
ಲಂಡನ್(ಜು.28): ಆಸ್ಟ್ರಾಜೆನೆಕಾ ಮತ್ತು ಫೈಝರ್‌ನ ಎರಡೂ ಡೋಸ್ ಪಡೆದ 6 ವಾರಗಳ ಬಳಿಕ ದೇಹದಲ್ಲಿ ಒಟ್ಟಾರೆ ಪ್ರತಿಕಾಯಗಳ ಪ್ರಮಾಣದಲ್ಲಿ ಇಳಿಕೆಯಾಗಲು ಆರಂಭಿಸಿ, 10 ವಾರಗಳ ಅವಧಿಯಲ್ಲಿ ಒಟ್ಟಾರೆ ಪ್ರಮಾಣದಲ್ಲಿ ಶೇ.50ರಷ್ಟುಕುಸಿತ ಕಾಣುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ.
ಸೋಂಕಿನಿಂದ ರಕ್ಷಣೆ ನೀಡುವ ಪ್ರತಿಕಾಯಗಳು ಈ ವೇಗದಲ್ಲಿ ಇಳಿಕೆಯಾದರೆ, ಸೋಂಕಿನಿಂದ ರಕ್ಷಣೆ ನೀಡುವ ಪ್ರಮಾಣ ಕೂಡಾ ಇಳಿಕೆಯಾಗುವ ಆತಂಕ ವ್ಯಕ್ತವಾಗಿದೆ ಎಂದು ಯುನಿವರ್ಸಿಟಿ ಕಾಲೇಜು ಆಫ್ ಲಂಡನ್‌ನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಈ ಕುರಿತ ವರದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ವರದಿಯಲ್ಲೇನಿದೆ?:
- 18 ವರ್ಷ ಮೇಲ್ಪಟ್ಟವಯೋಮಾನದ ಪುರುಷರು, ಮಹಿಳೆಯರು, ನಾನಾ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 600 ಜನರ ಮೇಲೆ ನಡೆಸಿದ ಸಂಶೋಧನೆ ಇದು.
- ಆಸ್ಟ್ರಾಜೆನೆÜಕಾ ಮತ್ತು ಫೈಝರ್ ಲಸಿಕೆ ಪಡೆದ ಆರಂಭದಲ್ಲಿ, ಲಸಿಕೆ ಪಡೆದವರ ದೇಹದಲ್ಲಿ ಪ್ರತಿಕಾಯಗಳ ಪ್ರಮಾಣ ಅತ್ಯಂತ ಹೆಚ್ಚೇ ಕಂಡುಬಂದಿದೆ. ಈ ಅಂಶವೇ ಸೋಂಕಿನ ವಿರುದ್ಧ ಲಸಿಕೆಗಳು ಅತ್ಯಂತ ಪರಿಣಾಮ ಎಂದು ಸಾಬೀತಾಗಲು ಕಾರಣವಾಗಿದೆ.
- ಆದರೆ 2-3 ತಿಂಗಳಲ್ಲಿ ಪ್ರತಿಕಾಯಗಳ ಪ್ರಮಾಣ ಇಳಿಕೆಯಾಗಿರುವುದು ಕಂಡುಬಂದಿದೆ.
- ಫೈಝರ್ ಲಸಿಕೆ ಪಡೆದವರಲ್ಲಿ 21-41 ದಿನಗಳ ಅವಧಿಯಲ್ಲಿ ಸರಾಸರಿ ಪ್ರತಿ ಮಿ.ಲೀಗೆ 7506 ಯುನಿಟ್ ಪ್ರತಿಕಾಯ ಕಂಡುಬಂದಿದ್ದರೆ, 70 ಮತ್ತು ಅದಕ್ಕಿಂತ ಹೆಚ್ಚಿನ ದಿನಗಳಲ್ಲಿ ಪ್ರಮಾಣವು 3320ಕ್ಕೆ ಕುಸಿತವಾಗಿದ್ದು ಕಂಡುಬಂದಿದೆ.
- ಆಸ್ಟ್ರಾಜೆನೆಕಾ ಲಸಿಕೆ ಪಡೆದವರಲ್ಲಿ 0-20 ದಿನಗಳಲ್ಲಿ ಸರಾಸರಿ ಪ್ರತಿ ಮಿ.ಲೀ.ಗೆ 1201 ಯುನಿಟ್ ಪ್ರತಿಕಾಯ ಕಂಡುಬಂದಿದ್ದರೆ, 70 ಮತ್ತು ಅದಕ್ಕಿಂತ ಹೆಚ್ಚಿನ ದಿನಗಳಲ್ಲಿ 190 ಯುನಿಟ್ ಮಾತ್ರ ಕಂಡುಬಂದಿದೆ. ಅಂದರೆ 5 ಪಟ್ಟು ಕುಸಿತ ದಾಖಲಾಗಿದೆ.
- ಹೀಗಾಗಿ 70 ವರ್ಷ ಮೇಲ್ಪಟ್ಟವರು, ಆರೈಕೆ ಕೇಂದ್ರಗಳಲ್ಲಿ ಇರುವವರಿಗೆ ಆದ್ಯತೆ ಮೇಲೆ ಬೂಸ್ಟರ್ ನೀಡಬೇಕಾದ ಅಗತ್ಯವಿದೆ.
- ಆದರೂ, ಒಬ್ಬೊಬ್ಬರಲ್ಲಿ ರೋಗನಿರೋಧಕ ಶಕ್ತಿ ಒಂದೊಂದು ರೀತಿಯಲ್ಲಿ ಇರುವ ಕಾರಣ, ಪ್ರತಿಕಾಯಗಳ ಶಕ್ತಿ ಕಡಿಮೆ ಇದ್ದರೂ, ಕೆಲವರಲ್ಲಿ ಇರುವ ಪ್ರತಿಕಾಯಗಳ ಶಕ್ತಿ ಹೆಚ್ಚಿರಬಹುದು ಮತ್ತು ಅವು ಸುದೀರ್ಘ ಅವಧಿಗೆ ದೇಹಕ್ಕೆ ಸೋಂಕಿನಿಂದ ರಕ್ಷಣೆ ನೀಡಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ