ಜಗತ್ತಿನಾದ್ಯಂತ ನಾನಾ ಕ್ಷೇತ್ರಗಳಲ್ಲಿ ದಿನನಿತ್ಯ ಬಳಕೆಯಾಗುವ ಜನಪ್ರಿಯ ಸಾಫ್ಟ್‌ವೇರ್ ‘ಪವರ್ ಪಾಯಿಂಟ್’ ಜನಕರಲ್ಲಿ ಒಬ್ಬರಾದ ಡೆನ್ನಿಸ್ ಆಸ್ಟಿನ್ (76) ನಿಧನ ಹೊಂದಿದ್ದಾರೆ.
ಕ್ಯಾಲಿಫೋರ್ನಿಯಾ: ಜಗತ್ತಿನಾದ್ಯಂತ ನಾನಾ ಕ್ಷೇತ್ರಗಳಲ್ಲಿ ದಿನನಿತ್ಯ ಬಳಕೆಯಾಗುವ ಜನಪ್ರಿಯ ಸಾಫ್ಟ್‌ವೇರ್ ‘ಪವರ್ ಪಾಯಿಂಟ್’ ಜನಕರಲ್ಲಿ ಒಬ್ಬರಾದ ಡೆನ್ನಿಸ್ ಆಸ್ಟಿನ್ (76) ನಿಧನ ಹೊಂದಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕ್ಯಾಲಿಫೋರ್ನಿಯಾದಲ್ಲಿರುವ ಮನೆಯಲ್ಲಿ ಸೆ.1ರಂದೇ ಇಹಲೋಕ ತ್ಯಜಿಸಿರುವುದನ್ನು ಅವರ ಪುತ್ರ ಅಮೆರಿಕದ ಮಾಧ್ಯಮಗಳಿಗೆ ತಡವಾಗಿ ತಿಳಿಸಿದ್ದಾರೆ.
ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಓದಿದ ಡೆನ್ನಿಸ್ ಆಸ್ಟಿನ್(Dennis Austin) ‘ಫೋರ್‌ಥಾಟ್’ (Forthought)ಎಂಬ ಸಾಫ್ಟ್‌ವೇರ್ ಕಂಪನಿ ಸೇರಿ ಪವರ್ ಪಾಯಿಂಟ್ ಸಾಫ್ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದರು. 1987ರಲ್ಲಿ ಅದು ಬಿಡುಗಡೆಯಾಗಿತ್ತು. ನಂತರ ಅದನ್ನು ಮೈಕ್ರೋಸಾಫ್ಟ್ (Microsoft) ಕಂಪನಿ ಅದನ್ನು ಖರೀದಿ ಮಾಡಿತ್ತು. 1985ರಿಂದ 1996ರ ವರೆಗೆ ಪವರ್ ಪಾಯಿಂಟ್‌ನ ಉಸ್ತುವಾರಿಯನ್ನು ಆಸ್ಟಿನ್ ನೋಡಿಕೊಳ್ಳುತ್ತಿದ್ದರು.
undefined
ನಂತರ 1993ರಲ್ಲಿ ಮೈಕ್ರೋಸಾಫ್ಟ್ ಕಂಪನಿಯು ಪವರ್ ಪಾಯಿಂಟ್ (Power Point) ಅನ್ನು ತನ್ನ ‘ಆಫೀಸ್’ ತಂತ್ರಾಂಶದಲ್ಲೇ ಸೇರ್ಪಡೆಗೊಳಿಸಿತ್ತು. ಈ ಸಾಫ್ಟ್‌ವೇರ್ ಮೈಕ್ರೋಸಾಫ್ಟ್ ಕಂಪನಿಗೆ ಕೋಟ್ಯಂತರ ರು. ಆದಾಯ ತಂದು ಕೊಟ್ಟಿದೆ. ಅಲ್ಲದೆ ಜಗತ್ತಿನೆಲ್ಲೆಡೆ ಕಾರ್ಪೊರೇಟ್ ಕಂಪನಿಗಳಿಂದ ಹಿಡಿದು ನಾನಾ ಕ್ಷೇತ್ರಗಳಲ್ಲಿ ಮಾಹಿತಿಯ ಹಂಚಿಕೆಗೆ ಪ್ರಧಾನವಾಗಿ ಬಳಕೆಯಾಗುತ್ತಿದೆ.
ಮಳೆಯಿಂದ ಜಿ20 ಸಭಾಸ್ಥಳ ಮುಳುಗಿಲ್ಲ: ಕಾಂಗ್ರೆಸ್ ಆರೋಪ ಸುಳ್ಳು
ಮೊರಾಕ್ಕೊ ಭೂಕಂಪ: ಸಾವಿನ ಸಂಖ್ಯೆ 2 ಸಾವಿರಕ್ಕೇರಿಕೆ
ಮ್ಯಾರಕೇಶ್: ಅಟ್ಲಾಂಟಿಕ್ ಸಮುದ್ರ ತೀರದಲ್ಲಿರುವ (Atlantic coast) ಮೊರಾಕ್ಕೊ ದೇಶದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಶಕ್ತಿಶಾಲಿ ಭೂಕಂಪದಲ್ಲಿ (Morocco earthquake) ಸಾವಿಗೀಡಾದವರ ಸಂಖ್ಯೆ 2 ಸಾವಿರವನ್ನು ಮೀರಿದೆ. ಹಲವು ಹಳ್ಳಿಗಳು ನಾಮಾವಶೇಷವಾಗಿವೆ. ಮೊರಾಕ್ಕೊದಲ್ಲಿ ಸಂಭವಿಸಿದ 6.8 ರಿಕ್ಟರ್ ತೀವ್ರತೆಯ ಭೂಕಂಪದಿಂದಾಗಿ 2,012 ಮಂದಿ ಸಾವಿಗೀಡಾಗಿದ್ದು, 2,059 ಮಂದಿ ಗಾಯಗೊಂಡಿದ್ದಾರೆ. ಶಕ್ತಿಶಾಲಿ ಭೂಕಂಪದಿಂದಾಗಿ ಐತಿಹಾಸಿಕ ನಗರ ಮ್ಯಾರಕೇಶ್‌ವರೆಗೆ ಇರುವ ಅನೇಕ ಹಳ್ಳಿಗಳು ಸಂಪೂರ್ಣವಾಗಿ ನಾಶವಾಗಿವೆ. ತುರ್ತು ಸೇವಾ ತಂಡಗಳು ಕಾರಾರಯಚರಣೆ ನಡೆಸುತ್ತಿದ್ದು, ಇನ್ನೂ ಹಲವು ಮಂದಿ ಭೂಕುಸಿತದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಭೂಕಂಪದ ಕೇಂದ್ರ ಸ್ಥಾನ ಇರುವ ಅಲ್ ಹೌಜ್ ಪ್ರಾಂತ್ಯದಲ್ಲಿ 1,293 ಮಂದಿ ಸಾವಿಗೀಡಾಗಿದ್ದಾರೆ.
ಮೋರಾಕ್ಕೊ 3 ದಿನಗಳ ಕಾಲ ರಾಷ್ಟ್ರೀಯ ಶೋಕವನ್ನು (national mourning) ಘೋಷಣೆ ಮಾಡಿದೆ. ಫ್ರಾನ್ಸ್, ಇಸ್ರೇಲ್, ಇಟಲಿ, ಸ್ಪೇನ್ ಮತ್ತು ಅಮೆರಿಕ ದೇಶಗಳು ಸಹಾಯಕ್ಕೆ ಮುಂದಾಗಿವೆ. ಸ್ಪೇನ್ ಹಾಗೂ ಅಮೆರಿಕ ದೇಶಗಳು ರಕ್ಷಣಾ ಸಿಬ್ಬಂದಿಯನ್ನು ರವಾನಿಸಿವೆ. ಇದೇ ವೇಳೆ ಮೊರಾಕ್ಕೊಗೆ ಅಗತ್ಯ ಸಹಾಯವನ್ನು ಒದಗಿಸಲು ಅಮೆರಿಕ ಸಿದ್ಧವಾಗಿರುವುದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಫೈನರ್ (John Finer) ಹೇಳಿದ್ದಾರೆ.
ಜಿ20 ಶೃಂಗಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕೆ, ಅದೇ ಪಕ್ಷದ ಶಶಿ ತರೂರ್ ಪ್ರಶಂಸೆ
ಭಾರತ ಇಷ್ಟವಿಲ್ಲದವರು ದೇಶ ಬಿಡಿ: ಬಿಜೆಪಿ ನಾಯಕ ಘೋಷ್
ದೇಶದಲ್ಲಿ ಭಾರತ ಹಾಗೂ ಇಂಡಿಯಾ ಎಂಬ ದೇಶದ ಹೆಸರಿನ ಬಗ್ಗೆ ವಾದ ಪ್ರತಿವಾದಗಳು ನಡೆಯುತ್ತಿರುವ ಹೊತ್ತಿನಲ್ಲೇ ಪಶ್ಚಿಮ ಬಂಗಾಳ ಬಿಜೆಪಿ ನಾಯಕರೊಬ್ಬರು ಇಷ್ಟವಿಲ್ಲದವರು ದೇಶ ಬಿಟ್ಟು ಹೋಗಬಹುದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮೇದಿನಿಪುರ ಸಂಸದ ದಿಲೀಪ್ ಘೋಷ್, ಇಂಡಿಯಾ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡಲಾಗುವುದು. ರಾಜ್ಯದಲ್ಲಿ ನಾವು (ಬಿಜೆಪಿ) ಅಧಿಕಾರಕ್ಕೆ ಬಂದ ಮೇಲೆ ಎಲ್ಲ ವಿದೇಶಿಗರ ಪ್ರತಿಮೆಗಳನ್ನು ತೆರವು ಮಾಡಲಿದ್ದೇವೆ. ಇದನ್ನು ಇಷ್ಟಪಡದವರು ದೇಶ ಬಿಡಬಹುದು ಎಂದು ಹೇಳಿದರು.
ಮತ್ತೋರ್ವ ಬಿಜೆಪಿ ಮುಖಂಡ ಮಾತನಾಡಿ,‘ಒಂದು ದೇಶಕ್ಕೆ ಎರಡು ಹೆಸರು ಇರಲು ಸಾಧ್ಯವಿಲ್ಲ. ಹಾಗಾಗಿ ಜಿ20 ಸಭೆ ನಿಮಿತ್ತ ಭಾರತಕ್ಕೆ ಬಂದಿರುವ ವಿದೇಶಿ ನಾಯಕರ ಸಮ್ಮುಖದಲ್ಲಿ ಬದಲಾಯಿಸಲು ಇದು ಸೂಕ್ತ ಸಮಯ’ ಎಂದರು. ಇದಕ್ಕೆ ಟಿಎಂಸಿ ಪ್ರತಿಕ್ರಿಯಿಸಿ,‘ಬಿಜೆಪಿ ‘ಇಂಡಿಯಾ’ ಕೂಟಕ್ಕೆ ಹೆದರಿ ಈ ರೀತಿ ಗೊಂದಲ ಸೃಷಿಸುತ್ತಿದೆ’ ಎಂದು ತಿರುಗೇಟು ನೀಡಿದೆ.