77 ವರ್ಷದ ಹಿಂದಿನ ಕೇಕ್‌ ಪೀಸ್‌ ಹರಾಜಿನಲ್ಲಿ 2.36 ಲಕ್ಷ ರೂಪಾಯಿಗೆ ಮಾರಾಟ!

By Santosh Naik  |  First Published Nov 11, 2024, 1:21 PM IST

77 ವರ್ಷಗಳ ಹಿಂದೆ ಮದುವೆಗೆಂದು ತಯಾರಿಸಲಾಗಿದ್ದ ಕೇಕ್‌ನ ಒಂದು ಪೀಸ್‌ ಇತ್ತೀಚೆಗೆ ಹರಾಜಿನಲ್ಲಿ 2.36 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಹಾಗಿದ್ದರೆ, ಈ ಕೇಕ್‌ನ ಸ್ಪೆಷಾಲಿಟಿ ಏನು ಅನ್ನೋದರ ವಿವರ ಇಲ್ಲಿದೆ.


ನವದೆಹಲಿ (ನ.11): ಸ್ಕಾಟ್ಲೆಂಡ್‌ನಲ್ಲಿ 77 ವರ್ಷದ ಕೇಕ್‌ನ ಸ್ಲೈಸ್ ಅನ್ನು ₹2.36 ಲಕ್ಷಕ್ಕೆ ($2,800) ಮಾರಾಟ ಮಾಡಲಾಗಿದೆ. 77 ವರ್ಷಗಳಷ್ಟು ಹಿಂದಿನ ಈ ಕೇಕ್‌ ಪೀಸ್‌ಅನ್ನು ಈಗ ಯಾವುದೇ ಕಾರಣಕ್ಕೂ ತಿನ್ನಲು ಸಾಧ್ಯವಿಲ್ಲ. ಹಾಗಿದ್ದರೂ, ಈ ಕೇಕ್‌ಗೆ ಇಷ್ಟು ಬೆಲೆ ಬಂದಿದ್ಯಾಕೆ ಅನ್ನೋ ಆಶ್ಚರ್ಯ ನಿಮ್ಮಲ್ಲಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ. 1947ರ ನವೆಂಬರ್‌ 20 ರಂದು ಇಂಗ್ಲೆಂಡ್‌ನ ರಾಣಿ 2ನೇ ಎಲಿಜಬೆತ್‌ ಹಾಗೂ ಪ್ರಿನ್ಸ್‌ ಫಿಲಿಪ್‌ ಅವರ ವಿವಾಹದಲ್ಲಿ ಈ ಕೇಕ್‌ಅನ್ನು ಕತ್ತರಿಸಲಾಗಿತ್ತು. ಅದರ ಒಂದು ಪೀಸ್‌ ಇತ್ತೀಚೆಗೆ ಹರಾಜು ಮಾಡಲಾಗಿದೆ. ಸುಮಾರು ಎಂಟು ದಶಕಗಳ ಬಳಿಕ ಈ ಕೇಕ್‌ಅನ್ನು ಹರಾಜಿನಲ್ಲಿ ಮಾರಾಟ ಮಾಡಲಾಗಿದೆ. ಚಿಕ್ಕ ಬಾಕ್ಸ್‌ನಲ್ಲಿ ಅಂದವಾಗಿ ಸುತ್ತಿಟ್ಟ ಈ ಕೇಕ್‌ ಇಷ್ಟು ವರ್ಷಗಳ ಕಾಲ ಒಂಚೂರೂ ರೂಪಗೆಡದೆ ಹಾಗೇ ಉಳಿದುಕೊಂಡಿತ್ತು. ಈ ಬಾಕ್ಸ್‌ನ ಮೇಲೆ ಆಗಿನ ರಾಜಕುಮಾರಿ ಎಲಿಜಬೆತ್ ಅವರ ಬೆಳ್ಳಿಯ ಚಿಹ್ನೆಯನ್ನು ಕೆತ್ತಲಾಗಿದೆ.

ಈ ಚಿಕ್ಕ ಪೆಟ್ಟಿಗೆಯನ್ನು ಬಕಿಂಗ್‌ಹ್ಯಾಂ ಅರಮನೆಯಿಂದ ಎಡಿನ್‌ಬರ್ಗ್‌ನ ಹೋಲಿರೂಡ್ ಹೌಸ್‌ನಲ್ಲಿರುವ ಮನೆಗೆಲಸಗಾರ ಮರಿಯನ್ ಪೋಲ್ಸನ್‌ಗೆ ಕಳಿಸಲಾಗಿತ್ತು. ಅವರ ಅದ್ದೂರಿ ವಿವಾಹದ ನಂತರ ರಾಜ ದಂಪತಿಗಳಿಂದ ಉಡುಗೊರೆಯಾಗಿ ಇದನ್ನು ನೀಡಲಾಗಿತ್ತು. ಕೇಕ್ ಜೊತೆಗೆ, ದಿವಂಗತ ರಾಣಿ ಪೋಲ್ಸನ್‌ಗೆ "ಸಂತೋಷದಾಯಕ ಮದುವೆಯ ಉಡುಗೊರೆ" ಗಾಗಿ ಧನ್ಯವಾದ ಸಲ್ಲಿಸುವ ಪತ್ರವನ್ನು ಬರೆದಿದ್ದರು.

Tap to resize

Latest Videos

undefined

“ನಾವಿಬ್ಬರೂ ಸಿಹಿ ಸೇವೆಯಿಂದ ಮೋಡಿಗೆ ಒಳಗಾಗಿದ್ದೇವೆ. ವಿಭಿನ್ನ ಹೂವುಗಳು ಮತ್ತು ಸುಂದರವಾದ ಬಣ್ಣವು ಅದನ್ನು ನೋಡುವ ಎಲ್ಲರಿಗೂ ಬಹಳವಾಗಿ ಮೆಚ್ಚುತ್ತದೆ ಎಂದು ನನಗೆ ತಿಳಿದಿದೆ, ”ಎಂದು ಬರೆದಿದ್ದರು.
ಎಲಿಜಬೆತ್‌ ಹಾಗೂ ಫಿಲಿಪ್‌ ಅವರ ಅದ್ದೂರಿ ಮದುವೆಯ ವಿವಾಹದ ಕೇಕ್‌ನ ಪೀಸ್‌ ಇದಗಿತ್ತು. ಮೂಲ ಕೇಕ್‌ 9 ಅಡಿ ಎತ್ತರವಿದ್ದರೆ, 200 ಕೆಜಿಗಿಂತ ಹೆಚ್ಚು ತೂಕ ಹೊಂದಿತ್ತು.ವಿವಾಹದ ಅತಿಥಿಗಳಿಗಾಗಿ ಕೇಕ್‌ನಿಂದ 2,000 ಸ್ಲೈಸ್‌ಗಳನ್ನು ಕತ್ತರಿಸಲಾಗಿತ್ತು ಮತ್ತು ಉಳಿದ ಕೇಕ್ ಅನ್ನು ದತ್ತಿ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳಿಗೆ ಕಳುಹಿಸಲಾಯಿತು. ಅಚ್ಚರಿಯ ವಿಚಾರ ನೆಂದರೆ, ಪ್ರಿನ್ಸ್ ಚಾರ್ಲ್ಸ್ ಅವರ ನಾಮಕರಣಕ್ಕಾಗಿ ಕೇಕ್‌ನ ಒಂದು ಫ್ಲೋರ್‌ಅನ್ನು ಕಾಯ್ದಿರಿಸಲಾಗಿತ್ತು.

ಬೆಂಗಳೂರು-ಮಂಗಳೂರು ನಡುವೆ ಎಲ್ಲಾ ಕಾಲಕ್ಕೂ ಸಲ್ಲುವ ಹೈ-ಸ್ಪೀಡ್‌ ರೋಡ್‌, 2028ರಿಂದ ನಿರ್ಮಾಣ ಕಾರ್ಯ?

ದಶಕಗಳಷ್ಟು ಹಳೆಯದಾದ ರಾಯಲ್ ಕೇಕ್‌ನ ಸ್ಲೈಸ್‌ಗಳನ್ನು ಈ ಮೊದಲು ಮಾರಾಟ ಮಾಡಲಾಗಿತ್ತು. ಅವುಗಳಲ್ಲಿ ಒಂದು 2013 ರಲ್ಲಿ $2,300 ಗಳಿಸಿತು. ಅದೇ ರೀತಿ, ಕಿಂಗ್ ಚಾರ್ಲ್ಸ್ ಮತ್ತು ಪ್ರಿನ್ಸೆಸ್ ಡಯಾನಾ ಅವರ ವಿವಾಹದಲ್ಲಿ ಬಡಿಸಿದ ಕೇಕ್‌ನ ಭಾಗವು 2021 ರಲ್ಲಿ ಹರಾಜಿನಲ್ಲಿ $2,565 ಕ್ಕೆ ಮಾರಾಟವಾಯಿತು.

ಬೆಂಗಳೂರಿಗೆ ಬೊಂಬಾಟ್‌ ನ್ಯೂಸ್‌, ಬ್ಯಾಟರಿ ಸೆಲ್‌ ಉತ್ಪಾದನೆಗೆ ಇಳಿದ MGL, ರಾಜಧಾನಿಯಲ್ಲಿ ಗಿಗಾ ಫ್ಯಾಕ್ಟರಿ ನಿರ್ಮಾಣ

click me!