550 ಡ್ರೋನ್, 11 ಕ್ಷಿಪಣಿ ಬಳಸಿ ಉಕ್ರೇನ್ ಮೇಲೆ ರಷ್ಯಾದ ದಾಳಿ

Kannadaprabha News   | Kannada Prabha
Published : Jul 05, 2025, 05:47 AM IST
Explosion lights up the sky over the city during a Russian drone, amid Russia's attack on Ukraine, in Kyiv, Ukraine (Image/Reuters)

ಸಾರಾಂಶ

ಉಕ್ರೇನ್‌ನ ರಾಜಧಾನಿ ಕೀವ್‌ ಮೇಲೆ 550 ಡ್ರೋನ್ ಹಾಗೂ 11 ಕ್ಷಿಪಣಿ ಬಳಸಿ ಗುರುವಾರ ತಡರಾತ್ರಿ ರಷ್ಯಾ ಬೃಹತ್ ವಾಯುದಾಳಿ ನಡೆಸಿದೆ. ದಾಳಿಗೆ ಕೀವ್‌ನ 5 ಜಿಲ್ಲೆ ವ್ಯಾಪ್ತಿಯಲ್ಲಿ ಹಲವು ಮೂಲಸೌಕರ್ಯಗಳು ಭಾರೀ ಹಾನಿಗೊಳಗಾಗಿದ್ದು, 23 ಜನ ಗಾಯಗೊಂಡಿದ್ದಾರೆ.

ಕೀವ್: ಉಕ್ರೇನ್‌ನ ರಾಜಧಾನಿ ಕೀವ್‌ ಮೇಲೆ 550 ಡ್ರೋನ್ ಹಾಗೂ 11 ಕ್ಷಿಪಣಿ ಬಳಸಿ ಗುರುವಾರ ತಡರಾತ್ರಿ ರಷ್ಯಾ ಬೃಹತ್ ವಾಯುದಾಳಿ ನಡೆಸಿದೆ. ದಾಳಿಗೆ ಕೀವ್‌ನ 5 ಜಿಲ್ಲೆ ವ್ಯಾಪ್ತಿಯಲ್ಲಿ ಹಲವು ಮೂಲಸೌಕರ್ಯಗಳು ಭಾರೀ ಹಾನಿಗೊಳಗಾಗಿದ್ದು, 23 ಜನ ಗಾಯಗೊಂಡಿದ್ದಾರೆ. ರಷ್ಯಾ - ಉಕ್ರೇನ್‌ ಯುದ್ಧ ಪ್ರಾರಂಭವಾದ ನಂತರದಲ್ಲೇ ಇದು ಅತಿ ದೊಡ್ಡ ವೈಮಾನಿಕ ದಾಳಿಯಾಗಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಸಾಗಣೆಯನ್ನು ಸ್ಥಗಿತಗೊಳಿಸುವ ತಮ್ಮ ಆಡಳಿತದ ನಿರ್ಧಾರದ ಬಗ್ಗೆ ತಿಳಿಸಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ.

ಕೀವ್ ರಷ್ಯಾದ ಮೊದಲ ಗುರಿಯಾಗಿತ್ತು. ದಾಳಿಯಲ್ಲಿ ಕನಿಷ್ಠ 23 ಮಂದಿ ಗಾಯಗೊಂಡಿದ್ದು, 14 ಜನ ಅಸ್ಪತ್ರೆಗೆ ದಾಖಲಾಗಿದ್ದಾರೆ. ಉಕ್ರೇನಿಯನ್ ವಾಯುರಕ್ಷಣಾ ಪಡೆಗಳು 2 ಕ್ರೂಸ್ ಕ್ಷಿಪಣಿಗಳು ಸೇರಿದಂತೆ 270 ಗುರಿಗಳನ್ನು ಹೊಡೆದುರುಳಿಸಿದವು. ಇನ್ನೂ 208 ಗುರಿಗಳು ರಾಡಾರ್‌ನಿಂದ ನಾಶವಾಗಿವೆ. ರಾಜಧಾನಿಯ 10 ಜಿಲ್ಲೆಗಳಲ್ಲಿ ಕನಿಷ್ಠ 5 ಜಿಲ್ಲೆಗಳಲ್ಲಿ ಹಾನಿಯಾಗಿದೆ ಎಂದು ತುರ್ತು ಸೇವೆಗಳು ವರದಿ ಮಾಡಿವೆ.

ಅಮೆರಿಕ ನೀಡಿದ್ದ ಎಫ್ -16 ಸೂಪರ್‌ನಿಕ್ ಯುದ್ಧ ವಿಮಾನ ಹೊಡೆದುರುಳಿಸಿದ ರಷ್ಯಾ

ಕೀವ್‌: ರಷ್ಯಾ ಮತ್ತು ಉಕ್ರೇನ್ ನಡುವೆ ಸಮರ ಮುಂದುವರೆದಿದ್ದು,  ಉಕ್ರೇನ್‌ ಮೇಲೆ ರಷ್ಯಾ 477 ಡ್ರೋನ್ ಸೇರಿದಂತೆ 537 ವೈಮಾನಿಕ ಸಾಧನಗಳನ್ನು ಹಾರಿಸಿ 3 ವರ್ಷಗಳಲ್ಲೇ ಘನಘೋರ ದಾಳಿ ಮಾಡಿ ಇದರ ಮಧ್ಯೆಯೇ ಉಕ್ರೇನ್‌ಗೆ ಅಮೆರಿಕ ನೀಡಿದ್ದ ಎಫ್ -16 ಸೂಪರ್‌ನಿಕ್ ಯುದ್ಧ ವಿಮಾನ ಹೊಡೆದುರುಳಿಸಿ ಹಾಗೂ ಅದರಲ್ಲಿದ್ದ ಪೈಲಟ್‌ನನ್ನು ಹತ್ಯೆ ಮಾಡಿತ್ತು.

ಯುದ್ಧದಲ್ಲಿ ಇದು ಉಕ್ರೇನ್‌ನ ಎಫ್‌-16 ಯುದ್ಧ ವಿಮಾನ ಧ್ವಂಸ ಇದೇ ಮೊದಲು. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ಶಾಂತಿ ಮಾತುಕತೆಯ ಪ್ರಸ್ತಾಪ ನಡೆಯುತ್ತಿರುವ ನಡುವೆಯೇ ದಾಳಿ ನಡೆದಿತ್ತು

ಈ ಬಗ್ಗೆ ಉಕ್ರೇನ್ ವಾಯುಪಡೆಯ ಸಂವಹನ ವಿಭಾಗದ ಮುಖ್ಯಸ್ಥ ಯೂರಿ ಇಹ್ನಾತ್‌ ಪ್ರತಿಕ್ರಿಯಿಸಿದ್ದು, ‘ಇದುವರೆಗಿನ ಯುದ್ಧದಲ್ಲಿ ರಷ್ಯಾ ಅತಿದೊಡ್ಡ ದಾಳಿ ನಡೆಸಿದೆ. ರಾತ್ರೋರಾತ್ರಿ ಜನವಸತಿ, ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು 477 ಡ್ರೋನ್ , 60 ಕ್ಷಿಪಣಿ ಸೇರಿದಂತೆ 537 ವೈಮಾನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಉಕ್ರೇನ್ ಮೇಲೆ ದಾಳಿ ನಡೆಸಿದೆ. ಈ ಪೈಕಿ 249 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. 226 ಡ್ರೋನ್‌ಗಳು ಎಲೆಕ್ಟ್ರಾನಿಕ್‌ ಜಾಮ್‌ನಿಂದಾಗಿ ನಾಪತ್ತೆಯಾಗಿದೆ. ದಾಳಿಯಲ್ಲಿ ನಮ್ಮ ಒಬ್ಬ ನಾಗರಿಕ ಮಾತ್ರ ಸಾವನ್ನಪ್ಪಿದ್ದಾನೆ’ ಎನ್ನಲಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!