
ವಾಷಿಂಗ್ಟನ್(ಅ.01): ಸಾಮಾನ್ಯವಾಗಿ ಕಂಡುಬರುವ ಶೀತ- ಜ್ವರದಿಂದ ಈ ಹಿಂದೆ ಚೇತರಿಸಿಕೊಂಡವರಲ್ಲಿ ಕೊರೋನಾ ವೈರಸ್‌ನಿಂದ ಕೆಲ ಮಟ್ಟಿನ ರಕ್ಷಣೆಯನ್ನು ಪಡೆದುಕೊಂಡಿರಬಹುದಾದ ಸಾಧ್ಯತೆಗಳಿವೆ ಎಂದು ಅಧ್ಯಯನವೊಂದು ತಿಳಿಸಿದೆ.
ಅಮೆರಿಕದ ರೊಚೆಸ್ಟರ್ ಮೆಡಿಕಲ್ ಸೆಂಟರ್‌ನ ಸಂಶೋಧಕರು ನಡೆಸಿದ ಅಧ್ಯಯನ ವರದಿ ಎಂ-ಬಯೋ ಎಂಬ ಜರ್ನಲ್‌ನಲ್ಲಿ ಈ ವಿಚಾರ ಉಲ್ಲೇಖವಾಗಿದೆ. ಈ ವರದಿ ಪ್ರಕಾರ, ದೇಹದಲ್ಲಿ ದೀರ್ಘಕಾಲ ಉಳಿಯುವ ಪ್ರತಿರಕ್ಷಣಾ ಕೋಶ ಬಿ ಸೆಲ್‌ಗಳು ಕೊರೋನಾ ವೈರಸ್ ಅನ್ನು ಪತ್ತೆಹಚ್ಚಿ ಅವುಗಳ ವಿರುದ್ಧ ಪ್ರತಿಕಾಯಗಳನ್ನು ದೀರ್ಘಾವಧಿಯವರೆಗೆ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ.
ಈಗಾಗಲೇ ಸಾಮಾನ್ಯ ವೈರಸ್‌ಗಳಿಗೆ ತುತ್ತಾಗಿರುವವರಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡುವ ಪ್ರತಿರಕ್ಷಣಾ ವ್ಯವಸ್ಥೆ ಕೆಲ ಮಟ್ಟಿಗೆ ವೃದ್ಧಿ ಆಗಿರಬಹುದಾದ ಸಾಧ್ಯತೆ ಇದೆ. ಬಿ ಕೋಶಗಳು ದಶಕಗಳ ಕಾಲ ಉಳಿಯಬಲ್ಲವು. ಅಲ್ಲದೆ ಅವು ಕೊರೋನಾ ವೈರಸ್‌ನಿಂದ ಚೇತರಿಸಿಕೊಂಡವರನ್ನು ಸೋಂಕಿನಿಂದ ರಕ್ಷಿಸಿರುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಸಂಶೊಧನೆಗಳನ್ನು ನಡೆಸುವ ಅಗತ್ಯವಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ