ಪರ್ಪ್ಲೆಕ್ಸಿಟಿ ಕಂಪನಿ ಶೀಘ್ರ ಬಂದ್ : ಎಐ ದಿಗ್ಗಜರ ಭವಿಷ್ಯ

Kannadaprabha News   | Kannada Prabha
Published : Nov 17, 2025, 04:30 AM IST
AI

ಸಾರಾಂಶ

ಸರ್ಚ್‌ ಎಂಜಿನ್‌ ಕ್ಷೇತ್ರದಲ್ಲಿ ಗೂಗಲ್‌ಗೆ ಟಕ್ಕರ್‌ ನೀಡುವ ಉದ್ದೇಶದಿಂದ ಸೃಷ್ಟಿಯಾಗಿದ್ದ ‘ಪರ್ಪ್ಲೆಕ್ಸಿಟಿ ಎಐ’ ಅಧಃಪತನ ಆರಂಭವಾಗಿದೆ ಎಂದು ಎಐ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯಾವ ಕಂಪನಿ ಅತಿಶೀಘ್ರ ಮುಚ್ಚಲಿದೆ?’ ಎಂದು ಕೇಳಲಾದ ಪ್ರಶ್ನೆಗೆ  ‘ಪರ್ಪ್ಲೆಕ್ಸಿಟಿ’ ಎಂಬ ಉತ್ತರ ನೀಡಿದ್ದಾರೆ

ಸ್ಯಾನ್‌ ಫ್ರಾನ್ಸಿಸ್ಕೋ: ಸರ್ಚ್‌ ಎಂಜಿನ್‌ ಕ್ಷೇತ್ರದಲ್ಲಿ ಗೂಗಲ್‌ಗೆ ಟಕ್ಕರ್‌ ನೀಡುವ ಉದ್ದೇಶದಿಂದ ಸೃಷ್ಟಿಯಾಗಿದ್ದ ‘ಪರ್ಪ್ಲೆಕ್ಸಿಟಿ ಎಐ’ ಅಧಃಪತನ ಆರಂಭವಾಗಿದೆ ಎಂದು ಎಐ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯಾವ ಕಂಪನಿ ಅತಿಶೀಘ್ರ ಮುಚ್ಚಲಿದೆ?’

ಇಲ್ಲಿ ನಡೆದ ಸೆರೆಬ್ರಲ್ ವ್ಯಾಲಿ ಎಐ ಸಮ್ಮೇಳನದಲ್ಲಿ, ‘ಯಾವ ಕಂಪನಿ ಅತಿಶೀಘ್ರ ಮುಚ್ಚಲಿದೆ?’ ಎಂದು ಕೇಳಲಾದ ಪ್ರಶ್ನೆಗೆ, ಅಲ್ಲಿ ಉಪಸ್ಥಿತರಿದ್ದ ಹೆಚ್ಚಿನ ಎಐ ಟೂಲ್‌ಗಳ ಸಂಸ್ಥಾಪಕರು ಹಾಗೂ ಹೂಡಿಕೆದಾರರು ‘ಪರ್ಪ್ಲೆಕ್ಸಿಟಿ’ ಎಂಬ ಉತ್ತರ ನೀಡಿದ್ದಾರೆ. ಜತೆಗೆ, ‘ಸ್ಯಾಮ್‌ ಆಲ್ಟ್‌ಮನ್‌ ಸಿಇಒ ಆಗಿರುವ ಓಪನ್‌-ಎಐಗೂ ಉಳಿಗಾಲವಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾರಣವೇನು?:

ಪ್ರಸ್ತುತ ಸೃಷ್ಟಿಯಾಗಿರುವ ಎಐ ಬಬಲ್‌ನಿಂದಾಗಿ (ಹೊಸ ಹಾಗೂ ಆಕರ್ಷಕ ಆವಿಷ್ಕಾರವಾಗಿರುವುದರಿಂದ ಉಂಟಾಗಿರುವ ತಾತ್ಕಾಲಿಕ ಉನ್ನತಿ) ಪರ್ಪ್ಲೆಕ್ಸಿಟಿ ಜನಪ್ರಿಯವಾಗಿದೆ. ದೀರ್ಘಕಾಲದಲ್ಲಿ ಇದಕ್ಕೆ ಉಳಿಗಾಲವಿಲ್ಲ ಎಂಬ ಅಭಿಪ್ರಾಯವೂ ಇದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪರ್ಪ್ಲೆಕ್ಸಿಟಿ ವಕ್ತಾರ, ಸಮ್ಮೇಳನವನ್ನು ಟೀಕಿಸಿದ್ದಾರೆ ಹೊರತು ಕಂಪನಿಯ ಬಗ್ಗೆ ಏನೂ ಹೇಳಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!