ಪಾಕಿಸ್ತಾನದಲ್ಲಿ ಕೋಲಾಹಲ, ಖೈಬರ್‌ನಲ್ಲಿ ಸರ್ಕಾರ ಅಮಾನತುಗೊಳಿಸಿ ತುರ್ತು ಪರಿಸ್ಥಿತಿ ಘೋಷಣೆ

Published : Oct 11, 2026, 03:41 PM IST
Major Political Crisis in Pakistan

ಸಾರಾಂಶ

ಪಾಕಿಸ್ತಾನದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಖಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿನ ಸರ್ಕಾರ ಅಮಾನತುಗೊಳಿಸಿದ ಪಾಕ್ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಪಾಕ್ ಪೊಲೀಸ್ ಹಾಗೂ ಸೇನೆ ಬಳಸಿಕೊಳ್ಳಲಾಗಿದೆ.

ಇಸ್ಲಾಮಾಬಾದ್ (ಅ.11) ಪಾಕಿಸ್ತಾನ ಕಳೆದ ಕೆಲ ವರ್ಷಗಳಿಂದ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ರಾಜಕೀಯವಾಗಿ, ಆರ್ಥಿಕವಾಗಿ ಪಾಕಿಸ್ತಾನ ಬಳಲಿ ಬೆಂಡಾಗಿದೆ. ಈ ಬೆಳವಣಿಗೆ ನಡುವೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಖೈಬರ್ ಪಖ್ತುಂಕ್ವಾದಲ್ಲಿನ ಸರ್ಕಾರವನ್ನು ಅಮಾನತುಗೊಳಿಸಿದ ಅಧ್ಯಕ್ಷ, ಇಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಹೋರಾಟ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸರ್ಕಾರ ಅಮಾನತುಗೊಂಡು, ತುರ್ತು ಪರಿಸ್ಥಿತಿ ಜಾರಿಯಾಗಿದೆ.

ತುರ್ತು ಪರಿಸ್ಥಿತಿ ಘೋಷಿಸಿದ್ದು ಯಾಕೆ

ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಖೈಬರ್ ಪಖ್ತುಂಕ್ವಾದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ಅಧಿಕಾರದಲ್ಲಿದೆ. ಈ ಪ್ರಾಂತ್ಯದ ಆಡಳಿತವನ್ನು ಪಿಟಐ ನೋಡಿಕೊಳ್ಳುತ್ತಿದೆ. ಆದರೆ ಖೈಬರ್ ಪಖ್ತುಂಕ್ವಾದಲ್ಲಿ ಪಿಟಿಐ ಹೋರಾಟ ತೀವ್ರಗೊಳಿಸಿದ್ದೇ ಈ ತುರ್ತು ಪರಿಸ್ಥಿತಿಗೆ ಕಾರಣವಾಗಿದೆ. ಇಮ್ರಾನ್ ಖಾನ್ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪಿಟಐ ಕಾರ್ಯಕರ್ತರು ಖೈಬರ್ ಪಖ್ತುಂಕ್ವಾದಲ್ಲಿ ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದರು. ಈ ಮೆರವಣಿಗೆಯಲ್ಲಿ ಭಾರಿ ಸಂಖ್ಯೆಯಲ್ಲಿ ಪಿಟಿಐ ಕಾರ್ಯಕರ್ತರು, ಇಮ್ರಾನ್ ಖಾನ್ ಬೆಂಬಲಿಗರು ಹಾಜರಾಗಿದ್ದರು. ಇದೇ ವೇಳೆ ಶೀಘ್ರದಲ್ಲೇ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ಗೆ ಪ್ರತಿಭಟನಾ ಮೆರವಣಿಗೆ ಆಯೋಜಿಸುತ್ತೇವೆ ಎಂದು ಎಚ್ಚರಿಕೆ ನೀಡಲಾಗಿತ್ತು. ಈ ಎಚ್ಚರಿಕೆ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ , ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಸೂಚನೆಯಂತೆ ಅಧ್ಯಕ್ಷ ಅಸಿಫ್ ಆಲಿ ಜರ್ಜಾರಿ ಸರ್ಕಾರ ಅಮಾನತುಗೊಳಿಸಿ, ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಪ್ರಧಾನಿ ಶೆಹಬಾಝ್ ಷರೀಫ್ ಹಾಗೂ ಪಿಟಿಐ ಜಟಾಪಟಿ

ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ಖೈಬರ್ ಪ್ರಾಂತ್ಯದಲ್ಲಿ ಹೋರಾಟ ನಡೆಯುತ್ತಿದೆ. ಪ್ರತಿ ದಿನ ಹೋರಾಟದ ತೀವ್ರತೆ ಹೆಚ್ಚಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಇಮ್ರಾನ್ ಖಾನ್ ಪರ ಘೋಷಣೆ ಕೂಗುತ್ತಿದ್ದಾರೆ. ಇದೇ ವೇಳೆ ಶೆಹಬಾಜ್ ಷರೀಫ್ ವಿರುದ್ಧ ಘೋಷಣೆ ಕೂಗಿದ್ದಾರೆ. ಇದು ಸರ್ಕಾರದ ಆತಂಕಕ್ಕೆ ಕಾರಣವಾಗಿತ್ತು. ಇಮ್ರಾನ್ ಖಾನ್ ಜೈಲಿನಲ್ಲಿದ್ದರೂ ಜನಪ್ರಿಯತೆ ಕಡಿಮೆಯಾಗಿಲ್ಲ ಅನ್ನೋದು ಜರ್ದಾರಿಗೆ ಅರಿವಾಗಿತ್ತು. ಹೀಗಾಗಿ ತಕ್ಷಣವೇ ಖೈಬರ್ ಪ್ರಾಂತ್ಯದ ಪಿಟಿಐ ಸರ್ಕಾರ ವಜಾಗೊಳಿಸಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಪಾಕ್ ಅಧ್ಯಕ್ಷರ ಸ್ಪಷ್ಟನೆ

ಖೈಬರ್ ಪಖ್ತುಂಕ್ವಾದಲ್ಲಿ ಸರ್ಕಾರ ವಜಾಗೊಳಿಸಿ ತುರ್ತು ಪರಿಸ್ಥಿತಿ ಘೋಷಣೆ ಕುರಿತು ಅಸಿಫ್ ಆಲಿ ಜರ್ದಾರಿ ಕಚೇರಿ ಪ್ರಕಟಣೆ ಹೊರಟಿಸಿದೆ. ಪಾಕಿಸ್ತಾನದ ಆರ್ಟಿಕಲ್ 232 ಹಾಗೂ 234 ಅಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಖೈಬರ್ ಪ್ರಾಂತ್ಯದಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಶೆಹಬಾಜ್ ಷರೀಫ್ ಕ್ಯಾಬಿನೆಟ್ ಸಭೆ ಸೇರಿ ಮಹತ್ವದ ನಿರ್ಧಾ ತೆಗೆದುಕೊಂಡಿದೆ. ಖೈಬರ್ ಪ್ರಾಂತ್ಯದಲ್ಲಿ ಸರ್ಕಾರ ವಜಾಗೊಳಿಸಿ ತುರ್ತು ಪರಿಸ್ಥಿತಿ ಜಾರಿಗೊಳಿಸುವಂತೆ ಶೆಹಬಾಜ್ ಷರೀಫ್ ಸೂಚಿಸಿದ್ದಾರೆ. ಈ ಪ್ರಸ್ತಾವನೆಯನ್ನು ಜಾರಿಗೊಳಿಸಲಾಗಿದೆ ಎಂದು ಆಸಿಫ್ ಅಲಿ ಜರ್ದಾರಿ ಕಚೇರಿ ಪ್ರಕಟಣೆ ಹೇಳಿದೆ.

ಇಮ್ರಾನ್ ಖಾನ್ ಆಪ್ತ ಝುಲ್ಫಿಕರ್ ಭುಕಾರಿ ತುರ್ತು ಪರಿಸ್ಥಿತಿ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಇದು ದ್ವೇಷದ ರಾಜಕಾರಣ ಎಂದಿದ್ದಾರೆ. ಪಾಕಿಸ್ತಾನದ ಒಟ್ಟು ಪ್ರಾಂತ್ಯಗಳಲ್ಲಿ ಕೇವಲ ಖೈಬರ್‌ನಲ್ಲಿ ಮಾತ್ರ ನ್ಯಾಯ ಸಮ್ಮತವಾಗಿ ಜನರಿಂದ ಆರಿಸಿದ ಸರ್ಕಾರವಿತ್ತು. ಇದೀಗ ವಜಾಗೊಳಿಸಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿಲ್ಲಿ ಪೊಲೀಸರಿಂದ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ, ಕಾಕ್ರೋಚ್ ವಿರುದ್ಧ ಕ್ರಮಕ್ಕೆ ಪಾಕ್ ಕ್ರಿಕೆಟಿಗನ ಮೆಚ್ಚುಗೆ
ಫ್ಲ್ಯಾಟ್ ಜೊತೆ 196 ಕಾರು ಪಾರ್ಕಿಂಗ್ ಸ್ಪೇಸ್ ಖರೀದಿಸಿದ ಮಹಿಳೆ, ಕಾರಣ ತಿಳಿದಾಗ ಇತರರು ಕಂಗಾಲು