ಲಾಕ್ಡೌನ್‌ ಆತಂಕ: ಪ್ಯಾರಿಸ್‌ ಸುತ್ತಮುತ್ತ 700 ಕಿ.ಮೀ ಉದ್ದದ ಟ್ರಾಫಿಕ್‌ ಜಾಮ್‌

By Kannadaprabha News  |  First Published Oct 31, 2020, 9:48 AM IST

ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೋವಾ ವೈರಸ್ 2 ಹಾಗೂ 3ನೇ ಅಲೆಯ ಭೀತಿ. ಹಲವು ರಾಷ್ಟ್ರಗಳಲ್ಲಿ ಮತ್ತೆ ಲಾಕ್ಡೌನ್‌ ಘೋಷಣೆ. ಸೋಂಕು ತಡೆಗೆ ಫ್ರಾನ್ಸ್‌ನಲ್ಲಿಯೂ ಲಾಕ್ಡೌನ್, ಪ್ಯಾರಿಸ್‌ನಿಂದ ತಮ್ಮೂರಿಗೆ ಪಯಣಿಸಿದ ನಿವಾಸಿಗಳು, ಫುಲ್ ಟ್ರಾಫಿಕ್ ಜಾಮ್


ಪ್ಯಾರಿಸ್ (ಅ.31)‌: ಕೊರೋನಾ ಸೋಂಕು ತಡೆಗೆ ಫ್ರಾನ್ಸ್‌ನಲ್ಲಿ 2ನೇ ಲಾಕ್ಡೌನ್‌ ಜಾರಿಯಾಗುತ್ತಲೇ, ಗುರುವಾರ ರಾತ್ರಿ ರಾಜಧಾನಿ ಪ್ಯಾರಿಸ್‌ ಸುತ್ತಮುತ್ತಲ ಪ್ರದೇಶದಲ್ಲಿ ದಾಖಲೆಯ 700 ಕಿ.ಮೀ ಉದ್ದದಷ್ಟುಟ್ರಾಫಿಕ್‌ ಜ್ಯಾಮ್‌ ಉಂಟಾದ ಘಟನೆ ಸಂಭವಿಸಿದೆ.

ರಾತ್ರಿ 9 ಗಂಟೆಯಿಂದ ಲಾಕ್ಡೌನ್‌ ಜಾರಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಸಾವಿರಾರು ಜನ ಜನದಟ್ಟಣೆ ಮತ್ತು ದುಬಾರಿ ನಗರ ಪ್ಯಾರಿಸ್‌ನಿಂದ ದೂರದ ಊರುಗಳಿಗೆ ಹೊರಟರು. ಮತ್ತೊಂದಿಷ್ಟುಜನರು ಬೇರೆ ಊರುಗಳಿಂದ ಪ್ಯಾರಿಸ್‌ನತ್ತ ಮುಖ ಮಾಡಿದರು. ಸಂಜೆ ಬಳಿಕ ನಡೆದ ಈ ಬೆಳವಣಿಗೆಯಿಂದಾಗಿ ರಸ್ತೆಗಳಲ್ಲಿ ಸಾವಿರಾರು ಕಾರು ಸಾಲುಗಟ್ಟಿನಿಂತು, ಪ್ಯಾರಿಸ್‌ ನಗರ ಮತ್ತು ಅದಕ್ಕೆ ಹೊಂದಿಕೊಂಡ ಸುತ್ತಮುತ್ತಲ ಪ್ರದೇಶಗಳಲ್ಲಿ ಒಟ್ಟಾರೆ 700 ಕಿ.ಮೀನಷ್ಟುಉದ್ದದಷ್ಟುಟ್ರಾಫಿಕ್‌ ಜ್ಯಾಮ್‌ ಉಂಟಾಗಿತ್ತು. ಪರಿಣಾಮ ಜನರು ಭಾರೀ ಸಂಕಷ್ಟಎದುರಿಸಬೇಕಾಗಿ ಬಂತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos

undefined

ಮತ್ತೊಂದು ಅಲೆಯತ್ತ ಕೊರೋನಾ: ಲಾಕ್ಡೌನ್ ಘೋಷಣೆ

ಈ ನಡುವೆ 2ನೇ ಲಾಕ್‌ಡೌನ್‌ ವಿರೋಧಿಸಿ ಫ್ರಾನ್ಸ್‌ನ ಹಲವು ನಗರಗಳಲ್ಲಿ ಹಿಂಸಾಚಾರ ನಡೆದಿದೆ. ಲಾಕ್ಡೌನ್‌ ವಿರೋಧಿಸುತ್ತಿರುವ ಯುವಸಮೂಹ ವ್ಯಾಪಾರದ ಸ್ಥಳಗಳ ಮೇಲೆ ದಾಳಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿವೆ.

 

click me!