
ದುಬೈ(ಜ.14): ತನ್ನ ಕ್ಯಾಬ್’ನಲ್ಲಿ ಭಾರತೀಯ ಯುವತಿ ಬಿಟ್ಟು ಹೋದ ಪರ್ಸ್’ನ್ನು ಪಾಕ್ ಮೂಲದ ಕ್ಯಾಬ್ ಡ್ರೈವರ್ ಮರಳಿಸಿದ ಘಟನೆ ದುಬೈನಲ್ಲಿ ನಡೆದಿದೆ.
ಕೇರಳ ಮೂಲದ ರಶೆಲ್ ರೋಸ್ ಎಂಬ ಭಾರತೀಯ ಯುವತಿ ತನ್ನ ಗೆಳೆಯರೊಂದಿಗೆ ಪಾಕ್’ನ ಮೊದಾಸ್ಸರ್ ಖಾದೀಮ್ ಎಂಬಾತನ ಕ್ಯಾಬ್’ನಲ್ಲಿ ಪ್ರಯಾಣ ಮಾಡಿದ್ದಳು.
ಆದರೆ ಹೊರಡುವಾಗ ರಶೆಲ್ ತಮ್ಮ ಪರ್ಸ್’ನ್ನು ಖಾದೀಮ್ ಕಾರಿನಲ್ಲೇ ಬಿಟ್ಟು ಇಳಿದಿದ್ದಳು. ಕೆಲ ಹೊತ್ತಿನ ಬಳಿಕ ತನ್ನ ಕಾರಿನಲ್ಲಿ ಪರ್ಸ್ ಇರುವುದನ್ನು ಕಂಡ ಮೊದಾಸ್ಸರ್, RTAಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು.
ಬಳಿಕ ದುಬೈ ಪೊಲೀಸರು ರಶೆಲ್ ಅವರನ್ನು ಸಂಪರ್ಕಿಸಿ ಆಕೆಯ ಪರ್ಸ್ ಸಿಕ್ಕಿರುವ ವಿಷಯ ತಿಳಿಸಿದ್ದಾರೆ. ರಶೆಲ್ ಪರ್ಸ್’ನಲ್ಲಿ ಇಂಗ್ಲೆಂಡ್’ನ ವೀಸಾ ಹಾಗೂ 19 ಸಾವಿರ ರೂ. ಇತ್ತೆಂದು ಹೇಳಲಾಗಿದೆ.
ಹಣ ಪಡೆಯದ ಭಾರತೀಯ ಕ್ಯಾಬ್ ಡ್ರೈವರ್‌ಗೆ ಸ್ಪೆಷಲ್ ಗಿಫ್ಟ್ ನೀಡಿದ ಪಾಕ್ ಕ್ರಿಕೆಟರ್ಸ್!
ಬಳಿಕ ಮೊದಾಸ್ಸರ್ ಅವರನ್ನು ಭೇಟಿಯಾದ ರಶೆಲ್, ತಮ್ಮ ಪರ್ಸ್ ಹಿಂದಿರುಗಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾಳೆ. ಈ ಕುರಿತು ರಶೆಲ್ ತಮ್ಮ ಟ್ವೀಟ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ