ಅಮ್ಮನ ಕಾಡುವ ನೆನಪು... ತಾಯಿಯ ಫೋಟೋ ಹಿಡಿದು ಹಸೆಮಣೆ ಏರಲು ಬಂದ ವಧು

By Suvarna NewsFirst Published Dec 17, 2021, 2:41 PM IST
Highlights
  • ಅಮ್ಮನ ಫೋಟೊ ಹಿಡಿದು ಮದುವೆ ಮಂಟಪಕ್ಕೆ ಬಂದ ವಧು
  • ಪಾಕಿಸ್ತಾನಿ ವಧುವಿನ ಭಾವುಕ ಕ್ಷಣ ಕ್ಯಾಮರಾದಲ್ಲಿ ಸೆರೆ
  • 2.8 ಲಕ್ಷಕ್ಕೂ ಹೆಚ್ಚು ಜನರಿಂದ ವಿಡಿಯೋ ವೀಕ್ಷಣೆ

ಕರಾಚಿ(ಡಿ.): ಪಾಕಿಸ್ತಾನಿ(Pakistan) ವಧುವೊಬ್ಬಳು ತನ್ನ ಕಳೆದು ಹೋದ ತಾಯಿಯ ಭಾವಚಿತ್ರವನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ತಂದೆಯ ಕೈ ಹಿಡಿದುಕೊಂಡು ಮದುವೆ ಮಂಟಪಕ್ಕೆ ಬರುತ್ತಿರುವ ಭಾವುಕ ಕ್ಷಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪಾಕಿಸ್ತಾನದಲ್ಲಿ ನಡೆದ ಮದುವೆಯೊಂದರ ದೃಶ್ಯ ಇದಾಗಿದ್ದು, ವಧು ತನ್ನ ತಾಯಿಯ ಛಾಯಾಚಿತ್ರವನ್ನು ಹಿಡಿದುಕೊಂಡು ಮದುವೆಯ ಸ್ಥಳ ಪ್ರವೇಶಿಸಿದಾಗ ಕಣ್ಣೀರು ಹಾಕುವ ದೃಶ್ಯವಿದೆ. ನವ ವಧು ಧರಿಸುವ ಕೆಂಪು ಬಣ್ಣದ ಲೆಹೆಂಗಾ ಧರಿಸಿರುವ ಈ ವಧು ತನ್ನ ತಂದೆಯೊಂದಿಗೆ ಮಂಟಪಕ್ಕೆ ಬರುತ್ತಿದ್ದಾಳೆ. ಈ ವೇಳೆ ವಧುವಿನ ಕಣ್ಣಲ್ಲೂ ನೀರು ತುಂಬಿದೆ. ಆಕೆಯ ತಂದೆ ಕೂಡ ಈ ಕ್ಷಣ ತುಂಬಾ ಭಾವುಕರಾಗಿದ್ದರು. 

ಈ ವೀಡಿಯೋವನ್ನು ಛಾಯಾಗ್ರಾಹಕ ಮಹಾ ವಜಾಹತ್ ಖಾನ್  (Maha Wajahat Khan) ಅವರು ಇನ್ಸ್ಟಾಗ್ರಾಮ್‌ನಲ್ಲಿ (Instagram) ನಲ್ಲಿ ಹಂಚಿಕೊಂಡಿದ್ದಾರೆ. ತಾಯಿಯನ್ನು ಕಳೆದುಕೊಂಡಿರುವಂತಹ ಎಲ್ಲಾ ಹೆಣ್ಣು ಮಕ್ಕಳಿಗೆ ಈ ವಿಡಿಯೋ ಅರ್ಪಣೆ ಎಂದು ಅವರು ಇನ್ಸ್ಟಾಗ್ರಾಮ್‌(Instagram)ನಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಧುವಿನ ಸಂಬಂಧಿಕರು ಕೂಡ ಕಣ್ಣೀರು ಒರೆಸಿಕೊಂಡು ಆಕೆಗೆ ಸಾಂತ್ವನ ಹೇಳುತ್ತಿರುವುದು ಕಂಡು ಬಂದಿದೆ. 57 ಸೆಕೆಂಡುಗಳ ಈ ವಿಡಿಯೋ ವಧು ಮತ್ತು ಆಕೆಯ ತಂದೆ  ಔಪಚಾರಿಕ ವಿದಾಯದ ಸಮಯದಲ್ಲಿ ತಬ್ಬಿಕೊಳ್ಳುವುದರೊಂದಿಗೆ ಕೊನೆಗೊಂಡಿದೆ. 

 

ಎರಡು ದಿನಗಳ ಹಿಂದೆ ಪೋಸ್ಟ್‌ ಆಗಿರುವ ಈ ವಿಡಿಯೋವನ್ನು  2.8 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಹಾಗೂ  800 ಕ್ಕೂ ಹೆಚ್ಚು ಮಂದಿ ಕಾಮೆಂಟ್‌ ಮಾಡಿದ್ದಾರೆ. ಇದು ತುಂಬಾ ಭಾವಾನಾತ್ಮಕ ಕ್ಷಣ, ಇದನ್ನು ನೋಡಿದಾಗಲೆಲ್ಲಾ ನಾನು ಅಳುತ್ತೇನೆ ಎಂದು ಈ ವಿಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ  ನವ ವಧುವಿಗೆ ಪ್ರೀತಿಯ ಜೊತೆ ಶುಭ ಹಾರೈಸಿದ್ದಾರೆ. ಮದುವೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣ (social media) ಗಳಲ್ಲಿ ವೈರಲ್‌ ಆಗಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ವಧು ತನ್ನ ನೆಚ್ಚಿನ ಹಾಡನ್ನು ಪ್ಲೇ ಮಾಡುವವರೆಗೂ ಮದುವೆ ಮಂಟಪಕ್ಕೆ ಪ್ರವೇಶಿಸಲು ನಿರಾಕರಿಸಿದ ದೃಶ್ಯಗಳು ಈ ಹಿಂದೆ  ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿದ್ದವು. 

Viral video: ಗಂಡಿನ ಹಣೆಗೆ ಕುಂಕಮವಿಟ್ಟು ಸಂಪ್ರದಾಯ ಮುರಿದ ವಧು

ಕೆಲ ದಿನಗಳ ಹಿಂದಷ್ಟೇ ಮದುವೆ ಮಂಟಪಕ್ಕೆ ವಧುವೊಬ್ಬಳು ಕುದುರೆ ಏರಿ ಬಂದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇಂಡಿಗೋ ಏರ್‌ಲೈನ್ಸ್‌ (Indigo airlines)ನಲ್ಲಿ ಹಿರಿಯ ಗಗನಸಖಿಯಾಗಿರುವ ಅನುಷ್ಕಾ ಗುಹಾ (Anushka Guha) ಎಂಬುವವರು ಕುದುರೆ ಸವಾರಿಯೊಂದಿಗೆ ದಿಬ್ಬಣ ಬಂದಿದ್ದರು. ಇವರು ತಮ್ಮ ಕುಟುಂಬದವರು ನೆಂಟರಿಷ್ಟರೊಂದಿಗೆ  ಗಯಾದಲ್ಲಿರುವ ಧರ್ಮಾಶಾಲಾದಲ್ಲಿ ಆಯೋಜಿಸಲಾಗಿದ್ದ ತಮ್ಮ ಮದುವೆಗೆ ಕುದುರೆ ಏರಿ ಬಂದಿದ್ದಾರೆ. ಹೀಗೆ ದಿಬ್ಬಣ ಹೊರಟ ಇವರಿಗೆ ಸಂಬಂಧಿಕರು ಹಾಗೂ ಸ್ನೇಹಿತರು ಮದುವೆ ಹಾಡುಗಳನ್ನು ಹಾಡುತ್ತಾ ಸಾಥ್‌ ನೀಡಿದ್ದಾರೆ. ವಧು ಅನುಷ್ಕಾ ಗುಹಾ ಕುದುರೆ ಸವಾರಿ ಮಾಡುತ್ತಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,  ನೆಟ್ಟಿಗರು ಭೇಷ್‌ ಎಂದಿದ್ದಾರೆ. 

ಕುದುರೆ ಏರಿ ಮದುವೆ ಮಂಟಪಕ್ಕೆ ಬಂದ ವಧು, ಬೇಷ್ ಎಂದ ನೆಟ್ಟಿಗರು!

ಸಣ್ಣ ವಯಸ್ಸಿನಿಂದಲೂ ವರ ಕುದುರೆ ಏರಿ ಬರುವ ಸಂಪ್ರದಾಯವನ್ನು ಪ್ರಶ್ನಿಸುತ್ತಿದ್ದ ಅನುಷ್ಕಾ ಹೆಣ್ಣು ಮಕ್ಕಳು ಏಕೆ ಕುದುರೆ ಏರಿ ಹೋಗಬಾರದು ಎಂದು ಕೇಳುತ್ತಿದ್ದಳು. ಆಗ ನಾವು ಅವಳಿಗೆ ಇದು ಹಿಂದಿನ ತಲೆಮಾರಿನಿಂದಲೂ ನಡೆದು ಬಂದಂತಹ ಸಂಪ್ರದಾಯ ಎಂದು ಹೇಳುತ್ತಿದ್ದೆವು. ಆದರೆ ಅವಳು ಈ ಮಾತಿನಿಂದ ಸಮಾಧಾನಗೊಳ್ಳಲೇ ಇಲ್ಲ. ಅವಳು ತಾನು ಯಾವಾಗಲೂ ಈ ಸಂಪ್ರದಾಯವನ್ನು ಮುರಿದು ಅದಕ್ಕೆ ವಿರುದ್ಧ ಮಾಡುವುದಾಗಿ ಹೇಳುತ್ತಿದ್ದಳು. ಎಂದು ಆಕೆಯ ತಾಯಿ ಸುಶ್ಮಿತಾ ಗುಹಾ(Shusmita Guha) ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. 

click me!