್‌ ಬಿಟ್ಟು ಬರುವುದಿಲ್ಲ ಎಂದು ಹೇಳಿದ್ದಾರೆ.

ಖಾರ್ಕಿವ್‌ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ರೇಡಿಯೋ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ಕಲಿಯುತ್ತಿರುವ ವಿದ್ಯಾರ್ಥಿಯಾದ ರಿಶಬ್‌ ಕೌಶಿಕ್‌ ಭಾನುವಾರ ಡಿ.27ರಂದು ವಿಮಾನದಲ್ಲಿ ಭಾರತಕ್ಕೆ ಮರಳಬೇಕಾಗಿತ್ತು. ಆದರೆ ಅವರು ತಮ್ಮೊಂದಿಗೆ ಸಾಕು ನಾಯಿ ‘ಮಲಿಬು’ವನ್ನು ಬಿಟ್ಟು ದೇಶಕ್ಕೆ ಮರಳಲು ಒಪ್ಪದೇ ಉಕ್ರೇನಿನಲ್ಲೇ ಇದ್ದಾರೆ.

‘ನಾಯಿಯನ್ನೂ ನನ್ನೊಂದಿಗೆ ಕರೆತರಲು ಅನುಮತಿಗಾಗಿ ನಾನು ಪ್ರಯತ್ನಿಸುತ್ತಿದ್ದೇನೆ. ಅದಕ್ಕೆಂದೇ ದೆಹಲಿಯಲ್ಲಿರುವ ಆನಿಮಲ್‌ ಕ್ವಾರಂಟೈನ್‌ ಹಾಗೂ ಸರ್ಟಿಫಿಕೇಶನ್‌ ಸವೀರ್‍ಸ್‌ ಹಾಗೂ ಉಕ್ರೇನಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೂ ಸಂಪರ್ಕಿಸಿದ್ದೇನೆ. ಆದರೆ ನನಗೆ ಅನುಮತಿ ಸಿಗುತ್ತಿಲ್ಲ. ನಾನೂ ಬಿಟ್ಟು ಹೋದರೆ ನಾಯಿಯ ಆರೈಕೆ ಮಾಡುವವರು ಯಾರು? ಹೀಗಾಗಿ ನಾಯಿಯನ್ನು ಕರೆತರಲು ಅವಕಾಶ ನೀಡದಿದ್ದರೆ ನಾನೂ ಉಕ್ರೇನ್‌ ಬಿಟ್ಟು ಬರುವುದಿಲ್ಲ’ ಎಂದು ರಿಶಬ್‌ ಹೇಳಿದ್ದಾರೆ.

ಇದನ್ನೂ ಓದಿ: Russia Ukraine War: ಉಕ್ರೇನ್‌ ಬಿಟ್ಟು ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಆಹಾರ ನೀಡಿದ ಸಿಖ್‌ ವ್ಯಕ್ತಿ

ಉಕ್ರೇನ್‌ ಕೋರಿಕೆ ಮೇರೆಗೆ ತುರ್ತು ಇಂಟರ್‌ನೆಟ್‌ ಸೇವೆ ಕಲ್ಪಿಸಿದ ಮಸ್ಕ್‌:  ರಷ್ಯಾ ದಾಳಿಯ ಬಳಿಕ ಇಂಟರ್‌ನೆಟ್‌ ಸೇವೆಯಲ್ಲಿ ಭಾರೀ ವ್ಯತ್ಯಯ ಅನುಭವಿಸುತ್ತಿದ್ದ ಉಕ್ರೇನ್‌ ನೆರವಿಗೆ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರ ಸ್ಟಾರ್‌ಲಿಂಕ್‌ ಕಂಪನಿ ಧಾವಿಸಿದೆ. ಉಕ್ರೇನ್‌ ಕೋರಿಕೆ ಬಂದ ಕೇವಲ 10 ಗಂಟೆಯಲ್ಲಿ ಸ್ಟಾರ್‌ಲಿಂಕ್‌ ಕಂಪನಿ ದೇಶದಲ್ಲಿ ಉಪಗ್ರಹ ಬ್ರಾಡ್‌ಬ್ಯಾಂಡ್‌ ಸೇವೆ ಆರಂಭಿಸಿದೆ.

‘ನೀವು ಮಂಗಳ ಗ್ರಹವನ್ನು ವಸತಿ ಪ್ರದೇಶ ಮಾಡಲು ಹೊರಟಿರುವ ವೇಳೆ, ಇತ್ತ ರಷ್ಯಾ ಉಕ್ರೇನ್‌ ಅನ್ನು ಆಕ್ರಮಿಸಿಕೊಳ್ಳುತ್ತಿದೆ. ನಿಮ್ಮ ರಾಕೆಟ್‌ಗಳು ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಇಳಿಯುತ್ತಿದ್ದರೆ, ಇತ್ತ ರಷ್ಯಾದ ರಾಕೆಟ್‌ಗಳು ಉಕ್ರೇನಿ ಜನರ ಮೇಲೆ ಆಗಸದಿಂದ ದಾಳಿ ನಡೆಸುತ್ತಿವೆ.

ಹೀಗಾಗಿ ಉಕ್ರೇನ್‌ನಲ್ಲಿ ನಿಮ್ಮ ಸ್ಟಾರ್‌ಲಿಂಕ್‌ ಸ್ಟೇಷನ್‌ ಆರಂಭಕ್ಕೆ ಮನವಿ ಮಾಡುತ್ತಿದ್ದೇವೆ’ ಎಂದು ಉಕ್ರೇನಿನ ಸಚಿವ ಮಿಖಾಹಿಲೋ ಫೆಡ್ರೋವ್‌, ಟ್ವೀಟ್‌ ಮೂಲಕ ಎಲಾನ್‌ ಮಸ್ಕ್‌ಗೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ತುರ್ತಾಗಿ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಸೇವೆ ಆರಂಭಿಸಲಾಗಿದೆ.

click me!