ರಷ್ಯಾದಿಂದ 2ನೇ ಕೊರೋನಾ ಲಸಿಕೆ ಬಿಡುಗಡೆ: ಶೀಘ್ರ 3ನೇಯದ್ದು ಮಾರುಕಟ್ಟೆಗೆ!

By Kannadaprabha NewsFirst Published Oct 15, 2020, 9:55 AM IST
Highlights

ಪ್ರಾಯೋಗಿಕ ಹಂತ ಪೂರ್ಣವಾಗದ ಮುಂಚಿತವಾಗಿಯೇ ಸ್ಫುಟ್ನಿಕ್‌ ಹೆಸರಿನಲ್ಲಿ ಕೊರೋನಾ ಲಸಿಕೆ| ರಷ್ಯಾದಿಂದ 2ನೇ ಕೊರೋನಾ ಲಸಿಕೆ ಬಿಡುಗಡೆ: ಶೀಘ್ರ 3ನೇಯದ್ದು ಮಾರುಕಟ್ಟೆಗೆ

ಮಾಸ್ಕೋ(ಅ.15): ಪ್ರಾಯೋಗಿಕ ಹಂತ ಪೂರ್ಣವಾಗದ ಮುಂಚಿತವಾಗಿಯೇ ಸ್ಫುಟ್ನಿಕ್‌ ಹೆಸರಿನಲ್ಲಿ ಕೊರೋನಾ ಲಸಿಕೆ ಬಿಡುಗಡೆಗೊಳಿಸಿ ಜಾಗತಿಕ ವಿಜ್ಞಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರಷ್ಯಾ ಸರ್ಕಾರ ಇದೀಗ ಮತ್ತೊಂದು ಲಸಿಕೆ ಬಿಡುಗಡೆಗೆ ಅನುಮೋದನೆ ನೀಡಿದೆ.

ಈ ಕುರಿತು ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಘೋಷಣೆ ಮಾಡಿದ್ದಾರೆ. ಎಪಿವ್ಯಾಕ್‌ ಕೊರೋನಾ ಎಂಬ ಹೆಸರಿನ 2ನೇ ಲಸಿಕೆಯನ್ನು ಸೈಬಿರಿಯಾದಲ್ಲಿರುವ ವೈರಾಣು ಮತ್ತು ಬಯೋಟೆಕ್ನಾಲಜಿಯ ವೆಕ್ಟರ್‌ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಸರ್ಕಾರಿ ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಪುಟಿನ್‌, ಸ್ಫುಟ್ನಿಕ್‌ ವಿ ಹಾಗೂ ಎಪಿವ್ಯಾಕ್‌ಕೊರೋನಾ ಲಸಿಕೆಗಳನ್ನು ನಾವು ಅತಿಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಬೇಕು. ಜೊತೆಗೆ ಚುಮಕೋವ್‌ ಕೇಂದ್ರ ಸಂಶೋಧಿಸುತ್ತಿರುವ 3ನೇ ಕೊರೋನಾ ಲಸಿಕೆಯೂ ಶೀಘ್ರವೇ ಬರಲಿದೆ ಎಂದಿದ್ದಾರೆ.

click me!