ಬ್ರಿಟನ್‌ ರಾಣಿಗೀಗ ವಿಶ್ವದ 2ನೇ ಸುದೀರ್ಘ ಆಳ್ವಿಕೆ ನಡೆಸಿದ ಹಿರಿಮೆ!

By Suvarna News  |  First Published Jun 13, 2022, 8:07 AM IST

* ಥಾಯ್ಲೆಂಡ್‌ ರಾಜನ ದಾಖಲೆ ಮೀರಿಸಿದ 2ನೇ ಎಲಿಜಬೆತ್‌

* ಬ್ರಿಟನ್‌ ರಾಣಿಗೀಗ ವಿಶ್ವದ 2ನೇ ಸುದೀರ್ಘ ಆಳ್ವಿಕೆ ನಡೆಸಿದ ಹಿರಿಮೆ


ಲಂಡನ್‌(ಜೂ.13): ಬ್ರಿಟನ್‌ನ ಹಾಲಿ ರಾಣಿ 2ನೇ ಎಲಿಜಬೆತ್‌ (96), ವಿಶ್ವದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಎರಡನೇ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಇದುವರೆಗೂ 2ನೇ ಸ್ಥಾನದಲ್ಲಿದ್ದ ಥಾಯ್ಲೆಂಡ್‌ನ ರಾಜ ಭೂಮಿಬೋಲ್‌ ಅದ್ಯುಲ್‌ದೇಜ್‌ ಅವರನ್ನು 3ನೇ ಸ್ಥಾನಕ್ಕೆ ತಳ್ಳಿದ್ದಾರೆ.

1953ರಲ್ಲಿ ಪಟ್ಟಾಭಿಷೇಕವಾಗಿ ಅಧಿಕಾರದ ಗದ್ದುಗೆಯೇರಿದ ರಾಣಿ 2ನೇ ಎಲಿಜಬೆತ್‌ 2015ರಲ್ಲಿಯೇ ರಾಣಿ ವಿಕ್ಟೋರಿಯಾ ಆಳ್ವಿಕೆಯ ಅವಧಿಯನ್ನು ಮೀರಿಸಿ, ಅತಿ ಹೆಚ್ಚು ಅವಧಿ ಬ್ರಿಟನ್‌ ಅನ್ನು ಆಳಿದ ರಾಣಿ ಎನಿಸಿಕೊಂಡಿದ್ದರು. ರಾಣಿ ಅಧಿಕರಕ್ಕೇರಿ 70 ವರ್ಷಗಳಾದ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಪ್ಲಾಟಿನಂ ಜ್ಯುಬಿಲಿ ಕಾರ್ಯವನ್ನು ಆಯೋಜಿಸಲಾಗಿದೆ.

Tap to resize

Latest Videos

ಥೈಲೆಂಡಿನ ರಾಜ ಭೂಮಿಬೋಲ್‌ ಅದುಲ್ಯದೇಜ್‌ ಅವರ ದಾಖಲೆಯನ್ನು ಮೀರಿಸಿ ರಾಣಿ ಎಲಿಜಬೆತ್‌ 2ನೇ ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ರಾಣಿಯೆನಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಫ್ರಾನ್ಸ್‌ನ ದೊರೆ 14 ನೇ ಲೂಯಿಸ್‌ ವಿಶ್ವದಲ್ಲೇ ಅತಿ ದೀರ್ಘಾವಧಿ ಆಳ್ವಿಕೆ ನಡೆಸಿದ ರಾಜ ಎನಿಸಿಕೊಂಡಿದ್ದಾರೆ. 1643ರಲ್ಲಿ ಅಧಿಕಾರಕ್ಕೇರಿದ ಇವರು 1751ರವರೆಗೆ ಸುಮಾರು 72 ವರ್ಷ ಹಾಗೂ 110 ದಿನಗಳ ಕಾಲ ಆಳ್ವಿಕೆ ನಡೆಸಿದ್ದರು. 1927 ರಿಂದ 2016ರವರೆಗೆ ಸುಮಾರು 70 ವರ್ಷ, 126 ದಿನಗಳ ಕಾಲ ಆಳ್ವಿಕೆ ನಡೆಸಿದ ಥಾಯ್ಲೆಂಡಿನ ದೊರೆ ಅದ್ಯುಲ್‌ದೇಜ್‌ ಇದೀಗ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

click me!