ಚೀನಾ ಹಾದಿಯಲ್ಲಿ ಪಾಕ್: ಕರಾಚಿಯಲ್ಲೇ 3 ಸಾವಿರಕ್ಕೂ ಅಧಿಕ ಶವ!
ವಿಶ್ವದಾದ್ಯಂತ ಕೊರೋನಾ ಅಟ್ಟಹಾಸ ಮಿತಿಮೀರಿದೆ. ಸೋಂಕಿತರ ಸಂಖ್ಯೆ 22 ಲಕ್ಷ ದಾಟಿದೆ. ಅಲ್ಲದೇ ಒಂದು ಲಕ್ಷದ 50 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇವೆಲ್ಲದರ ನಡುವೆ ಚೀನಾದಂತೆ ಪಾಕಿಸ್ತಾನ ಕೂಡಾ ಮೃತರ ಸಂಖ್ಯೆ ಮುಚ್ಚಿಟ್ಟಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಲ್ಲಿನ ಒಂದು ಪ್ರಮುಖ ಪತ್ರಿಕೆ ದ ಟ್ರಬ್ಯೂನ್ ಮಾಡಿರುವ ವರದಿ ಇಂತಹುದೇ ಸುಳಿವು ನೀಡಿದೆ. ಇದರ ಅನ್ವಯ ಕರಾಚಿಯಲ್ಲೇ ಕಳೆದ ನಲ್ವತ್ತೊಂಭತ್ತು ದಿನಗಳಲ್ಲಿ 3265 ಶವಗಳನ್ನು ಸಮಾಧಿ ಮಾಡಿದೆ ಎನ್ನಲಾಗಿದೆ.
ಈ ಅಂಕಿ ಅಂಶ ಕರಾಚಿಯ ಕೇವಲ 30 ಸ್ಮಶಾನಗಳದ್ದಾಗಿದೆ. ಅನೇಕ ಮೃತರ ಸಾವಿಗೆ ಕಾರಣವೇನೆಂದು ಹೇಳಲಾಗಿಲ್ಲ, ಹಾಗೂ ಈ ಬಗ್ಗೆ ರೀಕ್ಷೆ ಕೂಡಾ ನಡೆಸಿಲ್ಲ. ಮತ್ತೊಂದೆಡೆ ಶುಕ್ರವಾರದ ವೇಳೆಗೆ ಇಲ್ಲ ಏಳು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಯಾಗಿದ್ದು, ನೂರ ನಲ್ವತ್ತ ಮೂರು ಮಂದಿ ಮೃತಪಟ್ಟಿರುವುದಾಗಿ ಅಧಿಕೃತವಾಗಿ ಹೇಳಲಾಗಿದೆ.
ವರದಿಯನ್ವಯ 30 ಸ್ಮಶಾನಗಳಲ್ಲಿ ಕಳೆದ 49 ದಿನಗಳಲ್ಲಿ 3265 ಮಂದಿಯನ್ನು ಸಮಾಧಿ ಮಾಡಿರುವ ಸಂಖ್ಯೆ ಗುರುವಾರಂದು ಸರ್ಕಾರಿ ಡೇಟಾದಲ್ಲಿ ಲಭಿಸಿದೆ ಎನ್ನಲಾಗಿದೆ. ಇನ್ನು ಪಾಕಿಸ್ತಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕಳೆದ ಕೆಲ ದಿನಗಳಿಂದ ಹಲವಾರು ಮಾಧ್ಯಮಗಳು ಸುದ್ದಿ ಮಾಡಿವೆ.
ಇನ್ನು ಸರ್ಕಾರ ಈ ಕುರಿತು ಏನೂ ಹೇಳುತ್ತಿಲ್ಲ ಎಂದು ಮಾಧ್ಯಮಗಳು ತಿಳಿಸಿವೆ. ಇನ್ನು ಮೃತರ ಸಂಖ್ಯೆಯನ್ನು ಮುಚ್ಚಿಟ್ಟರೆ ಭಾರೀ ಅನಾಹುತ ಸಂಭವಿಸಲಿದೆ ಎಂದೂ ಈ ವರದಿಯಲ್ಲಿ ಇಲ್ಲೇಖಿಸಲಾಗಿದೆ.
ಕರಾಚಿಯ ಸರ್ಕಾರಿ ಆಸ್ಪತ್ರೆಗಳಿಂದ ಲಭ್ಯವವಾದ ಅಂಖಿ ಅಂಶಗಳ ಅನ್ವಯ, ಜನವರಿಯಿಂದ ಮಾರ್ಚ್‌ವರೆಗೆ ಅಂದರೆ ಕಳೆದ ಮೂರು ತಿಂಗಳಲ್ಲಿ ಇಲ್ಲಿ ಸುಮಾರು 10791 ಮಂದಿಯನ್ನು ಎಮರ್ಜೆನ್ಸಿಗೆ ತೆಗೆದುಕೊಳ್ಳಲಾಗಿತ್ತು. ಇವರಲ್ಲಿ 121 ಮಂದಿ ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದರು.
ಇನ್ನು ಯಾವೊಬ್ಬನ ಸಾವಿನ ಕುರಿತಾಗಿಯೂ ಸರ್ಕಾರ ಅಧಿಕೃತ ಮಾಹಿತಿ ನೀಡಿಲ್ಲ ಅಲ್ಲದೇ ಅವರಿಗೆ ಯಾವುದೇ ಟೆಸ್ಟ್ ಕೂಡಾ ಮಾಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಆಸ್ಪತ್ರೆಗಳೂ ಈ ಕುರಿತು ಯಾವುದೇ ಕುತೂಹಲ ತೋರಿಸಿಲ್ಲ ಎಂಬುವುದು ಅಚ್ಚರಿಯ ವಿಚಾರವಾಗಿದೆ.
ಮೃತರಲ್ಲಿ ಯಾರಾದರೂ ಕೊರೋನಾ ವೈರಸ್‌ನಿಂದಾಗಿ ಮೃತಪಟ್ಟಿದ್ದಾರಾ? ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ.
ಇನ್ನು ಕೊರೋನಾ ಅಟ್ಟಹಾಸಕ್ಕೆ ಪಾಕಿಸ್ತಾನದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೋಂಕಿತರ ಹಾಗೂ ಮೃತರ ಸಂಖ್ಯೆಯನ್ನೂ ಸರ್ಕಾರ ಮುಚ್ಚಿಡಲಾರಂಭಿಸಿದೆ.