
ಲಂಡನ್ (ಸೆ.13) ಅನಾರೋಗ್ಯದಿಂದ ಆಸ್ಪತ್ರೆ ದಾಖಲಾದ ರೋಗಿಗೆ ಸರ್ಜರಿ ಮಾಡಲು ಎಲ್ಲಾ ತಯಾರಿ ಮಾಡಲಾಗಿತ್ತು. ವೈದ್ಯ ಕೂಡ ಸರ್ವ ತಯಾರಿಯೊಂದಿಗೆ ಆಪರೇಶನ್ ಥೀಯೇಟರ್‌ಗೆ ಹಾಜರಾಗಿದ್ದಾರೆ. ರೋಗಿಗೆ ಅನಸ್ತೇಶಿಯಾ ನೀಡಿ ಆಪರೇಶನ್ ಆರಂಭಗೊಂಡಿತ್ತು. ಸರ್ಜರಿ ಆರಂಭಗೊಂಡ ಕೆಲವೇ ನಿಮಿಷದಲ್ಲಿ ವೈದ್ಯ ಎಲ್ಲವನ್ನೂ ಅರ್ಧಕ್ಕೆ ಬಿಟ್ಟು ಆಪರೇಶನ್ ಥಿಯೇಟರ್‌ನಿಂದ ಹೊರಬಂದಿದ್ದಾನೆ. ಮತ್ತೊಂದು ವಾರ್ಡ್‌ನ ಆಪರೇಶನ್ ಥಿಯೇಟರ್‌ನಲ್ಲಿದ್ದ ಮಹಿಳಾ ನರ್ಸ್ ಜೊತೆ ಸರಸಕ್ಕಾಗಿ ತೆರಳಿದ ವಿಚಿತ್ರ ಘಟನೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿರುವ ಟೇಮ್‌ಸೈಡ್ ಆಸ್ಪತ್ರೆಯಲ್ಲಿ ನಡಿದಿದೆ.
ಪಾಕಿಸ್ತಾನದ ಮೂಲದ ವೈದ್ಯ ಸುಹೈಲ್ ಅಂಜುಮ್ ಈ ಶೂರ ಡಾಕ್ಟರ್. ಈ ಪ್ರಕರಣ ಕುರಿತು ಇಂಗ್ಲೆಂಡ್ ಜನರಲ್ ಮೆಡಿಕಲ್ ಕೌನ್ಸಿಲ್ ತೀವ್ರ ಆಕ್ರೋಶ ಹೊರಹಾಕಿದೆ. ಡಾ. ಸುಹೈಲ್ ಅಂಜುಮ್ ತಪ್ಪಿತಸ್ಥ ಎಂದು ಆತಂರಿಕ ತನಿಖಾ ವರದಿಯಲ್ಲಿ ಹೇಳಿದೆ. ಶಿಕ್ಷೆ ಪ್ರಮಾಣವನ್ನೂ ಪ್ರಕಟಿಸಲಿದೆ. ಈ ಘಟನೆ ವೈದ್ಯಲೋಕವೇ ತಲೆತಗ್ಗಿಸುವಂತೆ ಮಾಡಿದೆ ಎಂದು ಅಭಿಪ್ರಾಯಪಟ್ಟಿದೆ.
ರೋಗಿಗೆ ಇಂಜೆಕ್ಷನ್ ನೀಡಿ ಸರ್ಜರಿ ಮಾಡಲು ಮುಂದಾಗಿದ್ದಾರೆ. ಅನಸ್ತೇಶಿಯಾ ನೀಡಿದ ಕೆಲ ಹೊತ್ತಿನ ಬಳಿಕ ಸರ್ಜರಿ ಆರಂಭಗೊಂಡಿತ್ತು. ಅರ್ಧ ಗಂಟೆಗಳ ಕಾಲ ನಡೆಬೇಕಿದ್ದ ಸರ್ಜರಿ ಅತ್ಯಂತ ಪ್ರಮುಖವಾಗಿತ್ತು. ಇದರ ನಡುವೆ ವೈದ್ಯ ಸುಹೈಲ್ ಪಕ್ಕದ ವಾರ್ಡ್‌ನ ಮಹಿಳಾ ನರ್ಸ್ ಜೊತೆ ಚಾಟಿಂಗ್, ಪೋನ್ ಕಾಲ್‌ನಲ್ಲಿ ಬ್ಯೂಸಿಯಾಗಿದ್ದರು. ವೈದ್ಯ ಸುಹೈಲ್ ಅಂಜುಮ್ ಸರ್ಜರಿ ಆರಂಭಿಸಿದ ಕೆಲ ನಿಮಿಷಗಳಲ್ಲೇ ನಿಲ್ಲಿಸಿದ್ದಾರೆ. ಕಾರಣ ಮಹಿಳಾ ನರ್ಸ್ ಪಕ್ಕದ ವಾರ್ಡ್‌ನಲ್ಲೇ ಇದ್ದಾಳೆ ಅನ್ನೋದು ಗೊತ್ತಾಗಿದೆ. ಇತ್ತ ಸರ್ಜರಿ ಮಾಡುತ್ತಿದ್ದ ಥಿಯೇಟರ್‌ನಲ್ಲಿದ್ದ ನರ್ಸ್‌ಗೂ ಏನೂ ಹೇಳದ ವೈದ್ಯ ನೇರವಾಗಿ ಆಪರೇಶನ್ ಥಿಯೇಟರ್‌ನಿಂದ ಹೊರಬಂದಿದ್ದಾರೆ.
3 ವರ್ಷದಿಂದ ಈ ಲೇಡಿ ಕೆಲಸಕ್ಕೆ ಚಕ್ಕರ್! ಇಲ್ಲಿ ಸರ್ಕಾರಿ ಡಾಕ್ಟರ್, ಕೆನಡಾದಲ್ಲಿ ಫಿಲ್ಮ್ ಮೇಕರ್!
ರೋಗಿಯ ಸರ್ಜರಿ ಅರ್ಧಕ್ಕೆ ಬಿಟ್ಟು ವೈದ್ಯ ಅಂಜುಮ್ ನೇರವಾಗಿ ಪಕ್ಕದ ಆಪರೇಶನ್ ಥಿಯೇಟರ್‌ನತ್ತ ತೆರಳಿದ್ದಾರೆ. ಇತ್ತ ಸರ್ಜರಿ ಮಾಡುತ್ತಿದ್ದ ಆಪರೇಶನ್ ಥಿಯೇಟರ್‌ನಲ್ಲಿದ್ದ ನರ್ಸ್ ಗಾಬರಿಗೊಂಡಿದ್ದಾರೆ. ಕೆಲ ಹೊತ್ತಾದರೂ ವೈದ್ಯರು ವಾಪಸ್ ಬರಲಿಲ್ಲ. ಇತ್ತ ರೋಗಿಯ ಸರ್ಜರಿ ಅರ್ಧದಲ್ಲಿದೆ. ಹೀಗಾಗಿ ನರ್ಸ್ ವೈದ್ಯರ ಹುಡುಕಾಡಲು ಆರಂಭಿಸಿದ್ದಾರೆ. ಆಪರೇಶನ್ ರೂಂನಿಂದ ಹೊರಬಂದ ನರ್ಸ್ ವೈದ್ಯರ ವಿಚಾರಿಸಿದ್ದಾರೆ. ಈ ವೇಳೆ ಪಕ್ಕದ ವಾರ್ಡ್‌ಗೆ ತೆರಳಿರುವ ಮಾಹಿತಿ ನೀಡಿದ್ದಾರೆ. ವೈದ್ಯರ ಹುಡುಕುತ್ತಾ ಹೋದ ನರ್ಸ್ ಎಲ್ಲೆಡೆ ಹುಡುಕಿದ್ದಾರೆ. ಇತ್ತ ಸ್ಪೆಷಲ್ ವಾರ್ಡ್ ಪಕ್ಕದಲ್ಲೇ ಇರುವ ಕೊಠಡಿಯಿಂದ ಮಹಿಳಾ ನರ್ಸ್ ವಿಚಿತ್ರ ಶಬ್ದ ಕೇಳಿಸಿದ ಕಾರಣ ಹೋಗಿ ನೋಡಿದ್ದಾರೆ. ಸ್ಪೆಷಲ್ ವಾರ್ಡ್ ಒಳಹೊಕ್ಕ ನರ್ಸ್‌ಗೆ ಅಚ್ಚರಿಯಾಗಿದೆ. ತಾನು ಹುಡುಕುತ್ತಿದ್ದ ವೈದ್ಯ ಹಾಗೂ ಮಹಿಳಾ ನರ್ಸ್ ಜೊತೆಯಾಗಿ ಬೆಡ್ ಮೇಲಿರುವದ ದೃಶ್ಯ ನೋಡಿದ್ದಾಳೆ. ಬಳಿಕ ಆಸ್ಪತ್ರೆ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.
ಈ ಘಟನೆ ನಡೆದಿರುವುದು 2023ರಲ್ಲಿ. ಆಸ್ಪತ್ರೆ ಟ್ರಿಬ್ಯೂನಲ್ ಬೋರ್ಡ್ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿತ್ತು. ಬಳಿಕ ತನಿಖೆ ನಡೆಸಿ ಇದೀಗ ವರದಿ ನೀಡಿದೆ. ತನಿಖೆಯಲ್ಲಿ ವೈದ್ಯ ಸುಹೈಲ್ ಅಂಜುಮ್ ತಪ್ಪೊಪ್ಪಿಕೊಂಡಿದ್ದಾನೆ. ಮುಂದೆ ಈ ರೀತಿ ತಪ್ಪು ಮಾಡುವುದಿಲ್ಲ. ಒತ್ತಡದ ಸಮಯದಲ್ಲಿ ರಿಲ್ಯಾಕ್ಸ್‌ಗಾಗಿ ಈ ರೀತಿ ಮಾಡಿದ್ದೇನೆ. ಯುಕೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾನೆ.
ಫಿಸಿಯೋಥೆರಪಿಸ್ಟ್‌ಗಳು ಇನ್ಮುಂದೆ ತಮ್ಮ ಹೆಸರಿನ ಹಿಂದೆ 'ಡಾಕ್ಟರ್' ಎಂದು ಬಳಸುವಂತಿಲ್ಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ