ಲಂಡನ್(ಮಾ.31): 1780ರಲ್ಲಿ ಬ್ರಿಟಿಷ್‌ರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಪೊಲ್ಲಿಲುರು ಕದನದಲ್ಲಿ ಐತಿಹಾಸಿಕ ಜಯಗಳಿಸಿದ ಮೈಸೂರಿನ ಹೈದರಾಲಿ ಹಾಗೂ ಅವರ ಪುತ್ರ ಟಿಪ್ಪು ಸುಲ್ತಾನ್ ವರ್ಣಚಿತ್ರವನ್ನು ಲಂಡನ್‌ನಲ್ಲಿ ಬುಧವಾರ ಹರಾಜು ಹಾಕಲಾಯಿತು.
ಸಪ್ಟೆಂಬರ್ 10, 1780ರಂದು ಎರಡನೇ ಆಂಗ್ಲೋ ಮೈಸೂರು ಯುದ್ಧದ ಭಾಗವಾಗಿ ನಡೆದ ಪೊಲ್ಲಿಲುರು ಕದನದಲ್ಲಿ ಹೈದರಾಲಿ ಹಾಗೂ ಟಿಪ್ಪು ಜಯ ಸಾಧಿಸಿದ್ದರು. ತಮ್ಮ ವಿಜಯದ ಸ್ಮರಣಾರ್ಥವಾಗಿ ಟಿಪ್ಪು ಸುಲ್ತಾನ್ ಶ್ರೀರಂಗಪಟ್ಟಣನಲ್ಲಿ ದರಿಯಾ ದೌಲತ್ ಬಾಗ್‌ನಲ್ಲಿ ವರ್ಣಚಿತ್ರವನ್ನು ಬಿಡುಗಡೆ ಮಾಡಿದ್ದರು. ಈ ಚಿತ್ರವು ಲಂಡನ್‌ನ ಪ್ರಾಚೀನ ವಸ್ತುಗಳ ಹರಾಜು ಪ್ರಕ್ರಿಯೆ ನಡೆಸುವ ಸ್ಥಳವಾದ ಸೊಥೆಬಿಯಲ್ಲಿ 6.28 ಕೋಟಿ ರು. (630,000 ಪೌಂಡ್)ಗೆ ಮಾರಾಟವಾಗಿದೆ.
ಸೊಥೆಬಿ ತಜ್ಞ ವಿಲಿಯಂ ಡಾಲ್ರಿಂಪ್ಲೇ ‘ಈ ವರ್ಣಚಿತ್ರವು ವಸಾಹತುವಾದದ ಮೇಲೆ ಭಾರತದ ವಿಜಯವನ್ನು ತೋತಿಸುವ ವಿಶಿಷ್ಟಕಲಾಕೃತಿಯಾಗಿದೆ. ಯುರೋಪಿಯನ್ನ ಸೇನೆಯು ಭಾರತದ ನೆಲದಲ್ಲಿ ಮೊದಲ ಬಾರಿ ಸೋತಿದ್ದು ಪೊಲ್ಲಿಲೂರು ಕದನದಲ್ಲೇ. ಈ ಮೂಲಕ ಟಿಪ್ಪು ಸುಲ್ತಾನ್ ಭಾರತೀಯರು ಹೋರಾಡಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದರು’ ಎಂದು ಚಿತ್ರದ ಮಹತ್ವವನ್ನು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ