ಸೋಂಕಿತನ ಭೇಟಿ ತಂದ ಕುತ್ತು: ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಕೊರೋನಾ ಭೀತಿ!

By Suvarna NewsFirst Published Apr 22, 2020, 11:05 AM IST
Highlights

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಕೊರೋನಾ ತಗುಲುವ ಭೀತಿ| ಕೊರೋನಾ ಸೋಂಕಿತನ ಭೇಟಿಯಾದ ಇಮ್ರಾನ್‌ ಖಾನ್‌ಗೆ ಕ್ವಾರಂಟೈನ್| ಕೊರೋನಾ ಪರೀಕ್ಷೆ ವರದಿ ಇಂದು ಬರುವ ಸಾಧ್ಯತೆ!

ಇಸ್ಲಮಾಬಾದ್(ಏ.22): ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ಗೆ ಕೊರೋನಾವೈರಸ್ ಪರೀಕ್ಷೆ ನಡೆಸಲಾಗಿದೆ. ಏಪ್ರಿಲ್ 15 ರಂದು ಇಮ್ರಾನ್ ಖಾನ್ ಇಧೀ ಫೌಂಡೇಷನ್‌ನ ಫೈಸಲ್‌ ಇಧೀಯನ್ನು ಭೇಟಿಯಾಗಿದ್ದರು. ಆದರೀಗ ಫೈಸಲ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಹೀಗಿರುವಾಗ ಪಿಎಂ ಇಮ್ರಾನ್ ಖಾನ್‌ ಪರೀಕ್ಷೆ  ಹಾಗೂ ಕ್ವಾರಂಟೈನ್‌ ಮಾಡುವುದು ಅಗತ್ಯವಾಗಿದೆ. ಹೀಗಾಗಿ ಈ ಪರೀಕ್ಷೆ ನಡೆಸಲಾಗಿದ್ದು, 24 ತಾಸಿನೊಳಗೆ ವರದಿ ಬರಲಿದೆ.

ಚೀನಾ ಹಾದಿಯಲ್ಲಿ ಪಾಕ್: ಕರಾಚಿಯಲ್ಲೇ 3 ಸಾವಿರಕ್ಕೂ ಅಧಿಕ ಶವ!

ಇನ್ನು ಇಮ್ರಾನ್ ಖಾನ್‌ಗೆ ಕೊರೋನಾ ಪರೀಕ್ಷೆ ನಡೆಸಿದ ಸಂಬಂಧ ಪ್ರತಿಕ್ರಿಯಿಸಿದ್ದ, ಅವರ ಖಾಸಗಿ ವೈದ್ಯ ಹಾಗೂ ಶೌಕತ್ ಖಾನಂ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯ ಸಿಇಓ ಸುಲ್ತಾನ್‌ ಪ್ರಧಾನ ಮಂತ್ರಿಯವರಿಗೆ ಕೊರೋನಾ ವೈರಸ್ ಟೆಸ್ಟ್ ನಡೆಸಲಾಗುತ್ತದೆ ಈ ಮೂಲಕ ಅವರೊಬ್ಬ ಈ ದೇಶದ ಜವಾಬ್ದಾರಿಯುತ ನಾಗರಿಕನೆಂದು ಎಲ್ಲರಿಗೂ ತಿಳಿಯುತ್ತದೆ. ನಾವೆಲ್ಲಾ ಪ್ರೋಟೋಕಾಲ್‌ ಪಾಲನೆ ಮಾಡುತ್ತೇವೆ ಈ ಮೂಲಕ ಶಿಫಾರಸು ಮಾಡುತ್ತೇವೆ ಎಂದಿದ್ದಾರೆ.

ಪ್ರೋಟೋಕಾಲ್‌ ಅನ್ವಯ ಕೊರೋನಾ ಸೋಂಕಿತ ವ್ಯಕ್ತಿಯನ್ನು ಭೇಟಿಯಾಗುವ ವ್ಯಕ್ತಿ, ತಾನು ಕುಡಾ ಕ್ವಾರಂಟೈನ್‌ಗೊಳಪಡಬೇಕು. ಇನ್ನು ಪಾಕಿಸ್ತಾನದಲ್ಲಿ ಕೊರೋನಾ ವೈರಸ್‌ನಿಂದಾಗಿ ಮಂಗಳವಾರ ಮತ್ತೆ ಹದಿನಾರು ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಸಂಖ್ಯೆ ಒಟ್ಟು 192 ಆಗಿದೆ. ಇನ್ನು ಸೋಂಕಿತರ ಸಂಖ್ಯೆ ಹಒಂಭತ್ತು ಸಾಔಇರ ಗಡಿ ದಾಟಿದೆ.

click me!