ರಷ್ಯಾ-ಉಕ್ರೇನ್ ನಡುವೆ ಯುದ್ಧದ ಭೀತಿ ಹೆಚ್ಚುತ್ತಿರುವ ನಡುವೆಯೇ, ಉಕ್ರೇನ್ ದೇಶದಲ್ಲಿರುವ ಎಲ್ಲ ಅಮೆರಿಕನ್ನರೂ ಕೂಡಲೇ ಸ್ವದೇಶಕ್ಕೆ ಮರಳಬೇಕೆಂದು ಅಮೆರಿಕ ಸೂಚಿಸಿದೆ. ಒಂದು ವೇಳೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣಕ್ಕೆ ಮುಂದಾದರೆ ಅಮೆರಿಕ ಸೇನೆ ರಕ್ಷಣಾ ಕಾರ‍್ಯಕ್ಕೆ ಧಾವಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ನ್ಯೂಯಾರ್ಕ್ (ಫೆ.12): ರಷ್ಯಾ-ಉಕ್ರೇನ್ (Russia-Ukraine) ನಡುವೆ ಯುದ್ಧದ ಭೀತಿ ಹೆಚ್ಚುತ್ತಿರುವ ನಡುವೆಯೇ, ಉಕ್ರೇನ್ ದೇಶದಲ್ಲಿರುವ ಎಲ್ಲ ಅಮೆರಿಕನ್ನರೂ ಕೂಡಲೇ ಸ್ವದೇಶಕ್ಕೆ ಮರಳಬೇಕೆಂದು ಅಮೆರಿಕ ಸೂಚಿಸಿದೆ. ಒಂದು ವೇಳೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣಕ್ಕೆ ಮುಂದಾದರೆ ಅಮೆರಿಕ ಸೇನೆ ರಕ್ಷಣಾ ಕಾರ‍್ಯಕ್ಕೆ ಧಾವಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಸುದ್ದಿಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ ಈ ಸೂಚನೆ ನೀಡಿದ್ದಾರೆ. ‘ವಿಶ್ವದ ಅತಿದೊಡ್ಡ ಸೇನೆ ಹೊಂದಿರುವ ದೇಶದ ಜೊತೆಗಿನ ಯುದ್ಧದ ಸಾಧ್ಯತೆ ಇರುವ ಸನ್ನಿವೇಶ. ಯಾವುದೇ ಸಂದರ್ಭದಲ್ಲಿ ಯುದ್ಧ ಆರಂಭವಾಗಬಹುದು’ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ರಷ್ಯಾ-ಉಕ್ರೇನ್ ಗಡಿಯಲ್ಲಿ ಉದ್ವಿಗ್ನ ಮಾತಾವರಣ ನಿರ್ಮಾಣವಾಗಿದ್ದು, ರಷ್ಯಾ 1.30 ಲಕ್ಷಕ್ಕೂ ಹೆಚ್ಚು ಸೈನಿಕರು, ಕ್ಷಿಪಣಿಗಳು ಮತ್ತಿತರ ಯುದ್ಧ ಸಾಮಗ್ರಿಗಳನ್ನು ಉಕ್ರೇನ್ ಗಡಿಯಲ್ಲಿ ನಿಯೋಜಿಸುತ್ತಿದೆ ಎಂದು ವರದಿಯಾಗುತ್ತಿದೆ. ಆದರೆ ರಷ್ಯಾ ಇದನ್ನು ನಿರಾಕರಿಸುತ್ತಿದೆ.
ಕಾಶ್ಮೀರ ವಿವಾದದಲ್ಲಿ ಹಸ್ತಕ್ಷೇಪ ಮಾಡಲ್ಲ: ರಷ್ಯಾ ಸರ್ಕಾರ ಸ್ಪಷ್ಟನೆ!
ಉಕ್ರೇನ್-ರಷ್ಯಾ ‘ಯುದ್ಧ ಕಾರ್ಮೋಡ’: ನೆರೆಯ ಉಕ್ರೇನ್ (Ukraine) ಮೇಲೆ ರಷ್ಯಾದ (Russia) ದಾಳಿ ಸಾಧ್ಯತೆ ದಟ್ಟವಾಗುತ್ತಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ. ಇದರ ಬೆನ್ನಲ್ಲೇ, ದಾಳಿಗೆ ಅಗತ್ಯವಾದ ಒಟ್ಟಾರೆ ಸೇನೆಯ ಪೈಕಿ ಶೇ.70ರಷ್ಟನ್ನು ಈಗಾಗಲೇ ರಷ್ಯಾ ಉಕ್ರೇನ್ ಗಡಿಯಲ್ಲಿ ರವಾನಿಸಿದೆ ಎಂದು ಅಮೆರಿಕದ ಗುಪ್ತಚರ ಪಡೆಗಳು ಹೇಳಿವೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ 2000 ಯೋಧರ ಪಡೆಯನ್ನು ನ್ಯಾಟೋ ಪಡೆಗಳಿಗೆ ಸಹಾಯ ನೀಡಲು ರವಾನಿಸಿದೆ. ಇದು ತ್ವೇಷ ಪರಿಸ್ಥಿತಿಯ ಸಂಕೇತವಾಗಿದೆ.
ರಷ್ಯಾ ಸಜ್ಜು: ಈಗಾಗಲೇ ರಷ್ಯಾ ಸೇನೆ ಉಕ್ರೇನ್ ಗಡಿಯಲ್ಲಿ 1 ಲಕ್ಷದಷ್ಟು ಸೈನಿಕರು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಿದೆ. ಮುಂದಿನ ಕೆಲ ದಿನಗಳಲ್ಲಿ ಇಲ್ಲಿ ಮೈಕೊರೆವ ಹಿಮ ಆವರಿಸಿಕೊಳ್ಳಲಿದ್ದು, ರಷ್ಯಾ ತನ್ನ ಸೇನಾ ಬಲವನ್ನು ಹೆಚ್ಚಿಸಲು ನೆರವು ನೀಡಲಿದೆ. ಸದ್ಯದ ಅಂದಾಜಿನ ಪ್ರಕಾರ ದಾಳಿಗೆ ಅಗತ್ಯವಾದ ಸೇನೆಯ ಪೈಕಿ ಶೆ.70ರಷ್ಟನ್ನು ರಷ್ಯಾ ಈಗಾಗಲೇ ಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿದೆ. ಒಂದು ವೇಳೆ ದಾಳಿ ನಡೆದಿದ್ದೇ ಹೌದಾದಲ್ಲಿ ಕನಿಷ್ಠ 50 ಸಾವಿರ ನಾಗರಿಕರು ಸಾವನ್ನಪ್ಪಲಿದ್ದಾರೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಹೇಳಿದೆ.
ಅಮೆರಿಕ ಸೇನೆ ರವಾನೆ: ಈ ನಡುವೆ ಸಂಭವನೀಯ ಯುದ್ಧದ ವೇಳೆ ರಷ್ಯಾದ ಮೇಲೆ ಪ್ರತಿದಾಳಿ ನಡೆಸಲು ಸೇನೆಯನ್ನು ಕಳುಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈಗಾಗಲೇ ಘೋಷಣೆ ಮಾಡಿರುವರಾದರೂ, ನ್ಯಾಟೋ ಪಡೆಯ ಬಾಧ್ಯತೆಯನ್ನು ಪೂರೈಸುವ ಸಲುವಾಗಿ 2000 ಯೋಧರನ್ನು ಯುರೋಪ್‌ಗೆ ರವಾನಿಸಿದೆ. ಅವರು ಜರ್ಮನಿ ಮತ್ತು ಪೋಲೆಂಡ್‌ಗೆ ಬಂದು ಇಳಿದಿದ್ದಾರೆ ಎಂದು ಅಮೆರಿಕ ಸೇನೆ ಮಾಹಿತಿ ನೀಡಿದೆ.
Ukraine Russia Tension : ಯುದ್ಧದ ಆತಂಕ ಹೆಚ್ಚಿಸಿದ ರಷ್ಯಾದ ಸಮರಾಭ್ಯಾಸ
ರಷ್ಯಾ-ಉಕ್ರೇನ್ ಬಿಕ್ಕಟ್ಟಿಗೆ ಏನು ಕಾರಣ?
- ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ ಯುರೋಪ್ ಒಕ್ಕೂಟದತ್ತ ವಾಲುತ್ತಿರುವುದು ರಷ್ಯಾ ಆಕ್ರೋಶಕ್ಕೆ ಕಾರಣ
- ಉಕ್ರೇನ್‌ಗೆ ನ್ಯಾಟೋದ ಪಾಲುದಾರ ಸ್ಥಾನಮಾನ ಪ್ರಸ್ತಾಪಕ್ಕೆ ರಷ್ಯಾದ ತೀವ್ರ ವಿರೋಧ. ಪ್ರಸ್ತಾಪ ಹಿಂಪಡೆವಂತೆ ಬೆದರಿಕೆ
- ಉಕ್ರೇನ್‌ಗೆ ನ್ಯಾಟೋ ದೇಶಗಳು ಶಸ್ತ್ರಾಸ್ತ್ರ ಮತ್ತು ಇತರೆ ಮಿಲಿಟಿ ನೆರವು ನೀಡುತ್ತಿರುವುದನ್ನು ರಷ್ಯಾ ತೀವ್ರ ವಿರೋಧಿಸುತ್ತಿದೆ
- ಉಕ್ರೇನ್‌ನಲ್ಲಿ ತನ್ನ ಕೈಗೊಂಬೆ ಸರ್ಕಾರ ರಚಿಸುವ ರಷ್ಯಾ ಯತ್ನಕ್ಕೆ ಅಮೆರಿಕ, ಯುರೋಪ್ ದೇಶಗಳ ಅಡ್ಡಗಾಲು ಪ್ರಯತ್ನ