ಮೋದಿ ಇಟಲಿ, ಬ್ರಿಟನ್ ಯಾತ್ರೆ : ಜಿ-20 ಶೃಂಗದಲ್ಲಿ ಭಾಗಿ

By Kannadaprabha NewsFirst Published Oct 30, 2021, 9:39 AM IST
Highlights
  • ಇಟಲಿ ರಾಜಧಾನಿ ರೋಮ್‌ನಲ್ಲಿ ಅ.30 ಹಾಗೂ 31ರಂದು ನಿಗದಿಯಾಗಿರುವ 16ನೇ ಜಿ-20 ಶೃಂಗ
  • ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಲ್ಲಿಗೆ ಬಂದಿಳಿದಿದ್ದಾರೆ.

ರೋಮ್‌ (ಅ.30): ಇಟಲಿ (Italy) ರಾಜಧಾನಿ ರೋಮ್‌ನಲ್ಲಿ (Roam) ಅ.30 ಹಾಗೂ 31ರಂದು ನಿಗದಿಯಾಗಿರುವ 16ನೇ ಜಿ-20 ಶೃಂಗದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಶುಕ್ರವಾರ ಇಲ್ಲಿಗೆ ಬಂದಿಳಿದಿದ್ದಾರೆ.

ಈ ವೇಳೆ ರೋಮ್‌ ನಗರದ ಪಿಯಾಜಾ ಗಾಂಧಿ (Piyaza Gandhi) ಎಂಬಲ್ಲಿಗೆ ಭೇಟಿ ನೀಡಿದ ಮೋದಿ ಅವರು ಮಹಾತ್ಮ ಗಾಂಧೀಜಿ (Mahathma Gandhiji) ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಮೋದಿ ಅವರು ಆಗಮಿಸುತ್ತಿದ್ದಂತೆ ಇಲ್ಲಿ ನೆರೆದಿದ್ದ ಭಾರತೀಯ (Indians) ಸಂಜಾತರು, ಸಂಸ್ಕೃತ ಶ್ಲೋಕಗಳು ಮತ್ತು ‘ಮೋದಿ ಮೋದಿ’ ಎಂಬ ಉದ್ಘೋಷಗಳೊಂದಿಗೆ ಅವರನ್ನು ಸ್ವಾಗತ ಮಾಡಿಕೊಂಡರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಗೆ ನಮನ ಸಲ್ಲಿಸಿದ ಬಳಿಕ, ಭಾರತೀಯರ ಜತೆ ಕೆಲ ಹೊತ್ತು ಸಮಾಲೋಚನೆ ನಡೆಸಿದರು.

ಒಂದು ಕಡತ ನಾಲ್ಕಕ್ಕಿಂತ ಹೆಚ್ಚು ಕೈಗೆ ಹೋಗುವಂತಿಲ್ಲ: ನವೆಂಬರ್‌ನಿಂದ ಹೊಸ ಯೋಜನೆ!

ಯುರೋಪ್‌ ಒಕ್ಕೂಟದ ಜತೆ ಚರ್ಚೆ:

ರೋಮ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಯೂರೋಪ್‌ (UROP) ಒಕ್ಕೂಟದ ರಾಷ್ಟ್ರಗಳ ನಾಯಕರ ಜತೆ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ವಾಣಿಜ್ಯ ವ್ಯವಹಾರ, ಕಾಮರ್ಸ್‌, ಸಂಸ್ಕೃತಿ ಮತ್ತು ಪರಿಸರ ವಲಯಗಳಿಗೆ ಸಂಬಂಧಿಸಿ ಭಾರತ - ಯೂರೋಪ್‌ ರಾಷ್ಟ್ರಗಳ ಸ್ನೇಹಪರತೆ ಕುರಿತಾಗಿ ಚರ್ಚಿಸಲಾಗಿದೆ

ಇಂದು ಪೋಪ್‌ ಭೇಟಿ, ಜಿ-20 ಶೃಂಗದಲ್ಲಿ ಭಾಗಿ:

ಶನಿವಾರ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿನ್‌ರನ್ನು ಮೋದಿ ಭೇಟಿ ಮಾಡಲಿದ್ದಾರೆ.

ಬಳಿಕ 16ನೇ ಜಿ-20 ಶೃಂಗಸಭೆಯಲ್ಲಿ (G 20) ಪ್ರಧಾನಿ ಮೋದಿ ಅವರು, ಇತರ ರಾಷ್ಟ್ರಗಳ ನಾಯಕರ ಜತೆ ಜಾಗತಿಕ ಆರ್ಥಿಕತೆ, ಕೋವಿಡ್‌ನಿಂದ ಆರೋಗ್ಯ ಸುಧಾರಣೆ, ಸುಸ್ತಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಕುರಿತಾಗಿ ಚರ್ಚೆ ನಡೆಸಲಿದ್ದಾರೆ.

ನ.1-2ರಂದು ಬ್ರಿಟನ್‌ಗೆ:  ಬ್ರಿಟನ್‌ (Britain) ಪ್ರಧಾನಿ ಬೋರಿಸ್‌ ಜಾನ್ಸನ್‌ (Boris Jonson) ಆಹ್ವಾನದ ಹಿನ್ನೆಲೆಯಲ್ಲಿ ಜಿ-20 ಶೃಂಗದ ಬಳಿಕ ಮೋದಿ ಅವರು ನ.1-2ಕ್ಕೆ ಬ್ರಿಟನ್‌ನ ಗ್ಲಾಸ್ಗೋ ನಗರಕ್ಕೆ ತೆರಳಲಿದ್ದಾರೆ.

ಗುರುವಾರ ಭಾರತದಿಂದ ರೋಮ್‌ ಪ್ರವಾಸ ಕೈಗೊಂಡಿದ್ದ ಮೋದಿ ಅವರು, ಅ.29ರಿಂದ 31ರವರೆಗಿನ ತಮ್ಮ ಈ ಪ್ರವಾಸದ ವೇಳೆ ಇಟಲಿ ಪ್ರಧಾನಿ ಮಾರಿಯೋ ದ್ರಾಘಿ ಅವರ ಕೋರಿಕೆ ಮೇರೆಗೆ ರೋಮ್‌ ಮತ್ತು ವ್ಯಾಟಿಕನ್‌ ಸಿಟಿಗೆ (Vatican City) ಭೇಟಿ ನೀಡಲಿದ್ದೇನೆ. ಆ ಬಳಿಕ ನ.1-2ರಂದು ಬ್ರಿಟನ್‌ನ ಗ್ಲಾಸ್ಗೋದಲ್ಲಿ ಬ್ರಿಟಿಷ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರನ್ನು ಭೇಟಿ ಮಾಡುವುದಾಗಿ ಹೇಳಿದ್ದರು.

ಪ್ರಧಾನಿ ಮೋದಿ ಕನಸಿನ ಬಗ್ಗೆ ಸುಳಿವಿತ್ತ ಡ್ರೋನ್‌ ಕಂಪನಿ; ಏನಿದು? ಇಲ್ಲಿದೆ ವಿವರ

ಇಟಲಿಯಲ್ಲಿ ಜಿ-20 ಶೃಂಗದಲ್ಲಿ ಭಾಗವಹಿಸುವುದಷ್ಟೇ ಅಲ್ಲದೆ ಭಾರತದ ಜತೆಗಿನ ಪಾಲುದಾರಿಕೆ ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಲಾಗುತ್ತದೆ. ಅವರ ಜತೆಗಿನ ಭಾರತದ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಮೋದಿ ಅವರು ಹೇಳಿದ್ದರು.

ಅದ್ದೂರಿ ಸ್ವಾಗತ

 ಇಟಲಿಯ ರೋಮ್ ನಗರಕ್ಕೆ ಆಗಮಿಸಿ ಎರಡು ಪ್ರಮುಖ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳಲ್ಲಿದ್ದಾರೆ. ರೋಮ್ ನಗರಕ್ಕೆ ಬಂದಿಳಿಯುತ್ತಿದ್ದಂತ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. 

ಮೋದಿಯನ್ನು ಸ್ವಾಗಸಿಲು ನೆರೆದಿದ್ದ ಜನರತ್ತ ತೆರಳಿದ ಪ್ರಧಾನಿ ಮೋದಿ, ಕೈಕುಲುಕಿ ತಮ್ಮ ಸಂತಸ ವ್ಯಕ್ತಪಡಿಸಿದರು. ಮೋದಿ ತಮ್ಮ ಬಳಿ ಆಗಮಿಸುತ್ತಿದ್ದಂತೆ ನೆರೆದಿದ್ದವರ ಸಂತಸ ಡಬಲ್ ಆಗಿದೆ. ಮಕ್ಕಳ ಜೊತೆ ಮೋದಿ ಮಕ್ಕಳಾಗಿದ್ದರು. ಇತ್ತ ಮೋದಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ನೆರೆದಿದ್ದ ಜನ ಸಂಭ್ರಮಿಸಿದರು.

 

ಮೋದಿ ಸ್ವಾಗತಕ್ಕಾಗಿ ತ್ರಿವರ್ಣ ಧ್ವಜ, ಮೋದಿ ಪ್ಲೇಕಾರ್ಡ್, ಬ್ಯಾನರ್ ಹಿಡಿದು ಭಾರತೀಯ ನಿವಾಸಿಗಳು ಕಾದಿದ್ದಾರೆ. ಮೋದಿ ಆಗಮಿಸುತ್ತಿದ್ದಂತೆ ಘೋಷಣೆಗಳು ಮೊಳಗಿದೆ. ಕೆಲ ಹೊತ್ತು ಅವರೊಂದಿಗೆ ಕಳೆದ ಮೋದಿ, ಎಲ್ಲರತ್ತ ಕೈಬಿಸಿ ಮುಂದೆ ಸಾಗಿದ್ದಾರೆ. ಮೋದಿಗೆ ಸಿಕ್ಕ ಅದ್ಧೂರಿ ಸ್ವಾಗತ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪುಟ್ಟ ಮಕ್ಕಳು ಕೂಜ ಮೋದಿಗೆ ಸ್ವಾಗತ ಕೋರಲು ನೆರೆದಿದ್ದರು. ಪ್ರಧಾನಿಯಾಗಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಇಟಲಿ ಪ್ರವಾಸ ಕೈಗೊಂಡಿದ್ದಾರೆ. ಇಷ್ಟೇ ಅಲ್ಲ 12 ವರ್ಷಗಳ ಬಳಿಕ ಭಾರತದ ಪ್ರಧಾನಿ ಇಟೆಲಿಗೆ ಭೇಟಿ ನೀಡುತ್ತಿದ್ದಾರೆ. ಯುಪಿಎ ಮೊದಲ ಅವಧಿಯಲ್ಲಿ ಪ್ರಧಾನಿ ಮನ್‌ಮೋಹನ್ ಸಿಂಗ್ ಇಟಲಿಗೆ ಭೇಟಿ ನೀಡಿದ್ದರು.

ಇಟಲಿ ಪ್ರಧಾನಿ ಮಾರಿಯಾ ಡ್ರಾಗಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇನ್ನು ಜಿ20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಮೋದಿ ಕೋವಿಡ್‌ನಿಂದ ಆರೋಗ್ಯ ಚೇತರಿಕೆ, ಜಾಗತಿಕ ಆರ್ಥಿಕತೆ ಕುರಿತು ಮಾತನಾಡಲಿದ್ದಾರೆ. ಇನ್ನು ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮಾವೇಶದಲ್ಲೂ ಮೋದಿ ಭಾಗವಹಿಸಲಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುುಯೆಲ್ ಮ್ಯಾಕ್ರೆನ್, ಇಂಡೋನೇಷಿಯಾ ಅಧ್ಯಕ್ಷ ಜೋಕೋ ವಿಡೋಡೋ, ಸಿಂಗಾಪುರ ಪ್ರಧಾನಿ ಲಿ ಸಿಯೆನ್ ಲೂಂಗ್ ಜೊತೆ ಮೋದಿ ಮಾತುಕತೆ ನಡೆಸಲಿದ್ದಾರೆ. ಇನ್ನು ಜಿ20 ನಾಯಕ ಜೊತೆ ರಾತ್ರಿ ಔತಣಕೂಟದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.ಇಟಲಿ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಯುಕೆ ಪ್ರವಾಸ ಕೈಗೊಳ್ಳಲಿದ್ದಾರೆ. 

click me!