ಶ್ರೀಲಂಕಾದ ಬುರ್ಖಾ ನಿಷೇಧ ನಿರ್ಧಾರಕ್ಕೆ ಪಾಕ್‌ ಕಿಡಿ, ಜೊತೆಗೊಂದು ವಾರ್ನಿಂಗ್!

By Suvarna NewsFirst Published Mar 27, 2021, 2:15 PM IST
Highlights

ಶ್ರೀಲಂಕಾದಲ್ಲಿ ಬುರ್ಖಾ ನಿಷೇಧ| ಲಂಕಾ ನಿರ್ಧಾರಕ್ಕೆ ಪಾಕ್‌ ಕಿಡಿ| ಆರ್ಥಿಕ ಮುಗ್ಗಟ್ಟು, ಅನೇಕ ಸವಾಲು ಎನ್ನುತ್ತಾ ಲಂಕಾಗೆ ಪಾಕಿಸ್ತಾನ ವಾರ್ನಿಂಗ್

ಕೊಲಂಬೋ(ಮಾ.27): ಶ್ರೀಲಂಕಾದಲ್ಲಿ ಬುರ್ಖಾ ನಿಷೇಧಿಸಿ ಕಾನೂನು ಜಾರಿಗೊಳಿಸುವ ನಿರ್ಧಾರ ಪ್ರಕಟಿಸಿದೆ. ಆದರೀಗ ದ್ವೀಪ ರಾಷ್ಟ್ರದ ಈ ನಿರ್ಧಾರಕ್ಕೆ ನೆರೆ ರಾಷ್ಟ್ರದ ಉನ್ನತ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಶ್ರೀಲಂಕಾದ ಈ ನಿರ್ಧಾರದಿಂದ ಅಲ್ಲಿನ ಹಾಗೂ ವಿಶ್ವದ ಎಲ್ಲಾ ಮುಸಲ್ಮಾನರ ಭಾವಗೆ ಘಾಸಿಯುಂಟಾಗಲಿದೆ ಎಂದಿದೆ. ಇನ್ನು ಶ್ರೀಲಂಕಾದ ಈ ನಿರ್ಧಾರವನ್ನು ಖಂಡಿಸಿರುವ ನೆರೆ ರಾಷ್ಟ್ರ ಧಮ್ಕಿಯನ್ನೂ ಹಾಕಿದೆ.

ನೆರೆ ರಾಷ್ಟ್ರದಲ್ಲಿ ಬುರ್ಖಾ ನಿಷೇಧ, ಹಲವು ಇಸ್ಲಾಂ ಶಾಲೆಗಳ ಸ್ಥಗಿತ!

ಬುರ್ಖಾ ನಿಷೇಧ ಸಂಬಂಧಿತ ಸುದ್ದಿಯೊಂದನ್ನು ಟ್ವೀಟ್ ಮಾಡಿರುವ ಶ್ರೀಲಂಕಾದಲ್ಲಿರುವ ಪಾಕಿಸ್ತಾನ ರಾಯಭಾರಿ ಸಾದ್‌ ಖಟ್ಟಾಸ್ 'ಬುರ್ಖಾ ಬ್ಯಾನ್‌ನಿಂದ ಶ್ರಿಲಂಕಾ ಹಾಗೂ ವಿಶ್ವದ ಎಲ್ಲಾ ಮುಸಲ್ಮಾನರ ಭಾವನೆಗೆ ಘಾಸಿಯಾಗಲಿದೆ. ಕೊರೋನಾ ಮಹಾಮಾಋಇಯಿಂದಾಗಿ ಶ್ರೀಲಂಕಾ ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಶ್ರೀಲಂಕಾ ತನ್ನ ಅನೇಕ ಸವಾಲುಗಳನ್ನೆದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಗಳಿದ್ದರೂ ಸುರಕ್ಷತೆ ನೆಪವನ್ನಿಟ್ಟುಕೊಂಡು ಇಂತಹ ವಿಭಜನಕಾರಿ ಹೆಜ್ಜೆ ಇರಿಸುವುದರಿಂದ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಕುರಿತು ಮತ್ತಷ್ಟು ಸವಾಲುಗಳು ಉದ್ಭವಿಸುತ್ತವೆ' ಎಂದಿದ್ದಾರೆ.

ಶ್ರೀಲಂಕಾದಲ್ಲಿ ಸೀತೆ ಇದ್ದ ವನದ ಕಲ್ಲು ಅಯೋಧ್ಯೆ ರಾಮ ಮಂದಿರಕ್ಕೆ ಆಮದು!

ಕಳೆದ ಮೂರು ದಿನಗಳ ಹಿಂದಷ್ಟೇ ಬುರ್ಖಾ ನಿಷೇಧದ ಬಗ್ಗೆ ಮಾತನಾಡಿದ್ದ ಶ್ರೀಲಂಕಾದ ಸಾರ್ವಜನಿಕ ಭದ್ರತಾ ಸಚಿವ ಶರತ್‌ ವೀರಶೇಖರ್ '‘ರಾಷ್ಟ್ರೀಯ ಭದ್ರತೆ ಉದ್ದೇಶಿದಿಂದ ಮುಸ್ಲಿಂ ಮಹಿಳೆಯರು ಮುಖವನ್ನು ಪೂರ್ತಿ ಮುಚ್ಚುವಂತೆ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಈ ಕುರಿತ ನಿರ್ಧಾರವನ್ನು ಸಚಿವ ಸಂಪುಟ ಅನುಮೋದಿಸಿದೆ’ ಎಂದಿದ್ದಾರೆ. ಇದೇ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಮದರಸಾಗಳು ವಿರುದ್ಧವಾಗಿರುವುದರಿಂದ ಇಸ್ಲಾಮಿಕ್‌ ಶಾಲೆಗಳನ್ನೂ ರದ್ದು ಮಾಡಲಾಗಿದೆ ಎಂದಿದ್ದರು. 

click me!