3 ನೇ ಹಂತದ ಪರೀಕ್ಷೆಗೆ ಬ್ರೇಕ್; ವರ್ಷಾಂತ್ಯದೊಳಗೆ ಕೊರೋನಾ ಲಸಿಕೆ ಡೌಟು?

By Suvarna NewsFirst Published Oct 31, 2020, 4:53 PM IST
Highlights

ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್‌ ಪ್ಲಾನ್‌ಗೆ ಹಿನ್ನಡೆ | 3ನೇ ಹಂತದ ಕೋವಿಡ್ ಲಸಿಕೆ ಪರೀಕ್ಷೆಗಳಿಗೆ ತಾತ್ಕಾಲಿಕ ಬ್ರೇಕ್ |  ಇನ್ನೇನು ಲಸಿಕೆ ಬಂದೇ ಬಿಡುತ್ತದೆ ಎಂಬ ಭರವಸೆ ಹುಸಿಯಾಗಿ ಬಿಡುತ್ತಾ? 

ನವದೆಹಲಿ (ಅ. 31): ವಿಶ್ವದ ನೆಮ್ಮದಿಯನ್ನೇ ಹಾಳುಮಾಡಿರುವ ಕೊರೋನಾಗೆ, ವರ್ಷಾಂತ್ಯದೊಳಗೆ ಲಸಿಕೆಯನ್ನ ಮಾಸ್‌ ಪ್ರೊಡಕ್ಷನ್‌ ಮಾಡೋದಾಗಿ ಮೊನ್ನೆ ಮೊನ್ನೆ ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುತಿನ್ ಹೇಳಿದ್ರು. ಆದ್ರೆ ಈಗ ಪುತಿನ್‌ರ ಮೆಗಾ ಪ್ಲಾನ್‌ಗೆ ಕೊಂಚ ಹಿನ್ನಡೆಯಾಗಿದೆ ಅಂತಾ ತಿಳಿದು ಬಂದಿದೆ.

ರಷ್ಯಾದಲ್ಲಿ ಡೋಸ್‌ಗಳ ಕೊರತೆಕಾಣಿಸಿಕೊಂಡಿದ್ದು, ಮೂರನೇ ಹಂತದ ಪ್ರಯೋಗಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ, ಎಂದು ರಾಯ್ಟರ್ ವರದಿ ಮಾಡಿದೆ. ನವೆಂಬರ್ 10ರ ಬಳಿಕ ವ್ಯಾಕ್ಸಿನ್ ಪರೀಕ್ಷೆಗಳನ್ನು ಮತ್ತೆ ಪುನಾರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

"

ಕೇರಳದಲ್ಲಿ ಕೊರೊನಾ ಸೋಂಕು ಹೈ ಜಂಪ್..!

ಕಳೆದ ಆಗಸ್ಟ್‌ನಲ್ಲೇ ಕೊರೋನಾಗೆ ಸ್ಪಟ್ನಿಕ್ ವಿ ಎಂಬ ಲಸಿಕೆ ಕಂಡುಹಿಡಿದಿರುವುದಾಗಿ ರಷ್ಯಾ ಪ್ರಕಟಿಸಿತ್ತು. ಈ ಲಸಿಕೆ ಪರಿಣಾಮಕಾರಿಯಾಗಿದೆ, ವರ್ಷಾಂತ್ಯದೊಳಗೆ ಮಾಸ್ ಪ್ರೊಡಕ್ಷನ್ ಮಾಡೋದಾಗಿ ಪುಟಿನ್ ಹೇಳಿದ್ರು.

ಬೇರೆ ದೇಶಗಳಲ್ಲೂ ಲಸಿಕೆ ಉತ್ಪಾದನೆ ಮಾಡ್ಲಿಕ್ಕೂ ರಷ್ಯಾ ಸಿದ್ಧವಿದೆ ಎಂದು ಹೇಳಿದ್ರು. ಕೆಲವೇ ಕೆಲವು ರಾಷ್ಟ್ರಗಳಲ್ಲಿ ಕೊರೋನಾಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಸಂಬಂಧಿಸಿದ ಅಧ್ಯಯನ, ಸಂಶೋಧನೆ, ಪ್ರಯೋಗ ಮತ್ತು ಪರೀಕ್ಷೆಗಳು ಕೂಡಾ ನಡೆಯುತ್ತಿವೆ. ಕೊರೋನಾದಿಂದ ಕಂಗೆಟ್ಟುಹೋಗಿರುವ ಇಡೀ ವಿಶ್ವ, ಯಾವಾಗ ಲಸಿಕೆ ನಮ್ಮ ಬಳಿ ಬರುತ್ತೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದೆ.

click me!