ಪಾಕಿಸ್ತಾನದಲ್ಲಿ ಟೀ ಪುಡಿ ಬೆಲೆ ಕೆಜಿಗೆ 1600 ರುಪಾಯಿ

By Kannadaprabha News  |  First Published Feb 13, 2023, 7:28 AM IST

ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಪರ್ವ ಮುಂದುವರೆದಿದ್ದು, ಇದೀಗ 1 ಕೆಜಿ ಚಹಾಪುಡಿ (ಬಿಡಿ ಮಾರಾಟ) ಬೆಲೆ 1600 ರು.ಗೆ ಏರಿದೆ. ಕೇವಲ 15 ದಿನಗಳ ಹಿಂದೆ ಕೇಜಿಗೆ 1100 ರು.ನಷ್ಟಿದ್ದ ದರ ಇದೀಗ 1600 ರು. ದಾಟಿದೆ.


ಕರಾಚಿ: ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಪರ್ವ ಮುಂದುವರೆದಿದ್ದು, ಇದೀಗ 1 ಕೆಜಿ ಚಹಾಪುಡಿ (ಬಿಡಿ ಮಾರಾಟ) ಬೆಲೆ 1600 ರು.ಗೆ ಏರಿದೆ. ಕೇವಲ 15 ದಿನಗಳ ಹಿಂದೆ ಕೇಜಿಗೆ 1100 ರು.ನಷ್ಟಿದ್ದ ದರ ಇದೀಗ 1600 ರು. ದಾಟಿದೆ. ಕಳೆದ ಡಿಸೆಂಬರ್‌ನಿಂದಲೂ ಬಂದರಿನಲ್ಲೇ ಉಳಿದುಕೊಂಡಿರುವ ಆಮದಾದ ಚಹಾಪುಡಿ ಶೀಘ್ರವೇ ಮಾರುಕಟ್ಟೆಗೆ ಬರದೇ ಇದ್ದರೆ ರಮ್ಜಾನ್‌ ವೇಳೆಗೆ ಬೆಲೆ 2500 ರು. ದಾಟಬಹುದು ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ವಿದೇಶಿ ವಿನಿಮಯ ಸಂಗ್ರಹ (Foreign exchange collection) ಖಾಲಿಯಾಗಿರುವ ಕಾರಣ ತೀರಾ ಅಗತ್ಯವಾದ ವಸ್ತುಗಳನ್ನು ಮಾತ್ರವೇ ಪಾಕ್‌ ಸರ್ಕಾರ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಚಹಾ ಆಮದಿಗೂ (Tea Powder) ಅದರ ಬಿಸಿ ತಟ್ಟಿದೆ. ಮತ್ತೊಂದೆಡೆ ಈಗಾಗಲೇ ವಿದೇಶದಿಂದ ಆಮದು ಮಾಡಿಕೊಂಡು ಬಂದರಿನಲ್ಲಿ (Fort) ಇರುವ ಚಹಾ ಖರೀದಿಯೂ ವ್ಯಾಪಾರಸ್ಥರಿಗೆ ದೊಡ್ಡ ಸಮಸ್ಯೆಯಾಗಿ ಕುಳಿತಿದೆ. ಏಕೆಂದರೆ ಚಹಾ ಖರೀದಿಗೆ ನೀಡಬೇಕಾದ ಹಣವನ್ನು ಮುಂದಿನ 180 ದಿನಗಳ ನಂತರದ ಡಾಲರ್‌ ಲೆಕ್ಕಾಚಾರದಲ್ಲಿ ನೀಡಬೇಕಾಗುತ್ತದೆ. 6 ತಿಂಗಳ ಬಳಿಕ ಡಾಲರ್‌ ಎದುರು ಪಾಕಿಸ್ತಾನದ (Pakistan) ರುಪಾಯಿ ಮೌಲ್ಯ ಇನ್ನಷ್ಟುಕುಸಿದಿರಬಹುದು ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಬಂದರಿಗೆ ಬಂದಿರುವ ಚಹಾಪುಡಿ ಖರೀದಿಗೂ ಯಾರೂ ಮುಂದಾಗದ ಕಾರಣ ದೇಶದಲ್ಲಿ ಚಹಾಪುಡಿ ಕೊರತೆ ಎದುರಾಗಿದೆ ಎಂದು ವರ್ತಕರು (Traders) ಹೇಳಿದ್ದಾರೆ.

Tap to resize

Latest Videos

ಹದಗೆಟ್ಟಿರುವ ಪಾಕಿಸ್ತಾನದ ಆರ್ಥಿಕತೆ..! ಮುಳುಗುತ್ತಿರುವ ದೇಶವನ್ನು ರಕ್ಷಿಸಬೇಕಾ ಭಾರತ..?

ಕಳೆದ ತಿಂಗಳು ಪಾಕಿಸ್ತಾನದಲ್ಲಿ ಗೋಧಿಹಿಟ್ಟಿನ ಬೆಲೆ ಕೆಜಿಗೆ 500 ರು.ನಿಂದ 1000 ರು.ವರೆಗೂ ತಲುಪಿತ್ತು. ಮತ್ತೊಂದೆಡೆ ಚಿಕನ್‌ ದರ ಕೇವಲ ಒಂದು ತಿಂಗಳಲ್ಲಿ 300 ರು.ನಷ್ಟು ಏರಿಕೆಯಾಗಿ ಕೆಜಿಗೆ 700 ರು.ಗೆ ತಲುಪಿದೆ.

83 ಭಾರತೀಯ ರಕ್ಷಣಾ ಸಿಬ್ಬಂದಿ ಪಾಕ್‌ ವಶದಲ್ಲಿ

click me!