ಮೊದಲು ಕೊರೋನಾ ಲಸಿಕೆ ಬಿಡುಗಡೆ : ರಷ್ಯಾದಿಂದ ಹಂಚಿಕೆಗೆ ತಡೆ

By Kannadaprabha NewsFirst Published Oct 30, 2020, 12:00 PM IST
Highlights

ಮೊಟ್ಟ ಮೊದಲ ಬಾರಿಗೆ ಕೊರೋನಾ ಲಸಿಕೆ ಬಿಡುಗಡೆ ಮಾಡಿದ್ದ ರಷ್ಯಾದಿಂದ ಇದೀಗ ಹಂಚಿಕೆಯನ್ನು ತಡೆ ಹಿಡಿಯಲಾಗಿದೆ 

ಮಾಸ್ಕೋ (ಅ.30): ವಿಶ್ವದಲ್ಲೇ ಮೊಟ್ಟಮೊದಲ ಕೊರೋನಾ ಲಸಿಕೆ ಬಿಡುಗಡೆ ಮಾಡಿ ಸುದ್ದಿಯಾಗಿದ್ದ ರಷ್ಯಾದಲ್ಲಿ ಆಗಲೇ ಸ್ಪುಟ್ನಿಕ್‌-5 ಲಸಿಕೆ ಕೊರತೆ ಕಾಣಿಸಿಕೊಂಡಿದೆಯಂತೆ.

 ಪರಿಣಾಮ ಮೂರನೇ ಹಂತದ ಪರೀಕ್ಷೆಯನ್ನೇ ಸರ್ಕಾರ ಮುಂದೂಡಿದೆ ಎಂದು ರಾಯಿಟ​ರ್‍ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್‌-5 ಹೆಸರಿನ ಲಸಿಕೆ ಪರೀಕ್ಷೆಗೆ ತಮ್ಮನ್ನು ಒಳಪಡಿಸಿಕೊಳ್ಳಲು ಪ್ರತೀನಿತ್ಯ ಸಾಗರೋಪಾದಿಯಲ್ಲಿ ಜನ ಸಮೂಹ ಹರಿದುಬರುತ್ತಿದೆ.

ಗುಡ್ ನ್ಯೂಸ್: ನೂರಕ್ಕಿಂತಲೂ ಕೆಳಗಿಳಿದ ಕೊರೋನಾ ಮರೆಯಾಗುವ ದಾರಿಯತ್ತ

 ಆದರೆ, ಅಷ್ಟುಜನರಿಗೆ ಅಗತ್ಯವಿರುವಷ್ಟುಲಸಿಕೆಯನ್ನು ಸ್ಪುಟ್ನಿಕ್‌-5 ಲಸಿಕೆ ಉತ್ಪಾದಕ ಕಂಪನಿ ಮಾಸ್ಕೋದ ಗಾಮಲೆಯಾ ಸಂಸ್ಥೆ ಉತ್ಪಾದಿಸಿಲ್ಲ. 

ಹೀಗಾಗಿ, ಸ್ವಯಂಪ್ರೇರಿತವಾಗಿ ಕೊರೋನಾ ಲಸಿಕೆಗೆ ಒಳಗಾಗಲು ಬರುತ್ತಿರುವವರಿಗೆ ಲಸಿಕೆಯ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹೊಸಬರಿಗೆ ತಾತ್ಕಾಲಿಕವಾಗಿ ಲಸಿಕೆ ಪ್ರಯೋಗವನ್ನು ರಷ್ಯಾ ತಡೆ ಹಿಡಿಯಲಾಗಿದೆ ಎಂದು ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ನವೆಂಬರ್‌ 10ರಿಂದ ಮತ್ತೆ ಲಸಿಕೆಯ ಪ್ರಯೋಗ ಆರಂಭವಾಗಲಿದೆ ಎಂದು ರಷ್ಯಾ ಆರೋಗ್ಯ ಇಲಾಖೆ ಹೇಳಿದೆ.

click me!